ಹೊಸ ತಲೆಮಾರಿನ ವಿದ್ಯಾಥರ್ಿಗಳಿಗೆ ಹಿರಿಯ ಶಿಕ್ಷಕರ ವೃತ್ತಿ ಜೀವನ ಪರಿಚಯ ಅಗತ್ಯ : ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ .ವಿ
ಮಂಜೇಶ್ವರ: ನವಯುವಕ ಕಲಾವೃಂದ ಮತ್ತು ಗ್ರಂಥಾಲಯ ಚಿನಾಲ ಇದರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಭಾಗವಾಗಿ ಹಿರಿಯ ನಿವೃತ್ತ ಶಿಕ್ಷಕ ಮಿಂಜ ಗ್ರಾಮದ ತಲೆಕ್ಕೆ ನಿವಾಸಿಗಳಾದ ಶಾಮ ಭಟ್ ರವರಿಗೆ ಗೌರವಾರ್ಪಣೆ ಮಾಡಲಾಯಿತು.
ಹಿಂದಿನ ಶಿಕ್ಷಕರು ಯಾವ ರೀತಿಯಲ್ಲಿ ತಮ್ಮ ವಿದ್ಯಾದಾನವನ್ನು ಮಾಡುತ್ತಿದ್ದರು, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಕಾಲ್ನಡೆಯಿಂದಲೇ ಗಂಟೆ ಗಟ್ಟಲೆ ನಡೆದು ತರಗತಿಗೆ ಹಾಜರಾಗುತಿದ್ದರು. ಇಂದಿನ ಯುವ ಪೀಳಿಗೆಗೆ ಇದರ ಮಹತ್ವವನ್ನು ತಿಳಿಸಬೇಕಿದೆ. ಒಬ್ಬ ಶಿಕ್ಷಕನಿಂದ ಹಲವಾರು ವಿದ್ಯಾಥರ್ಿಗಳು ತಮ್ಮ ಜೀವನ ಶೈಲಿಯನ್ನು ತಿದ್ದುಕೊಳ್ಳಬಹುದು, ಗುರುಶಿಷ್ಯರ ಸಂಬಂಧ ಅಂದು ಹೆಚ್ಚು ಮಹತ್ವ ಪಡೆದಿತ್ತು, ಇಂದಿನ ಯುವ ಪೀಳಿಗೆ ಜನಾಂಗದಲ್ಲಿ ಗುರುಶಿಷ್ಯರ ಬಾಂಧವ್ಯ ಅಲ್ವ ಮಟ್ಟಿಗೆ ಕಡಿಮೆಯಾಗುತ್ತಿದೆ. ಇದನ್ನು ಬದಲಾಯಿಸಲು ಹಿರಿಯ ನಿವೃತ್ತಿ ಹೊಂದಿದ ಗುರುಗಳನ್ನು ಗುರುತಿಸಿ ಗೌರವಿಸಿ ಅವರ ವೃತ್ತಿ ಜೀವನ ಪರಿಚಯವನ್ನು ಯುವ ಪೀಳಿಗೆಗೆ ಮಾಡಬೇಕಿದೆ ಎಂದು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ ಗುರುವಂದನಾ ಕಾರ್ಯಕ್ರಮದನ್ನು ಉದ್ದೇಶಿಸಿ ಮಾತನಾಡಿದರು.
ಗ್ರಂಥಾಲಯ ಅಧ್ಯಕ್ಷ ಯೋಗೀಶ.ಕೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಜೊತೆ ಕಾರ್ಯದಶರ್ಿ ಡಿ. ಕಮಲಾಕ್ಷ, ನವಯುವಕ ಸಂಘದ ಅಧ್ಯಕ್ಷ ಮೋನಪ್ಪ ಪೂಜಾರಿ ಉಪಸ್ಥಿತರಿದ್ದು ಮಾತನಾಡಿದರು. ಸಮಿತಿ ಸದಸ್ಯರಾದ ಲೋಕೇಶ್.ಸಿ.ಯಚ್, ಕರುಣಾಕರ ದಾಸ್ ಉಪಸ್ಥಿತರಿದ್ದರು. ಕುಮಾರಿ ತ್ರಿಲತಾ ಗೌರವ ಪತ್ರ ವಾಚಿಸಿದರು. ಉದಯ ಸಿ ಯಚ್ ಸ್ವಾಗತಿಸಿ, ಗ್ರಂಥಾಲಯ ಕಾರ್ಯದಶರ್ಿ ಸಂದೀಪ್.ಕೆ ವಂದಿಸಿದರು.