HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಸವಾಕ್ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ ಮತ್ತು ಮಹಿಳಾ ಸಮಾವೇಶ
   ಮಂಜೇಶ್ವರ: ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್ ಕೇರಳ(ಸವಾಕ್) ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ ಹಾಗೂ ಮಹಿಳಾ ಸಮಾವೇಶ ಸೆ. 9 ರಂದು ಭಾನುವಾರ ಬೆಳಿಗ್ಗೆ 10 ರಿಂದ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಗಿಳಿವಿಂಡಿನ ಸಮೀಪದಲ್ಲಿರುವ ಕಲಾ ಸ್ಪರ್ಶಂ ಅಕಾಡೆಮಿ ಸಭಾಂಗಣದಲ್ಲಿ ನಡೆಯಲಿದೆ.
   ಸವಾಕ್ ರಾಜ್ಯ ಅಧ್ಯಕ್ಷ ಆಲಿಯಾರ್ ಪುನ್ನಪ್ರ ಉದ್ಘಾಟಿಸುವರು. ರಾಜ್ಯ ಪ್ರಧಾನ ಕಾರ್ಯದಶರ್ಿ ಸುದರ್ಶನ ವರ್ಣ ಪ್ರಧಾನ ಭಾಷಣ ಮಾಡುವರು. ರಾಜ್ಯ ಜೊತೆ ಕಾರ್ಯದಶರ್ಿ ವಿನೋದ್ ಕುಮಾರ್ ಅಚುಂಬಿತ ಕಲಾವಿದ ಮತ್ತು ಸಂಘಟನೆಯ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡುವರು. ರಾಜ್ಯ ಸಮಿತಿ ಉಪಾಧ್ಯಕ್ಷ ರಾಜೇಶ್ ಪಾಲಂಗಾಡ್, ಜೊತೆ ಕಾರ್ಯದಶರ್ಿ ನ್ಯಾಯವಾದಿ ಪಿ.ಪಿ. ವಿಜಯನ್, ರಾಜ್ಯ ಮಹಿಳಾ ಸಮಿತಿ ಅಧ್ಯಕ್ಷೆ ಬಿಂದು ಸಜಿತ್ ಕುಮಾರ್, ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಕಾರಡ್ಕ, ಮಂಜೇಶ್ವರ ವಲಯಾಧ್ಯಕ್ಷ ಪ್ರಮೋದ್ ಪಣಿಕ್ಕರ್, ಕಾಸರಗೋಡು ವಲಯಾಧ್ಯಕ್ಷ ಸನ್ನಿ ಅಗಸ್ಟಿನ್, ಕಾರಡ್ಕ ವಲಯಾಧ್ಯಕ್ಷ ಮಧುಸೂದನ ಬಲ್ಲಾಳ್, ಕಾಂಞಿಂಗಾಡ್ ವಲಯಾಧ್ಯಕ್ಷ ಗೋವಿಂದನ್ ಮಾರಾರ್ ಉಪಸ್ಥಿತರಿದ್ದು ಮಾತನಾಡುವರು.
  ಅಪರಾಹ್ನ 1.30 ರಿಂದ ಮಹಿಳಾ ಸಮಾವೇಶ ನಡೆಯಲಿದೆ. ಜಯಶ್ರೀ ಕಾರಡ್ಕ, ಜಯಂತಿ ಸುವರ್ಣ, ಸುಶ್ಮಿತಾ ಆರ್. ಕುಂಬಳೆ ಮೊದಲಾದವರು ನೇತೃತ್ವ ವಹಿಸುವರು. ಬಳಿಕ ಮುಖ್ಯಮಂತ್ರಿಗಳ ನೆರೆ ದುರಂತ ಪರಿಹಾರ ನಿಧಿಗೆ ಸವಾಕ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಂಗ್ರಹಿಸಿದ ನಿಧಿಯನ್ನು ಸಮಪರ್ಿಸಲಾಗುವುದು ಎಂದು ಸವಾಕ್ ಜಿಲ್ಲಾಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries