ಸೌಮ್ಯಾ ಪ್ರಸಾದ್ ಅವರ ಕವನಕ್ಕೆ ಪ್ರಥಮ
ಕಾಸರಗೋಡು: ಪುತ್ತೂರು ಸವಣೂರಿನ ವರುಣ್ ಆಟರ್್ ಗ್ಯಾಲರಿ ಇವರು 'ಹೆಣ್ಣು ಬಂಗಾರದ ಕಣ್ಣು' ಎಂಬ ಶರ್ೀಕೆಯಲ್ಲಿ ನಡೆಸಿದ ರಾಜ್ಯಮಟ್ಟದ ಕವನ ಸ್ಪಧರ್ೆಯಲ್ಲಿ, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರದ, ಸಂಶೋಧನ ವಿದ್ಯಾಥರ್ಿ ಹಾಗೂ ಕವಯತ್ರಿ ಸೌಮ್ಯಾ ಪ್ರಸಾದ್ ನಾಯ್ಕಾಪು ಅವರ ಕವನ 'ಕವಿತೆಯಾಗಲಿ ಪದಗಳೆಲ್ಲ' ಕವನಕ್ಕೆ ಪ್ರಥಮ ಬಹುಮಾನ ಲಭಿಸಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಂದ ಒಟ್ಟು ನೂರಿಪ್ಪತ್ತು ಕವನಗಳು ಸ್ಪಧರ್ೆಗೆ ಬಂದಿದ್ದು ಇವುಗಳಲ್ಲಿ ಸೌಮ್ಯಾ ಅವರು ಬರೆದ ಕವನಕ್ಕೆ ಮೊದಲ ಸ್ಥಾನ ಲಭಿಸಿದೆ. ದ್ವಿತೀಯ ಸ್ಥಾನವನ್ನು ಅಕ್ಷಯ ಆರ್ ಶೆಟ್ಟಿ ಕೊಂಚಾಡಿ ಇವರ ಮತ್ತದೇ ಉಪಮೆಯೊಳಗೆ ಕವನ ಪಡೆದುಕೊಂಡಿದೆ.
ಪ್ರಥಮ ದ್ವಿತೀಯ ಬಹುಮಾನಗಳಲ್ಲದೆ ಐದು ಕವಿತೆಗಳು ಗೌರವ ಬಹುಮಾನಕ್ಕೆ ಪಾತ್ರವಾಗಿವೆ. ವಿ.ಬಿ ಕುಳಮರ್ವ ಅವರ 'ಹೆಣ್ಣೆಂದರೆ..', ಲತಾ ಆಚಾರ್ಯ ಬನಾರಿಯವರ 'ಅಮ್ಮ ಹೇಳಿದ ಬುದ್ಧಿ ಮಾತು', ಶಾಂತಾ ರವಿ ಕುಂಟಿನಿಯವರ 'ಹೆಣ್ಣು ಬಂಗಾರದ ಕಣ್ಣು', ಅಶ್ವಿನಿ ಕೋಡಿಬೈಲು ಅವರ ಕವಿತೆ ಹಾಗೂ ಶ್ಯಾಮಲಾ ರವಿರಾಜ್ ಕುಂಬಳೆ ಇವರ 'ಹೆಣ್ಣು ಬಂಗಾರದ ಕಣ್ಣು' ಕವಿತೆಗಳು ಗೌರವ ಬಹುಮಾನಗಳಿಗೆ ಪಾತ್ರವಾಗಿವೆ.
ಸ್ಪಧರ್ೆಗೆ ಬಂದ ನೂರಿಪ್ಪತ್ತು ಕವನಗಳನ್ನು ಸಂಕಲನ ರೂಪದಲ್ಲಿ ಪ್ರಕಟಿಸುವ ಯೋಜನೆುದೆಯೆಂದು ಸಂಘಟಕರು ತಿಳಿಸಿದ್ದಾರೆ. ಬಹುಮಾನ ವಿಜೇತರಿಗೆ ಸೆಪ್ಟಂಬರ 30 ರಂದು ಸವಣೂರಿನ ವಿನಾಯಕ ಸಭಾಭವನದಲ್ಲಿ ನಡೆಯುವ 'ಸವಣೂರು ಕಲಾ - ಕಾವ್ಯ ಸಮ್ಮೇಳನದಲ್ಲಿ ಬಹುಮಾನ ವಿತರಣೆ ನಡೆಯಲಿರುವುದು. ಇದೇ ಸಂದರ್ಭದಲ್ಲಿ, ರಾಜ್ಯಮಟ್ಟದ ಕವಿಗೋಷ್ಠಿ, ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನವೂ ನಡೆಯಲಿದೆ.
ಸ್ಪಧರ್ೆಯಲ್ಲಿ ಮೊದಲ ಬಹುಮಾನ ಪಡೆದ ಸೌಮ್ಯಾ ಪ್ರಸಾದ್ ಅವರು ಈಗಾಗಲೇ ಕವಯತ್ರಿಯಾಗಿ, ಅಂಕಣಕಾರರಾಗಿ ಗುರುತಿಸಿಕೊಂಡವರು. 'ಸಂಚಯ' ಮಾಸಿಕ ನಡೆಸಿದ ರಾಜ್ಯಮಟ್ಟದ ವಿಮಶರ್ಾ ಸ್ಪಧರ್ೆ ಮತ್ತು 'ಹೊಸದಿಗಂತ ದೀಪಾವಳಿ ವಿಶೇಷಾಂಕ'ದ ಕಥಾಸ್ಪಧರ್ೆಗಳಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಈ ಹಿಂದೆ ಪಡೆದಿದ್ದರು. ಇವರ 'ವಾಮನನ ಬೆರಗು' ಚೊಚ್ಚಲ ಕವನ ಸಂಕಲನವು ಕನರ್ಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಧನಸಹಾಯ ಯೋಜನೆಯಡಿ ಪ್ರಕಟಗೊಂಡ ಕೃತಿ. ಉದಯವಾಣಿ, ಮಯೂರ, ಹೊರನಾಡ ಕನ್ನಡಿಗ, ಸಂಕ್ರಮಣ, ಸಂಕ್ರಾತಿ ಮುಂತಾದ ದಿನಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಇವರ ಸೃಜನಶೀಲ, ಸೃಜನೇತರ ಬರಹಗಳು ಪ್ರಕಟವಾಗಿವೆ. ಮಂಗಳೂರು ಆಕಾಶವಾಣಿಯಿಂದ ಇವರ ಕವನಗಳು, ಪ್ರಬಂಧಗಳು ಪ್ರಸಾರವಾಗಿವೆ. ಕಾಸರಗೋಡಿನ 'ಉತ್ತರದೇಶ ಕನ್ನಡ' ಪತ್ರಿಕೆಯಲ್ಲಿ ಇವರ ಅಂಕಣ 'ಮನಸಿನ ಮಾತು' ನೂರು ಕಂತುಗಳಲ್ಲಿ ಪ್ರಕಟವಾಗಿತ್ತು. ಭಾಷೆ, ಸಾಹಿತ್ಯ ಮತ್ತು ವಿಮಶರ್ೆ ಈ ಕ್ಷೇತ್ರಗಳಲ್ಲಿ ಬರವಣಿಗೆಯನ್ನು ಮುಂದುವರಿಸುತ್ತಿರುವ ಇವರು ಹಲವು ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ ಮಾಡಿರುತ್ತಾರೆ. ಯಕ್ಷನುಡಿಸರಣಿ, ಉದ್ಯೋಗ ಮಾಹಿತಿ ಶಿಬಿರ, ಕನ್ನಡ ಕಂದನ ಸಿರಿಚಂದನ ಗಿಡ ಯೋಜನೆ ಈ ಮುಂತಾದ ಕ್ರಿಯಾತ್ಮಕ ಕನ್ನಡ ಕಾರ್ಯಗಳಿಂದ ಈಗಾಗಲೇ ಗುರುತಿಸಿಕೊಂಡಿರುವ ಸಿರಿಚಂದನ ಕನ್ನಡ ಯುವಬಳಗ ಸಂಸ್ಥೆಯ ಜೊತೆಕಾರ್ಯದಶರ್ಿಯಾಗಿ ಕ್ರಿಯಾತ್ಮಕವಾದ ಕನ್ನಡ ಕೈಂಕರ್ಯಗಳಲ್ಲೂ ಸೌಮ್ಯಾ ಪ್ರಸಾದ್ ದುಡಿಯುತ್ತಿದ್ದಾರೆ. ಸೌಮ್ಯಾ ಅವರು ಕ್ಯಾಂಪ್ಕೊ ಉದ್ಯೋಗಿಯಾಗಿರುವ ಪ್ರಸಾದ್ ಕಿಳಿಂಗಾರರ ಪತ್ನಿ. ಕಾವ್ಯಕ್ಷೇತ್ರದ ಇವರ ಸಾಧನೆಗೆ ಸಿರಿಚಂದನ ಕನ್ನಡ ಯುವಬಳಗವು ಅಭಿನಂದನೆಯನ್ನು ಸಲ್ಲಿಸಿದೆ.