ಸಮಾಜದಿಂದ ಪಡೆದುದನ್ನು ಸಮಾಜಕ್ಕೇ ಧಾರೆಯೆರೆಯಿರಿ- ಶಾಸಕ ಎನ್.ಎ.ನೆಲ್ಲಿಕುನ್ನು
ಪುನರ್ನವ ಟ್ರಸ್ಟಿನಿಂದ ಪ್ರತಿಭಾವಂತ ಬಡ ವಿದ್ಯಾಥರ್ಿಗಳಿಗೆ ಧನ ಸಹಾಯ
ಕಾಸರಗೋಡು: ಸಮಾಜಮುಖೀ ಚಿಂತನೆಗಳುಳ್ಳ ಸಂಘಟನೆಗಳು ಪ್ರತಿಭಾವಂತ ಬಡ ವಿದ್ಯಾಥರ್ಿಗಳಿಗೆ ದಾರಿದೀಪವಾಗುತ್ತಿರುವುದು ಶ್ಲಾಘನೀಯ. ತಮ್ಮ ದುಡಿಮೆಯ ಒಂದಂಶವನ್ನು ಸಮಾಜದ ಅಭ್ಯುದಯದ ಚಿಂತನೆಯಿಂದ ಬಳಸಿಕೊಂಡು ಪುನರ್ನವ ಸಂಸ್ಥೆ ನೀಡುತ್ತಿರುವ ಸಹಾಯವನ್ನು ವಿದ್ಯಾಥರ್ಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯಪಟ್ಟರು.
ಕಾಸರಗೋಡು ಪುನರ್ನವ ಟ್ರಸ್ಟಿನ ನೇತೃತ್ವದಲ್ಲಿ ಕಾಸರಗೋಡು ಹೊಸಬಸ್ ನಿಲ್ದಾಣ ಸಮೀಪದ ಸ್ಪೀಡ್ ವೇ ಇನ್ ಸಭಾಂಗಣದಲ್ಲಿ ಭಾನುವಾರ ನಡೆದ ಆಥರ್ಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಥರ್ಿಗಳಿಗೆ ಶೈಕ್ಷಣಿಕ ಧನಸಹಾಯ ಮತ್ತು ಶೈಕ್ಷಣಿಕ ಪರಿಕರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡ ವಿದ್ಯಾಥರ್ಿಯೊಬ್ಬ ಅತ್ಯುತ್ತಮವಾಗಿ ಶೈಕ್ಷಣಿಕ ವರ್ಷವನ್ನು ಸದುಪಯೋಗಪಡಿಸಿ ವಿದ್ಯೆಯನ್ನು ಪಡೆದಲ್ಲಿ ವಿದ್ಯಾಥರ್ಿಯ ಕುಟುಂಬ ಅಭಿವೃದ್ಧಿಯನ್ನು ಕಾಣುವುದರ ಜತೆಗೆ ಸಮಾಜದ ಅಭಿವೃದ್ಧಿಯೂ ಸಾಧ್ಯ. ವಿದ್ಯಾವಂತನಾಗುವುದರ ಜತೆಗೆ ಜಾತಿ ಮತ ಬೇಧವನ್ನು ಮರೆತು ಎಲ್ಲರೂ ಪರಸ್ಪರ ಪ್ರೀತಿಯಿಂದ ಬದುಕು ನಡೆಸುವಂತಾಗಬೇಕು ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಅರವಿಂದ ಕೃಷ್ಞನ್ ಅವರು ಭಾಗವಹಿಸಿ ಮಾತನಾಡಿ, ಪುನರ್ನವ ಸಂಸ್ಥೆ ಹೆಸರೇ ಸೂಚಿಸುವಂತೆ ವರ್ಷದಿಂದ ವರ್ಷಕ್ಕೆ ಪುನರ್ ನವೀಕರಣಗೊಳ್ಳುವುದರ ಜತೆಗೆ ಸಮಾಜವನ್ನೂ ಹೊಸತಾಗಿ ನಿಮರ್ಿಸಲು ಪ್ರಯತ್ನ ನಡೆಸುತ್ತಿದೆ. ಹಸಿವಾದವನಿಗೆ ಅನ್ನ ನೀಡುವುದರ ಜತೆಗೆ ಜೀವನದ ಉದ್ದಕ್ಕೂ ಹಸಿವನ್ನು ನೀಗಿಸುವ ಜ್ಞಾನವನ್ನು ಒದಗಿಸುವ ಕೈಕಂರ್ಯ ಶ್ರೇಷ್ಟವಾದುದು. ಜ್ಞಾನವೆಂಬ ಉಡುಗೊರೆಯನ್ನು ಪುನರ್ನವ ಸಂಸ್ಥೆ ನೀಡುತ್ತಿರುವುದು ಪ್ರಶಂಸನೀಯ ಎಂದು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಕೆ. ಆರ್, ಹಾಗೂ ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಇದರ ಉಪಾಧ್ಯಕ್ಷ ಪ್ರಶಾಂತ ಹೊಳ್ಳ ಉಪಸ್ಥಿತರಿದ್ದು ಶುಭ ಹಾರೈಸಿದರು. ಪುನರ್ನವ ಟ್ರಸ್ಟ್ ಸದಸ್ಯ ನವೀನ ಪಟ್ರಮೆ ಭಾಗವಹಿಸಿದರು.
ಈ ಸಂದರ್ಭ ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಮಾಧ್ಯಮ ಶಾಲೆಗಳ 43 ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಶೈಕ್ಷಣಿಕ ಧನಸಹಾಯ ಮತ್ತು ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ಸರಕಾರಿ ಕಾಲೇಜಿನ ವಿದ್ಯಾಥರ್ಿನಿ ರಮ್ಯಶ್ರೀ ಅಂಬಕಾನ ಹಾಗೂ ಅಂಕಿತಾ.ಎಂ.ಇವರಿಂದ ಭಾವಗಾಯನ ನಡೆಯಿತು.
ಅನುರಾಧಾ ಕೆ, ವೃಂದಾ ಬಿ.ಜಿ, ಸುನೀತಾ ಮಯ್ಯ ಪ್ರಾರ್ಥನೆ ಹಾಡಿದರು. ಪುನರ್ನವ ಸಂಸ್ಥೆಯ ಸದಸ್ಯ ಪ್ರವೀಣ ಬೈಕುಂಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಸದಸ್ಯ ನವೀನ ಎಲ್ಲಂಗಳ ಸ್ವಾಗತಿಸಿ, ಇನ್ನೋರ್ವ ಸದಸ್ಯ ಡಾ.ಸಂತೋಷ್ ಗುಡ್ಡೇರ ವಂದಿಸಿದರು. ಸಂಸ್ಥೆಯ ಸದಸ್ಯ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು.