ದೀನ ದಯಾಳ್ ಉಪಾಧ್ಯಾಯ ಸಂಸ್ಮರಣೆ
ಪೆರ್ಲ:ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ, ಸಂಘಟನಾ ಚತುರ ಪಂಡಿತ ದೀನ್ ದಯಾಳ್ ಉಪಾಧ್ಯಾಯರ ಸಂಸ್ಮರಣಾ ಕಾರ್ಯಕ್ರಮ ಪೆರ್ಲದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಪಕ್ಷದ ಹಿರಿಯ ನೇತಾರ ಹರೀಶ್ಚಂದ್ರ ಆಚಾರ್ಯ ನಲ್ಕ ಮಾತನಾಡಿ, ಯಾವುದೇ ಪಂಗಡಕ್ಕೆ ಇಲ್ಲವೇ ಜನಾಂಗಕ್ಕೆ ಮೀಸಲಾಗದೆ ಇಡೀ ದೇಶದ ಸೇವೆಗೆ ಕಂಕಣಬದ್ಧರಾಗಿದ್ದ
ದೀನ ದಯಾಳ ಉಪಾಧ್ಯಾಯರು, ಜನ ಸಂಘದ ನೇತೃತ್ವ, ಏಕಾತ್ಮ ಮಾನವ ಸಂದೇಶದ ಬಗ್ಗೆ ತಿಳಿಸಿದರು. ದೇಶದ ಪ್ರತಿಯೋರ್ವನ ರಕ್ತ ಕಣಗಳಲ್ಲಿ, ಮಾಂಸ ಖಂಡಗಳಲ್ಲಿ ಭಾರತ ಮಾತೆಯು ಸಮ್ಮಿಳಿತಗೊಂಡಿದ್ದು, ಇಲ್ಲಿನ ಪ್ರತಿಯೋರ್ವ ಪ್ರಜೆಯೂ ನಾನು ಭಾರತ ಮಾತೆಯ ಪುತ್ರನೆಂಬ ಹೆಮ್ಮೆ ಉದಯಿಸುವವರೆಗೆ ವಿಶ್ರಾಂತಿ ಎಂಬುದೇ ಇಲ್ಲ ಎಂಬ ವ್ಯಕ್ತಿತ್ವ ಹೊಂದಿದ್ದರು. ಅವರ ಕನಸನ್ನು ನನಸು ಮಾಡುವಂತಹ ಭವ್ಯತೆಯ ಶ್ರದ್ಧೆ ಭಾರತೀಯ ನೆಲದಲ್ಲಿ ಇನ್ನೂ ಹೆಚ್ಚು ಅರಳ ಬೇಕಾಗಿದೆ. ಆದಷ್ಟು ಬೇಗ ಅದು ಸಾಧ್ಯವಾಗಲಿ ಎಂಬ ಆಶಯದೊಂದಿಗೆ ಆ ಮಹಾತ್ಮನನ್ನು ನಮಿಸೋಣ ಎಂದರು.
ಬಿಜೆಪಿ ಪಂಚಾಯಿತಿ ಸಮಿತಿ ಉಪಾಧ್ಯಕ್ಷ ರಮಾನಂದ ಎಡಮಲೆ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ವಿಶೇಷ ಆಹ್ವಾನಿತ ಸದಸ್ಯೆ ರೂಪವಾಣಿ ಆರ್. ಭಟ್ ಮಾತನಾಡಿದರು. ಬಿಜೆಪಿ ಪಂಚಾಯಿತಿ ಸಮಿತಿ ಕಾರ್ಯದಶರ್ಿ ಪದ್ಮಶೇಖರ ನೇರೋಳು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮಹಿಳಾ ಮೋಚರ್ಾ ಅಧ್ಯಕ್ಷೆ ಶ್ಯಾಮಲಾ ಆರ್.ಭಟ್ ವಂದಿಸಿದರು.ಜನ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು.