ಶ್ರೀ ಕೃಷ್ಣನ ತತ್ವಗಳು ಸಾರ್ವಕಾಲಿಕ ಸತ್ಯ : ವಿವಿಕ್ತಾನಂದ ಸರಸ್ವತಿ
ಕಾಸರಗೋಡು: ದುಷ್ಕೃತ್ಯ, ಸಾಮಾಜಿಕ ಅಸಮಾನತೆಗಳ ನಿಯಂತ್ರಣಕ್ಕೆ ಶ್ರೀ ಕೃಷ್ಣ ಹಾಕಿಕೊಟ್ಟ ಮೇಲ್ಪಂಕ್ತಿ ಸಾರ್ವಕಾಲಿಕವಾಗಿದ್ದು ಲೌಕಿಕದಾಚೆಗಿನ ಸುಖ ನೆಮ್ಮದಿಯು ಪರಮ ಧ್ಯೇಯವೆಂದು ಸಾರಿದ ತತ್ವಗಳು ಜಗತ್ತಿನ ಗಮನ ಸೆಳೆದವು. ಆಧುನಿಕತೆಯ ಗುಂಗಿನಲ್ಲಿ ಭಗವಂತನ ಸ್ಮರಣೆಗೆ ಜನ್ಮಾಷ್ಟಮಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಮಾಜವನ್ನು ಭದ್ರಗೊಳಿಸುವಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಶ್ರೀ ಕೃಷ್ಣನ ತತ್ವಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ಇಂದಿನ ಜೀವನಕ್ಕೆ ಅಳವಡಿಸಿಕೊಳ್ಳುವ ಅಗತ್ಯವಿದೆಯೆಂದು ಚಿನ್ಮಯ ಮಿಷನ್ನ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ಹೇಳಿದರು.
ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನೇತೃತ್ವದಲ್ಲಿ ಕಲ್ಕೂರ ಪ್ರತಿಷ್ಠಾನ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಹಯೋಗದಲ್ಲಿ ಭಾನುವಾರ ಶ್ರೀ ರಾಮನಾಥ ಬಾಲಗೋಕುಲದ 16 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗು ಏಳನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪಧರ್ೆ ಮತ್ತು ಮೊಸರುಕುಡಿಕೆ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಲೋಕ ಕಲ್ಯಾಣಕ್ಕಾಗಿ ಅವತರಿಸಿದ ಶ್ರೀ ಕೃಷ್ಣ ಪರಮಾತ್ಮ ವಿಶ್ವಕ್ಕೆ ಸಾತ್ವಿಕ ಗುಣವನ್ನು ಸಾರಿದ ಮಹಾಪುರುಷ. ಕಾಳಿಂಗ ಮರ್ಧನ, ಗೋವರ್ಧನ ಲೀಲೆಯನ್ನು ತೋರಿಸಿದ ಶ್ರೀ ಕೃಷ್ಣ ಪರಮಾತ್ಮ ಧರ್ಮರಕ್ಷಣೆಗಾಗಿ ಜನ್ಮ ಪಡೆದನು. ಶ್ರೀ ಕೃಷ್ಣನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಮಕ್ಕಳಿಗೆ ಭಾರತೀಯ ಪುರಾಣ, ಇತಿಹಾಸ, ಸಂಸ್ಕೃತಿ, ಆಚಾರ, ವಿಚಾರಗಳನ್ನು ತಿಳಿಸಿ ಅವರನ್ನು ಸತ್ಪ್ರಜೆಯನ್ನಾಗಿ ಬೆಳೆಸುವಲ್ಲಿ ಮಾತೆಯರ ಪಾತ್ರ ಮಹತ್ತರ. ಉತ್ತಮ ಸಂಸ್ಕಾರ, ಸಂಸ್ಕೃತಿಯ ಅರಿವನ್ನು ಮೂಡಿಸುವ ಶಿಕ್ಷಣವನ್ನು ನೀಡಬೇಕು. ಈ ನಿಟ್ಟಿನಲ್ಲಿ ಬಾಲಗೋಕುಲಗಳು ಉತ್ತಮ ಕೆಲಸ ಮಾಡುತ್ತಿದೆ ಎಂದು ರಂಗಚಿನ್ನಾರಿ ನಿದರ್ೇಶಕ, ಚಲನಚಿತ್ರ ನಿದರ್ೇಶಕ, ನಟ ಕಾಸರಗೋಡು ಚಿನ್ನಾ ಅವರು ಹೇಳಿದರು.
ತೆರುವತ್ತ್ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ನಿರ್ಮಲಾಕ್ಷನ್ ಮಡೆಯನ್ ಅವರು ಶುಭಹಾರೈಸಿದರು. ಉತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿದರು. ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿದರು. ಲತಾ ಪ್ರಕಾಶ್, ಕಾವ್ಯ ಕುಶಲ, ದಿವಾಕರ ಅಶೋಕನಗರ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಕೃಷ್ಣ ವೇಷ ಸ್ಪಧರ್ೆಯ ಬಳಿಕ ಮೊಸರು ಕುಡಿಕೆ ಸ್ಪಧರ್ೆ ನಡೆಯಿತು. ಸಂದೇಶ್ ಕೋಟೆಕಣಿ ವಂದಿಸಿದರು.