ಸರಕಾರಿ ಭೂಮಿ ಕಬಳಿಕೆ ತಡೆಗೆ ಕಂದಾಯ ಇಲಾಖೆಯ ಮಹತ್ವದ ಕ್ರಮ=
ತೆರವುಗೊಳಿಸಲು ಮೋನಿಟರಿಂಗ್ ಸೆಲ್ಗೆ ರೂಪು
ತಿರುವನಂತಪುರ: ಕೇರಳದಲ್ಲಿ ಸರಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವುದನ್ನು ತೆರವುಗೊಳಿಸಲು ರಾಜ್ಯ ಕಂದಾಯ ಇಲಾಖೆಯು ಮೋನಿಟರಿಂಗ್ ಸೆಲ್ಗೆ ರೂಪು ನೀಡಿದೆ. ಅಲ್ಲದೆ ಈ ನಿಟ್ಟಿನಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಿ ಅನುಷ್ಠಾನಕ್ಕೆ ತರಲು ಕಂದಾಯ ಸಚಿವ ಇ.ಚಂದ್ರಶೇಖರನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀಮರ್ಾನಿಸಲಾಗಿದೆ.
ಸರಕಾರಿ ಭೂಮಿ ಕಬಳಿಕೆ ಬಗ್ಗೆ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡರೆ ಮೋನಿಟರಿಂಗ್ ಸೆಲ್ ಸಮಿತಿಯ ಅಧಿಕಾರಿಗಳು ತಕ್ಷಣ ಅಂತಹ ಪ್ರದೇಶಗಳನ್ನು ಸಂದಶರ್ಿಸಿ ಸೂಕ್ಷ್ಮ ಪರಿಶೀಲನೆ ನಡೆಸಲಿದ್ದಾರೆ. ಅಲ್ಲಿ ಸರಕಾರಿ ಭೂಮಿಯನ್ನು ಅಕ್ರಮವಾಗಿ ಕೈವಶವಿರಿಸಲಾಗಿದೆ ಎಂದು ದೃಢೀಕರಿಸಲ್ಪಟ್ಟಲ್ಲಿ ಅಂತಹವರ ವಶದಿಂದ ಆ ಸ್ಥಳವನ್ನು ಮತ್ತೆ ಸರಕಾರದ ವಶಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುವುದು.
ಸರಕಾರದ ಭೂಮಿ ತೆರವುಗೊಳಿಸುವ ಕ್ರಮಕ್ಕೆ ವಿಳಂಬ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೈವಶ ಸ್ಥಳವನ್ನು ತೆರವುಗೊಳಿಸಲು ಕಂದಾಯ ಇಲಾಖೆಯು ಸೆಲ್ಗೆ ರೂಪು ನೀಡಿದೆ. ಹೊಸದಾಗಿ ರೂಪು ನೀಡಿದ ಮೋನಿಟರಿಂಗ್ ಸೆಲ್ನಲ್ಲಿ ರಾಜ್ಯ ಭೂಕಂದಾಯ ಆಯುಕ್ತರು ಮತ್ತು ರಾಜ್ಯ ಭೂ ಕಂದಾಯ ನಿದರ್ೇಶನಾಲಯದ ಉನ್ನತ ಮಟ್ಟದ ಅಧಿಕಾರಿಗಳು ಒಳಗೊಂಡಿದ್ದಾರೆ.
ಸರಕಾರದ ಜಮೀನನ್ನು ಯಾರಾದರೂ ಅನಧಿಕೃತವಾಗಿ ಕೈವಶಪಡಿಸಿದ ಬಗ್ಗೆ ದೂರುಗಳು ಉಂಟಾದಲ್ಲಿ ಆ ಕುರಿತು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ತಹಶೀಲ್ದಾರರ ಸಹಾಯದೊಂದಿಗೆ ಅಂತಹ ಭೂಮಿಯನ್ನು ತ್ವರಿತವಾಗಿ ತೆರವುಗೊಳಿಸುವುದು ಸೆಲ್ನ ಪ್ರಧಾನ ಹೊಣೆಯಾಗಿದೆ. ಒಂದು ವೇಳೆ ಇಂತಹ ತೆರವು ಕಾಯರ್ಾಚರಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಲ್ಲಿ ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ವಾದಿಸುವ ಹೊಣೆಯನ್ನು ಮೋನಿಟರಿಂಗ್ ಸೆಲ್ಗೆ ವಹಿಸಿಕೊಡಲಾಗಿದೆ.
ಇದರ ಹೊರತಾಗಿ ಸರಕಾರಿ ಭೂಮಿ, ಪುರಂಬೋಕು ಸ್ಥಳ ಮತ್ತು ರಸ್ತೆ ಬದಿಗಳನ್ನು ಅಕ್ರಮವಾಗಿ ಯಾರಾದರೂ ಕೈವಶವಿರಿಸಿದ್ದಲ್ಲಿ ಅವುಗಳನ್ನು ಆಯಾ ಪ್ರದೇಶಗಳ ಆರ್ಡಿಒ ನೇತೃತ್ವದಲ್ಲಿ ತೆರವುಗೊಳಿಸುವಂತೆ ಮಾಡುವ ಹೊಣೆಗಾರಿಕೆಯನ್ನು ಸೆಲ್ಗೆ ನೀಡಲಾಗಿದೆ. ನ್ಯಾಯಾಲಯದ ತಡೆಯಾಜ್ಞೆಯಿಂದ ಮರುವಶ ಮಾಡಲು ಸಾಧ್ಯವಾಗದ ಭೂಮಿ ಕುರಿತಾದ ಪೂರ್ಣ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳು ಆಯಾ ಸೆಲ್ಗೆ ಸಲ್ಲಿಸಬೇಕಾಗಿದೆ ಎಂದು ಕಂದಾಯ ಇಲಾಖೆಯು ನಿದರ್ೇಶಿಸಿದೆ.
ಎಲ್ಲಾ ಜಿಲ್ಲೆಗಳಲ್ಲೂ ಸಮರ್ಪಕ ವ್ಯವಸ್ಥೆ : ಕೇರಳದ 14 ಜಿಲ್ಲೆಗಳಲ್ಲೂ ಸರಕಾರಿ ಭೂಮಿಯನ್ನು ಅಕ್ರಮ ವಶದಿಂದ ಬಿಡಿಸುವ ಬಗ್ಗೆ ವ್ಯವಸ್ಥೆಗಳನ್ನು ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಜಿಲ್ಲೆಯಲ್ಲೂ ಮೋನಿಟರಿಂಗ್ ಸೆಲ್ಗಳನ್ನು ರಚಿಸಲಾಗುವುದು. ಅಲ್ಲದೆ ಈ ಸೆಲ್ನ ಅಧೀನದಲ್ಲಿ ಸರಕಾರಿ ಭೂಮಿ ಅಕ್ರಮ ಕಬಳಿಕೆ ಕುರಿತು ಸಮೀಕ್ಷೆಗಳು ನಡೆಯಲಿವೆ. ಮತ್ತೊಂಡೆದೆ ಸರಕಾರಿ ಜಮೀನಿನಲ್ಲಿ ಯಾರಾದರೂ ಅಕ್ರಮವಾಗಿ ಮನೆ ಕಟ್ಟಿಕೊಂಡು ವಾಸವಾಗಿದ್ದರೆ ಈ ಬಗ್ಗೆ ಮುಂದಿನ ಹೆಜ್ಜೆ ಯಾವುದು ಎಂಬ ಕುರಿತು ಸರಕಾರವು ಇದುವರೆಗೆ ಸರಿಯಾದ ಕ್ರಮಗಳನ್ನು ಜಾರಿಗೊಳಿಸಲಿಲ್ಲ. ಈ ಮಧ್ಯೆ ಕಾಸರಗೋಡು ಜಿಲ್ಲೆಯಲ್ಲೂ ಅಕ್ರಮ ಸರಕಾರಿ ಜಮೀನು ಸ್ವಾಧೀನತೆ ತಡೆಗಟ್ಟುವ ವಿಚಾರದಲ್ಲಿ ಪ್ರಾಥಮಿಕ ಹಂತದ ಕಾರ್ಯ ಚಟುವಟಕೆಗಳು ನಡೆಯುತ್ತಿವೆ.
ಗೊಂದಲಗಳಿಗೆ ಪರಿಹಾರ ಏನು?
ಈ ಮಧ್ಯೆ ಸರಕಾರ ಇಂತಹದೊಂದು ನಿಲುವು ತಳೆಯುತ್ತಿರುವಂತೆ ಹಲವು ಗೊಂದಲಗಳಿಗೂ ಎಡೆಯಾಗಿದೆ. ದಶಕಗಳಿಗಿಂತಲೂ ಹೆಚ್ಚು ಕಾಲಾವಧಿಯಿಂದ ಸರಕಾರೀ ಜಮೀನಿನಲ್ಲಿ ಮನೆಕಟ್ಟಿರುವವರು ಇದೀಗ ಏಕಾಏಕಿ ಒಕ್ಕಲೆಬ್ಬಿಸಲು ಬಂದರೆ ಏನು ಮಾಡಬೇಕೆಂಬ ಗೊಂದಲ ಎದುರಾಗಿದೆ. ಜೊತೆಗೆ ಹಲವೆಡೆ ವಿವಿಧ ಆರಾಧನಾಲಯಗಳೂ ಸರಕಾರಿ ಸ್ಥಳಗಳಲ್ಲಿ ಸ್ಥಾಪಿತವಾಗಿರುವುದರಿಂದ ಇಲ್ಲೂ ಗೊಂದಲಗಳೇಳುವ ನಿರೀಕ್ಷೆ ಇದೆ.