ಸಮೃದ್ಧ ಜೀವಂತ ಕಲೆ ಯಕ್ಷಗಾನ : ವೆಂಕಟಕೃಷ್ಣ ಕಲ್ಲೂರಾಯ
ಮಧೂರು: ಪುರಾಣಗಳಲ್ಲಿರುವ ಸತ್ವಯುತ ಕಥಾಭಾಗವನ್ನು ಜನತೆಗೆ ಮುಟ್ಟಿಸುವ ಜೀವಂತ ಕಲೆ ಯಕ್ಷಗಾನ. ಈ ಕಲೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಜನತೆಗೆ ತಿಳಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಉತ್ತಮ ಸದ್ವಿಚಾರಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಲು ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಕಲೆಯನ್ನು ಉಳಿಸಿ ಬೆಳೆಸಿ ಉತ್ತುಂಗಕ್ಕೇರಿಸುವಲ್ಲಿ ಸರ್ವರೂ ಪ್ರಯತ್ನಿಸಬೇಕೆಂದು ವೇದಮೂತರ್ಿ ಬ್ರಹ್ಮಶ್ರೀ ವೆಂಕಟಕೃಷ್ಣ ಕಲ್ಲೂರಾಯ ಅವರು ಹೇಳಿದರು.
ಮಧೂರು ಶ್ರೀ ಬೊಡ್ಡಜ್ಜ ಯಕ್ಷಭಾರತಿ ಕಲಾ ಸಂಘದ ಎಂಟನೇ ವಾಷರ್ಿಕೋತ್ಸವದ ಅಂಗವಾಗಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಸಮೀಪದ ವೀಣಾವಿಹಾರ ನಿವಾಸದಲ್ಲಿ ಜರಗಿದ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನವನ್ನಿತ್ತು ಮಾತನಾಡಿದರು.
ಯಕ್ಷಗಾನ ಕಲಾವಿದೆ ಸುಧಾ ನಟರಾಜ ಕಲ್ಲೂರಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಕಲಾಸಂಘದ ಅಧ್ಯಕ್ಷ ಬಿ.ಬಾಲಕೃಷ್ಣ ಅಗ್ಗಿತ್ತಾಯ ಅಧ್ಯಕ್ಷತೆ ವಹಿಸಿದರು. ಕೆ.ಸತ್ಯನಾರಾಯಣ ತಂತ್ರಿ ಎಂ, ಬಾಲಚಂದ್ರ ಕಲ್ಲೂರಾಯ, ಉದಯಶಂಕರ ಭಟ್ ಮಜಲು, ಎಂ.ವಾಸುದೇವ ಕಲ್ಲೂರಾಯ, ವಾಮನ ಆಚಾರ್ ಬೋವಿಕ್ಕಾನ ಮೊದಲಾದವರು ಶುಭಹಾರೈಸಿದರು. ಪ್ರಧಾನ ಕಾರ್ಯದಶರ್ಿ ತಾರಾನಾಥ ಮಧೂರು ಸ್ವಾಗತಿಸಿ, ಎಂ.ನಟರಾಜ ಕಲ್ಲೂರಾಯ ಮಧೂರು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ `ಶ್ರೀ ಕೃಷ್ಣ ಲೀಲೆ - ಬಿಲ್ಲ ಹಬ್ಬ - ಕಂಸವಧೆ' ಎಂಬ ಕಥಾಭಾಗದ ಯಕ್ಷಗಾನ ತಾಳಮದ್ದಳೆ ಜರಗಿತು.