HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಸೂಚನೆ
    ಕಾಸರಗೋಡು: ಜಿಲ್ಲೆಯ ರಸ್ತೆ ಬದಿಗಳಲ್ಲಿ ಸ್ಥಾಪಿಸಿರುವ ಅನಧಿಕೃತ ಜಾಹೀರಾತು ಫಲಕಗಳನ್ನು, ಫ್ಲೆಕ್ಸ್ ಬೋಡರ್್ಗಳನ್ನು ಕೂಡಲೇ ತೆರವುಗೊಳಿಸಲು ತುತರ್ು ಕ್ರಮ ಕೈಗೊಳ್ಳುವಂತೆ ಶನಿವಾರ ನಡೆದ ಜಿಲ್ಲಾಭಿವೃದ್ಧಿ ಸಮಿತಿ ಸಭೆ ಲೋಕೋಪಯೋಗಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಎಕ್ಸಿಕ್ಯೂಟಿವ್ ಅಭಿಯಂತರರಿಗೆ ಸೂಚನೆ ನೀಡಿದೆ.
    ಹೊಸಂಗಡಿಯಿಂದ ಕುಂಬಳೆ ತನಕವಿರುವ ಬೋಡರ್್ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದವುಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ನಿದರ್ೇಶನ ನೀಡಿದ್ದಾರೆ.
   ಬೇಕಲ, ಪನೆಯಾಲ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಲಾಗುವುದು. ಸಣ್ಣ ದುರಸ್ತಿ ಕಾಮಗಾರಿ ನಡೆಸಲು ಸಾಧ್ಯವಾಗುವಂತಹ ಸೇತುವೆಗಳಿದ್ದರೆ ಜನಪ್ರತಿನಿಧಿಗಳು ಈ ಕುರಿತು ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಕೂಡಲೇ ಸಲ್ಲಿಸಬೇಕು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ವೀರ ಮಾಡಕಲ್ಲು ಪ್ರವಾಸೋದ್ಯಮಕ್ಕಾಗಿರುವ ಕ್ರಮ ಕೂಡಲೇ ಆರಂಭಿಸಲಾಗುವುದು.
   ಮಾಡಕಲ್ಲು ಸಾರಿಗೆ ಸಮಸ್ಯೆ ಪರಿಹರಿಸಲು ಜಿಇಎಂನಲ್ಲಿ ನೋಂದಾಯಿಸಿದ ಬೋಟ್ಗಳನ್ನು ಪಡೆಯಲಾಗುವುದು. ಶಾಸಕರ ನಿಧಿ, ಎಸ್ಡಿಎಫ್, ನೆರೆ ಸಂತ್ರಸ್ಥರ   ಯೋಜನೆಗಳಲ್ಲಿ ಜಾರಿಗೊಳಿಸುವ ಕೆಲಸ ಕಾರ್ಯಗಳ ಪ್ರಗತಿಯ ಬಗ್ಗೆ ವರದಿಯನ್ನು ಪ್ರತಿ ತಿಂಗಳ ಐದನೇ ತಾರೀಕಿನೊಳಗೆ ಲಭ್ಯವಾಗಿಸಲು ಕ್ರಮ ಕೈಗೊಳ್ಳಬೇಕು. ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿ ಭೂ ಒತ್ತುವರಿ ನಡೆಸಿ ನಿಮರ್ಿಸಿದ ತಾತ್ಕಾಲಿಕ ಶೆಡ್ನ್ನು ತೆರವುಗೊಳಿಸಲಾಗುವುದು. ಶಾಸಕರ ಪ್ರಾದೇಶಿಕ ನಿಧಿಯಿಂದ ಬೇಕಲ ಪೋಟರ್್ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಮಂಜೂರುಗೊಳಿಸಿದ 131ಲಕ್ಷ ರೂ. ಈ ತನಕ ರೈಲ್ವೆಗೆ ಹಸ್ತಾಂತರಿಸಿಲ್ಲ. ಅದನ್ನು ಮುಂದಿನ 10 ದಿನಗಳೊಳಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು.
   ನಾನಾ ಪ್ರದೇಶಗಳಲ್ಲಿ ಲೋಕೋಪಯೋಗಿ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿಮರ್ಿಸಿದ ಹಂಪ್ಗಳನ್ನು ತೆರವುಗೊಳಿಸಲಾಗುವುದು. ಈ ಕುರಿತು ಅಧ್ಯಯನ ನಡೆಸಲು ಒಂದು ಸಮಿತಿಗೆ ಅಧಿಕಾರ ನೀಡುವುದಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದ  ಜಿಲ್ಲಾಧಿಕಾರಿ ತಿಳಿಸಿದರು.
   ಸಭೆಯಲ್ಲಿ ಶಾಸಕರಾದ ಪಿ.ಬಿ. ಅಬ್ದುಲ್ ರಝಾಕ್, ಎನ್.ಎ. ನೆಲ್ಲಿಕುನ್ನು, ಎಂ. ರಾಜಗೋಪಾಲನ್, ಕೆ. ಕುಂಞಿರಾಮನ್, ಜಿಪಂ ಅಧ್ಯಕ್ಷ ಎಜಿಸಿ ಬಶೀರ್, ಜಿಪಂ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್, ಜಿಲ್ಲಾ ದಂಡಾಧಿಕಾರಿ ಎನ್. ದೇವಿದಾಸ್, ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರು, ವಿವಿಧ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries