HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಸಮಾಜ ಸೇವೆ : ಡಾ.ಶ್ರೀಪಾದ ರಾವ್ ಅವರಿಗೆ ಸಮ್ಮಾನ
      ಬಡವರ, ದೀನದಲಿತರ ವೈದ್ಯರಾದವರು ಡಾ.ಶ್ರೀಪಾದ ರಾವ್ : ಕಾಸರಗೋಡು ಚಿನ್ನಾ
    ಮಂಗಳೂರು: `ಕರ್ಮಣ್ಯೆ ವಾಧಿಕಾರಸ್ತೆ ಮಾಫಲೇಶು ಕಥಾಚನ' ಎಂಬ ಮಾತನ್ನು ಅಕ್ಷರಶ: ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾಸರಗೋಡಿನ ಬಡವರ, ದೀನದಲಿತರ ವೈದ್ಯರಾದವರು ಡಾ.ಶ್ರೀಪಾದ ರಾವ್ ತನ್ನ ವೈದ್ಯಕೀಯ ವೃತ್ತಿಯಲ್ಲಿ ಯಾವುದೇ ಕಪ್ಪು ಚುಕ್ಕಿಯಿಲ್ಲದೆ, ಸಹನೆ, ಸಮಾಧಾನ, ಶಾಂತಿಯಿಂದ ಎಲ್ಲವನ್ನು ಸಾಸಿದ ಪರಿಪೂರ್ಣ ವೈದ್ಯರು ಎಂದು ಚಲನ ಚಿತ್ರನಟ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಹೇಳಿದರು.
    ಮಂಗಳೂರಿನ ರಥ ಬೀದಿಯಲ್ಲಿರುವ ಗೋಕರ್ಣ ಮಠದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾಜ ಸೇವೆಯನ್ನು ಗುರುತಿಸಿ ಡಾ.ಶ್ರೀಪಾದ ರಾವ್ ಅವರನ್ನು ಸಮ್ಮಾನಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
     ಕಾಸರಗೋಡಿನ ಪ್ರದೇಶದಲ್ಲಿ ಹಿಂದೂಸ್ಥಾನೀ ಸಂಗೀತದ ಬೆಳಣಿಗೆಗೆ ಕಾರಣಕರ್ತರಲ್ಲಿ ಡಾ|ಶ್ರೀಪಾದ ರಾವ್ ಪ್ರಮುಖರು. ಕಾಸರಗೋಡಿಗೆ ಬಂದ ಸಂಗೀತ ಕಲಾವಿದರಿಗೆ ಅವರು ನೀಡಿರುವ ಆಶ್ರಯ ಮರೆಯಲಾಗದ್ದು. ತಾನು ಕೂಡಾ ಸ್ವತ: ಸಂಗೀತಗಾರನಾಗಿ ತನ್ನ ಮಕ್ಕಳನ್ನು, ಬಂಧುಗಳಲ್ಲಿ ಹಲವರನ್ನು ಸಂಗೀತ ಕ್ಷೇತ್ರಕ್ಕೆ ಸಾಗಿಸಿದವರು. ಅವರು ಮತ್ತಷ್ಟು ಕ್ರಿಯಾತ್ಮಕವಾಗಿ ಸಂಗೀತ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಂತಾಗಲಿ ಎಂದು ಶುಭಹಾರೈಸಿದರು.
     ಮಂಗಳೂರಿನ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ.ಮಂಜುನಾಥ ಕಾಮತ್ ಅವರು ಮಾತನಾಡಿ ಈಗಿನ ವ್ಯಾಪಾರೀ ಮನೋಭಾವದ ಕಾಲ ಘಟ್ಟದಲ್ಲಿ ಡಾ.ಶ್ರೀಪಾದ್ ರಾವ್ ಅವರ ಸೇವೆ ಭಿನ್ನವಾಗಿ ಅಭಿನಂದನೀಯ ಎನಿಸಿದೆ. ಹಿಂದಿನ ತಲೆಮಾರಿನ ಡಾಕ್ಟರ್ಗಳ ಮನೋಭಾವವನ್ನು ಇತ್ತೀಚೆಗಿನ ಯುವ ವೈದ್ಯರು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು.
   ಡಾ.ಕೆ.ಆರ್.ಕಾಮತ್, ಕೆ.ಕಿಶೋರ್ ಕಾಮತ್, ಕೆ.ಪುಂಡಲೀಕ ನಾಯಕ್, ಬಾಬುರಾಯ ಭಕ್ತ, ಡಾ.ಶ್ರೀಧರ ರಾವ್, ಮರೋಳಿ ಸಬೀತಾ ಕಾಮತ್ ಮುಂತಾದವರು ಶುಭಾಶಂಸನೆಗೈದರು.
   ಕಾಸರಗೋಡಿನ ರಂಗ ನಟರೂ, ಎಲ್.ಐ.ಸಿ.ಯ ನಿವೃತ್ತ ಅಧಿಕಾರಿಗಳೂ ಆಗಿರುವ ಬಿ.ನಟರಾಜ್ ಅವರು ಡಾ.ಶ್ರೀಪಾದ ರಾವ್ ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಿದರು.
    ಬೆಳಿಗ್ಗೆ 7 ರಿಂದ ಸಂಜೆ 8 ರ ತನಕ ನಿರಂತರವಾಗಿ ಜರಗಿದ ಅಭಿನಂದನಾ ಸಮಾರಂಭದಲ್ಲಿ ಕು.ಶ್ರೀಯಾ ಎಸ್.ರಾವ್ ಅವರಿಂದ ಆರ್ಗನ್, ಕು.ರಕ್ಷಾ ಆರ್.ಕಾಮತ್, ಕು.ರಚನಾ ಆರ್.ಕಾಮತ್ ಅವರಿಂದ ಹಾಡುಗಳು, ಕು.ಆದಿತಿ ಆಚಾರ್ಯ, ಕು.ಮೇಘಾ ಕಾಮತ್ ಅವರಿಂದ ದಾಸ ಕೀರ್ತನೆ, ಡಾ.ಅಮೃತಾ ಶ್ರೀಯಾನ್ ಅವರಿಂದ ಭರತನಾಟ್ಯ, ವಿದ್ವಾನ್ ಸೂರಜ್ ಕುಡುಪು ಅವರಿಂದ ಸ್ಯಾಕ್ಸೋಫೋನ್, ರವಿ ದಾಮೋದರ್ ರಾವ್ ಹಾಗೂ ಸೀಮಾ ದಾಮೋದರ್ ರಾವ್ ಅವರಿಂದ ಚಲನಚಿತ್ರ ಗೀತೆಗಳು, ಮಾ.ಮೋಹಿತ್ ರಾವ್ ಅವರಿಂದ ತಬಲಾ ವಾದನ ಜರಗಿತು.
    ಕಾಸರಗೋಡು ಚಿನ್ನಾ ಅವರು ಭಾಷಾಂತರಿಸಿದ ನಿದರ್ೇಶಿಸಿದ `ಎಕ್ಲೊ ಆನ್ನೆಕ್ಲೋ' ಕೊಂಕಣಿ ನಾಟಕದ 25 ನೇ ಪ್ರದರ್ಶನವನ್ನು ಯಶಸ್ವಿಯಾಗಿ ಪ್ರದಶರ್ಿಸಲಾಯಿತು. ಖ್ಯಾತ ನಟರಾದ ಶಶಿ ಭೂಷಣ್ ಕಿಣಿ, ಡಾ.ಸುದೇಶ್ ರಾವ್ ಅವರು ಪ್ರಮುಖ ಪಾತ್ರ ವಹಿಸಿದರು. ಸಂಗೀತದಲ್ಲಿ ಧನರಾಜ್ ಸಹಕರಿಸಿದರು.
    ಸುಶ್ರಾವ್ಯವಾಗಿ ಹಾಡಿದ ಡಾ.ಸುಮಾ ಆರ್.ಕಾಮತ್ ಅವರು ಕಾರ್ಯಕ್ರಮ ನಿರ್ವಹಿಸಿದರು. ತಬಲಾ ಹಾಗೂ ಪ್ಯಾಡ್ ವಾದಕರಾಗಿ ಜನಮನಗೆದ್ದ ಡಾ.ಸುದೇಶ್ ರಾವ್ ಸ್ವಾಗತಿಸಿದರು. ಡಾ.ಸುಚೇತಾ ಎಸ್.ರಾವ್ ವಂದಿಸಿದರು. ಡಾ.ಶ್ರೀಪಾದ ರಾವ್ ಅವರ ಧರ್ಮಪತ್ನಿ ಜ್ಯೋತಿಪ್ರಭಾ ಎಸ್.ರಾವ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries