ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಪಕ್ಷಪಾತ ನೀತಿ: ಬಿಜೆಪಿ ಹೋರಾಟಕ್ಕೆ
ತಿರುವನಂತಪುರ: ಕೇರಳದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ವಿಷಯದಲ್ಲಿ ರಾಜ್ಯದ ಎಲ್ಡಿಎಫ್ ಸರಕಾರವು ಪಕ್ಷಪಾತ ನೀತಿ ಅನುಸರಿಸುತ್ತಿದೆ ಮತ್ತು ಪರಿಹಾರದ ವಿತರಣೆ ಅವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಅಂತಹ ಧೋರಣೆಯ ವಿರುದ್ಧ ಬೃಹತ್ ಹೋರಾಟ ನಡೆಸಲು ಬಿಜೆಪಿ ರಾಜ್ಯ ಸಮಿತಿಯು ನಿರ್ಧರಿಸಿದೆ. ಅದರಂತೆ ಸೆ.14ರಂದು ಬಿಜೆಪಿ ನೇತಾರರು ತಿರುವನಂತಪುರ ಸೆಕ್ರೆಟರಿಯೇಟ್ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಲಿದ್ದಾರೆ.
ಅಲ್ಲದೆ ಸೆ.17ರಂದು ಎಲ್ಲಾ ಜಿಲ್ಲಾ ಮಟ್ಟಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಸೆ.18ರಿಂದ 25ರ ತನಕ ಪಂಚಾಯತ್ ಮಟ್ಟಗಳಲ್ಲಿ ಸಂಜೆ ಧರಣಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ , ನ್ಯಾಯವಾದಿ ಪಿ.ಎಸ್.ಶ್ರೀಧರನ್ ಪಿಳ್ಳೆ ಅವರು ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ಕೇರಳದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪಿ.ಎಸ್.ಶ್ರೀಧರನ್ ಪಿಳ್ಳೆ ಅಲ್ಲದೆ ಪಕ್ಷದ ಪ್ರಮುಖರಾದ ಓ.ರಾಜಗೋಪಾಲ್, ಸಿ.ಕೆ.ಪದ್ಮನಾಭನ್, ಪಿ.ಕೆ.ಕೃಷ್ಣದಾಸ್ ನೇತೃತ್ವ ನೀಡುವ ನಾಲ್ಕು ಪ್ರತ್ಯೇಕ ತಂಡಗಳು ಸಂದಶರ್ಿಸಿ ಅಲ್ಲಿನ ಈಗಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲಿದ್ದಾರೆ. ಬಿಜೆಪಿ ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಇನ್ನಷ್ಟು ನೆರವು ನೀಡಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲು ತೀಮರ್ಾನಿಸಲಾಯಿತು.
ಕೇರಳದಲ್ಲಿ ವ್ಯಾಪಕವಾಗಿ ಇಲಿಜ್ವರ ಹರಡುತ್ತಿದ್ದರೂ, ಸಚಿವ ಸಂಪುಟದ ಸಭೆ ನಡೆಸಿ ಆ ಬಗ್ಗೆ ಚಚರ್ಿಸಿ ಅಂತಿಮ ನಿಧರ್ಾರವೊಂದನ್ನು ಕೈಗೊಳ್ಳಲು ರಾಜ್ಯದ ಎಡರಂಗ ಸರಕಾರವು ವಿಫಲವಾಗಿದೆ. ಹಸಿರು ಕೇರಳ ಇದೀಗ ನಾಥನಿಲ್ಲದ ಕೇರಳವಾಗಿ ಮಾರ್ಪಟ್ಟಿದೆ ಎಂದು ಪಿ.ಎಸ್.ಶ್ರೀಧರನ್ ಪಿಳ್ಳೆ ಕಟು ಟೀಕೆ ಮಾಡಿದರು.