ಸಚಿನ್ ಗೋಪಾಲ್ ಬಲಿದಾನ ದಿನ
ಪೆರ್ಲ: ಪೆರ್ಲದ ನಾಲಂದಾ ಮಹಾ ವಿದ್ಯಾಲಯದ ಎಬಿವಿಪಿ ಘಟಕ ವತಿಯಿಂದ ಬುಧವಾರ ಕಣ್ಣೂರು ಎಬಿವಿಪಿ ಕಾರ್ಯಕರ್ತನಾಗಿದ್ದ ಸಚಿನ್ ಗೋಪಾಲ್ ಬಲಿದಾನ ದಿನವನ್ನು ಆಚರಿಸಲಾಯಿತು. ಕಾಲೇಜು ಘಟಕದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಎಬಿವಿಪಿ ರಾಜ್ಯ ಸದಸ್ಯೆ ನಯನಶ್ರೀ ಮಾತನಾಡಿದರು.ಸಚಿನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಬಳಿಕ ಮೌನ ಪ್ರಾರ್ಥನೆ ನಡೆಯಿತು. ಎಬಿವಿಪಿ ಪ್ರತಿನಿಧಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.