HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        ಸಾಂಸ್ಕೃತಿಕ ಚಟುವಟಿಕೆ ಒಗ್ಗೂಡಿಸುತ್ತದೆ-ಸಚಿವ ಇ.ಚಂದ್ರಶೇಖರನ್
                    ಎಡನೀರು ಮಠದಲ್ಲಿ ಟಿ.ಶಾಮ್ ಭಟ್ ಅಭಿನಂದನಾ ಸಮಾರಂಭ ಉದ್ಘಾಟಿಸಿದ ಸಚಿವರು
     ಬದಿಯಡ್ಕ: ಯಕ್ಷಗಾನ, ಸಂಗೀತ ಕಲೆಗಳು ಸಾಮಾಜಿಕ ಏಕತೆಗೆ ಶಕ್ತಿ ನೀಡುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳು ಜನರನ್ನು ಒಗ್ಗೂಡಿಸುವಲ್ಲಿ ಪ್ರಧಾನ ಪಾತ್ರವಹಿಸುವುದರ ಜೊತೆಗೆ ನಾಡಿನ ಶಾಂತ ಬದುಕಿಗೆ ಪ್ರೇರೇಪಿಸುವವ, ಕ್ರಿಯಾತ್ಮಕತೆಯೆಡೆಗೆ ಕೊಂಡೊಯ್ಯುವ ಸಾಮಥ್ರ್ಯದೊಂದಿಗೆ ಮಣ್ಣಿನ ಸತ್ವವನ್ನು ಪ್ರಚುರಪಡಿಸುತ್ತದೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಸವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಶನಿವಾರ ಶ್ರೀಮಠದಲ್ಲಿ ಆಯೋಜಿಸಲಾದ ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ.ಟಿ.ಶಾಮ್ ಭಟ್ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಕಲಾ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸುವ ಹಿರಿಯರನ್ನು ಸನ್ಮಾನಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದ್ದು, ಇತರರಿಗೆ ಮಾದರಿಯಾಗಿ ಪ್ರೇರಣೆ ನೀಡುವುದು ಎಂದು ಅವರು ತಿಳಿಸಿದರು. ಶ್ರೀಮದ್ ಎಡನೀರು ಮಠದ ಧಾಮರ್ಿಕ, ಸಾಮಾಜಿಕ, ಸಾಂಸ್ಕೃತಿಕ ಸೇವೆಯು ರಾಷ್ಟ್ರಮಟ್ಟದಲ್ಲೇ ಗುರುತಿಸುವಂತಾಗಿದ್ದು, ಈ ಕಾರಣದಿಂದ ಮಠದ ಪರಂಪರೆಗೆ ಬಲ ನೀಡಿದೆ ಎಂದು ಅವರು ಈ ಸಂದರ್ಭ ಶ್ಲಾಘಿಸಿದರು.
   ಶೃಂಗೇರಿ ಶ್ರೀಶಾರದಾಪೀಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆದರ್ಶ ವ್ಯಕ್ತಿಗಳಿಂದ ಸಮಾಜ ಪ್ರೇರಣೆ ಪಡೆಯುತ್ತದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನಗೈದು ಮಾತನಾಡಿ, ಜೀವನದಲ್ಲಿ ಮನುಷ್ಯ ಪ್ರಯತ್ನಗಳಿಂದ ಹುದ್ದೆ, ಅಂತಸ್ತು, ಸಂಪತ್ತುಗಳನ್ನು ಸಂಪಾದಿಸಬಹುದು. ಆದರೆ ಸತ್ ಚಾರಿತ್ರ್ಯ, ಸರಳತೆ ಮತ್ತು ಹೃದಯ ವೈಶಾಲ್ಯತೆಯನ್ನು ಮೈಗೂಡಿಸುವ ಸಾಮಥ್ರ್ಯ ನಿಜವಾದ ಸಂಪಾದನೆಯಾಗಿದ್ದು, ಶಾಮ ಭಟ್ ಅಂತಹ ಅಪೂರ್ವ ವ್ಯಕ್ತಿತ್ವದವರು ಎಂದು ತಿಳಿಸಿದರು. ಸಜ್ಜನಿಕೆ, ಸರಳತೆಗಳು ಜೀವನದಲ್ಲಿ ಎತ್ತರಕ್ಕೊಯ್ಯುವ ಪ್ರಧಾನ ಮೆಟ್ಟಲುಗಳು ಎಂದು ತಿಳಿಸಿದ ಅವರು ನಿರಾಂಡಬರದ ಬದುಕು ನೆಮ್ಮದಿಯೊಂದಿಗೆ ಮುನ್ನಡೆಸುತ್ತದೆ ಎಂದು ತಿಳಿಸಿದರು.
   ಸಮಾರಂಭದಲ್ಲಿ ಕನರ್ಾಟಕ ಲೋಕಸೇವಾ ಆಯೋಗದ ಅಧ್ಯಕ್ಷ, ಸಾಂಸ್ಕೃತಿಕ, ಸಾಮಾಜಿಕ, ಧಾಮರ್ಿಕ ಪೋಷಕ ಡಾ.ಟಿ.ಶಾಮ್ ಭಟ್ ಅವರಿಗೆ "ಶ್ರೀಗುರು ಸೇವಾ ಪಾರೀಣ" ಪ್ರಶಸ್ತಿ ಪ್ರಧಾನಗೈದು ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಟಿ.ಶಾಮ್ ಭಟ್ ಅವರು, ತನ್ನ ವಿವಿಧ ಅಧಿಕಾರಾವಧಿಯ ವಿವಿಧ ಹುದ್ದೆಗಳಲ್ಲಿ ನ್ಯಾಯ-ನಿಷ್ಠುರನಾಗಿ, ಹೆಚ್ಚು ವಿವಾದಾತ್ಮಕ ವ್ಯಕ್ತಿಯಾಗಿ ಮುನ್ನಡೆಯುವಲ್ಲಿ ಅನುಭವಿಸಿದ ವಿಚಾರಗಳನ್ನು ಹಂಚಿಕೊಂಡ ಅವರು ಆಡಳಿತಾತ್ಮಕವಾಗಿ ಸಾಗರೋಪಾದಿಯಯಲ್ಲಿ ಮಾದರಿಯಾಗಿರುವ ಶ್ರೀಶೃಂಗೇರಿ ಮಠದಿಂದ ಐಎಎಸ್, ಕೆಎಎಸ್ನ ಹೊಸ ತಲೆಮಾರು ತರಬೇತಿ ಪಡೆಯಬೇಕು ಎಂದು ತಿಳಿಸಿದರು. ಕಲೆ, ಸಾಂಸ್ಕೃತಿಕತೆಗಳಿಗೆ ಇರುವ ಬೆಸೆಯುವ-ಬೆಳೆಸುವ ಮತ್ತು ಮುನ್ನಡೆಸುವ ಶಕ್ತಿಯನ್ನು ಹೊಸ ತಲೆಮಾರಿಗೆ ತಿಳಿಯಪಡಿಸುವ ಅಗತ್ಯ ಇಂದು ಅಗತ್ಯವಿದ್ದು, ಶ್ರೀ ಎಡನೀರು ಮಠದ ಅಂತಹ ಚಟುವಟಿಕೆಗಳು ಎಂದಿಗೂ ಮಾದರಿ ಎಂದು ತಿಳಿಸಿದರು.
  ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ಕುಮಾರ್ ಕಟೀಲು, ಉದುಮ ಶಾಸಕ ಕೆ.ಕುಂಞಿರಾಮನ್, ಶಾಸಕ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ಮುರಳೀ ರಾಯರಮನೆ ನಿಮರ್ಿಸಿದ ಶ್ರೀಮಠದ ಕುರಿತಾದ ಸಾಕ್ಷ್ಯಚಿತ್ರವನ್ನು ಈ ಸಂದರ್ಭದಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ಆಡಳಿತಾಧಿಕಾರಿ. ಡಾ.ವಿ.ಆರ್.ಗೌರೀಶಂಕರ್ ಬಿಡುಗಡೆಗೊಳಿಸಿದರು. ಶ್ರೀಮಠದ ಪೋಟೋ ಆಲ್ಬಂನ್ನು ಉದುಮ ಶಾಸಕ ಕೆ.ಕುಂಞಿರಾಮನ್ ಬಿಡುಗಡೆಗೊಳಿಸಿದರು. ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಯಕ್ಷಗಾನ ಅರ್ಥಧಾರಿ, ಸಾಹಿತಿ ಡಾ.ರಮಾನಂದ ಬನಾರಿ ಅಭಿನಂದನಾ ಭಾಷಣಗೈದರು.
   ಸಭಾ ಕಾರ್ಯಮವನ್ನು ಮೊದಲಿಗೆ ಸಂಸದ ಡಾ.ಎಂ.ವೀರಪ್ಪ ಮೊಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀಪತಿ ಕುಬಣೂರಾಯ ಹಾಗೂ ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಪತ್ರ ವಾಚಿಸಿದರು. ಸುರೇಶ್ ನಾಯಕ್, ರಾಘವೇಂದ್ರ, ಡಾ.ಬಿ.ಎಸ್.ರಾವ್, ಜಯರಾಮ ಮಂಜತ್ತಾಯ ಎಡನೀರು, ಶರತ್ಕುಮಾರ್ ಮಾಸ್ತರ್ ಪುತ್ತೂರು, ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ರಮೇಶ್ ಭಟ್ ಪುತ್ತೂರು, ಬಿ.ವಿಷ್ಣುಮೂತರ್ಿ ಕಕ್ಕಿಲ್ಲಾಯ ಮೊದಲಾದವರು ಸಹಕರಿಸಿದರು. ಮಠದ ಪ್ರಬಂಧಕ ನ್ಯಾಯವಾದಿ ಐ.ವಿ.ಭಟ್ ಸ್ವಾಗತಿಸಿ, ರಾಜೇಂದ್ರ ಕಲ್ಲೂರಾಯ ಎಡನೀರು ವಂದಿಸಿದರು. ಡಾ.ಎಂ.ಎಲ್.ಸಾಮಗ ಹಾಗೂ ವಿದ್ವಾನ್.ಹಿರಣ್ಯ ವೆಂಕಟೇಶ ಭಟ್ ಕಾರ್ಯಕ್ರಮ ನಿರೂಪಿಸಿದರು.
   ಬಳಿಕ ಶ್ರೀಎಡನೀರು, ಶ್ರೀಹನುಮಗಿರಿ ಮೇಳಗಳು ಮತ್ತು ಅತಿಥಿ ಕಲಾವಿದರಿಂದ ವಿದ್ವಾಮಿತ್ರ ಮೇನಕೆ, ಶ್ರೀರಾಮ ದರ್ಶನ, ಊರ್ವಶಿ-ಪುರೂರವ, ತಿಲೋತ್ತಮೆ ಮತ್ತು ಸೀತಾ ಕಲ್ಯಾಣ ಪ್ರಸಂಗಗಳ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
  ಸಭಾ ಕಾರ್ಯಕ್ರಮಕ್ಕೂ ಮೊದಲು ವಯಲಿನ್-ವಿಣಾ ಜುಗಲ್ಬಂದಿಗಳ ನಾದಾಭಿನಂದನೆ ನಡೆಯಿತು. ವಿದ್ವಾನ್.ಆರ್.ಕುಮಾರೇಶ್(ವಯಲಿನ್), ವಿದುಷಿಃ ಡಾ. ಜಯಂತಿ ಕುಮಾರೇಶ್(ವೀಣೆ),ಟ್ರಿಚ್ಚಿ ಬಿ.ಹರಿಕುಮಾರ್(ಮೃದಂಗ) ಹಾಗೂ ವಳಪ್ಪಳ್ಳಿ ಕೃಷ್ಣಕುಮಾರ್ (ಘಟಂ)ಸಹಕರಿಸಿದರು.
  ಭಾನುವಾರ ಸಂಜೆ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿದರ್ೇಶನದಲ್ಲಿ ಚಾಪರ್ಕ ತಂಡದಿಂದ ಪಣಿಯೆರಾವಂದಿನ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.
    ಇಂದು(ಸೋಮವಾರ)ವಿಸ್ಮಯ:
  ಸೋಮವಾರ ಸಂಜೆ ಶ್ರೀಮಠದ ಸಾಂಸ್ಕೃತಿಕ ಸಂಜೆಯ ಅಂಗವಾಗಿ ಖ್ಯಾತ ಯಕ್ಷಿಣಿಗಾರ ಕುದ್ರೋಳಿ ಗಣೇಶ್ ಮತ್ತು ತಂಡದವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ.





   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries