ಕುಂಟಿಕಾನದಲ್ಲಿ ಜನ್ಮಾಷ್ಟಮಿ-ಓಣಂ ಆಚರಣೆ
ಬದಿಯಡ್ಕ : ನಾವು ಉತ್ತಮರಾದರೆ ರಾಷ್ಟ್ರ ಒಳ್ಳೆಯದಾಗುತ್ತದೆ. ನಾಳಿನ ಉತ್ತಮ ಪ್ರಜೆಗಳನ್ನು ರೂಪಿಸಬೇಕಾದರೆ ಇಂದಿನ ಮಕ್ಕಳು ಸಂಸ್ಕಾರವಂತರಾಗಬೇಕು. ಇಂದು ಕೇರಳದಾದ್ಯಂತ ಬಾಲಗೋಕುಲಗಳು ಕಾಯರ್ಾಚರಿಸುತ್ತಿದ್ದು, ಭಾರತೀಯ ಸಂಸ್ಕೃತಿಯನ್ನು ಬಿತ್ತರಿಸುವ ಕಾರ್ಯದಲ್ಲಿ ನಿರತವಾಗಿದೆ. ಇಲ್ಲಿ ಲಭಿಸುವ ಶಿಕ್ಷಣಗಳಿಂದ ಭವಿಷ್ಯದ ಉತ್ತಮ ಪ್ರಜೆಗಳ ನಿಮರ್ಾಣಕ್ಕೆ ಸಹಕಾರಿಯಾಗಲಿದೆ ಎಂದು ಹಿರಿಯ ನ್ಯಾಯವಾದಿ ವಾಶೆ ಶ್ರೀಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಅವರು ಕುಂಟಿಕಾನ ಹರಿಶ್ರೀ ಬಾಲಗೋಕುಲ, ಜಮುನಾ ಸ್ವಸಹಾಯ ಸಂಘ, ಭಾರತಾಂಬಾ ಸ್ವಸಹಾಯ ಸಂಘಗಳ ಜಂಟಿ ಆಶ್ರಯದಲ್ಲಿ ಭಾನುವಾರ ಕುಂಟಿಕಾನ ಶಾಲಾ ವಠಾರದಲ್ಲಿ ನಡೆದ 9ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಓಣಂ ಆಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಉನ್ನತ ಪದವಿಗಳಿಂದ ಜೀವನ ಯಶಸ್ವಿಗೊಳಿಸಲು ಸಾಧ್ಯವಿಲ್ಲ. ಜೀವನವನ್ನು ಮುನ್ನಡೆಸುವ ಸಂಸ್ಕಾರ ಲಭಿಸಬೇಕು. ಬಾಲ್ಯ ಕಾಲದಲ್ಲಿಯೇ ಮಕ್ಕಳನ್ನು ಸಂಸ್ಕಾರಯುತ ಜೀವನಕ್ಕೆ ಹೊಂದಿಕೊಳ್ಳುವ ಅವಕಾಶಗಳನ್ನು ಹೆತ್ತವರು ಕಲ್ಪಸಿಬೇಕು. ಜನನ ಕಾಲದಿಂದಲೇ ತನ್ನ ಪವಾಡವನ್ನು ಜಗತ್ತಿಗೇ ತೋರ್ಪಡಿಸಿದ ಶ್ರೀಕೃಷ್ಣನು ಯಾವುದೇ ಅಧಿಕಾರದ ದಾಹವಿಲ್ಲದೆ ಮಹಾಪುರುಷನಾಗಿ ಮೆರೆದಿದ್ದಾನೆ. ಪ್ರಕೃತಿಯನ್ನು ಸಮತೋಲನದಲ್ಲಿಡುವುದು ಪರಮಾತ್ಮನ ಕೆಲಸವಾಗಿದೆ. ಪರಮಾತ್ಮನಲ್ಲಿ ನಾವು ಸಂಪೂರ್ಣ ಶರಣಾಗತಿಯನ್ನು ಹೊಂದಿದರೆ ಮಾತ್ರ ಆತನ ಅನುಗ್ರಹ ನಮಗೆ ಲಭಿಸುತ್ತದೆ. ರಾಷ್ಟವನ್ನು ಪ್ರೇಮಿಸುವಂತಹ ಉತ್ತಮ ಸಂಸ್ಕಾರವಂತ ಮಕ್ಕಳನ್ನು ಸೃಷ್ಟಿಸುವಲ್ಲಿ ಬಾಲಗೋಕುಲಗಳು ಕಾಯರ್ಾಚರಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಗ್ರಾ.ಪಂ. ಸದಸ್ಯೆ ಜಯಂತಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಗ್ರಾ.ಪಂ.ಸದಸ್ಯೆ ಜಯಶ್ರೀ ಶುಭಾಶಂಸನೆಗೈದು ಮಾತನಾಡಿ ಬಾಲಗೋಕುಲದ ವಿದ್ಯಾಥರ್ಿಗಳು ಎಲ್ಲ ವಿಚಾರಗಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಕಾಣುತ್ತಿರುವುದು ಇಲ್ಲಿನ ಶಿಕ್ಷಣದ ಗುಣಮಟ್ಟವನ್ನು ಸಾರುತ್ತದೆ ಎಂದರು.
ಕುಂಟಿಕಾನ ಶಾಲೆಯ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ ಕುಂಟಿಕಾನ ಮಾತನಾಡಿ ಕೃಷ್ಣಾವತಾರವಾಗಿ 5000 ವರ್ಷಗಳು ಕಳೆದರೂ ಭಗವದ್ಗೀತೆಯ ತತ್ವ ಸಂದೇಶಗಳಲ್ಲಿ ಇಂದು ಕೂಡಾ ನಾವು ಶ್ರೀಕೃಷ್ಣನನ್ನು ಕಾಣುತ್ತಿದ್ದೇವೆ. ಓರ್ವ ಗೆಳೆಯನಾಗಿ, ಗುರುವಾಗಿ, ಮಾರ್ಗದರ್ಶಕನಾಗಿ ಶ್ರೀಕೃಷ್ಣನನ್ನು ಮಾದರಿಯಾಗಿ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಧಿಕಾರದ ಆಸೆಯಿಲ್ಲದೆ, ಅಹಂಭಾವವನ್ನು ಬಿಟ್ಟು ಮನಸ್ಸಿನ ಅರಮನೆಯಲ್ಲಿ ಶ್ರೀಕೃಷ್ಣನ್ನು ಕುಳ್ಳಿರಿಸಬೇಕು. ದುಷ್ಟಪ್ರವೃತ್ತಿಯನ್ನು ದೂರಗೊಳಿಸಲಿಕ್ಕಾಗಿ ಶ್ರೀಕೃಷ್ಣನ ಅವತಾರವಾಗಿದೆ. ಸದ್ಭುದ್ಧಿ, ಸ್ನೇಹಶೀಲತೆ, ಸದೃಢ ಮನಸ್ಸು, ತ್ಯಾಗ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಭಾರತೀಯವಾದ ಪ್ರತಿಯೊಂದು ಹಬ್ಬಕ್ಕೂ ಮಹತ್ವವಿದೆ. ಹಬ್ಬದ ಮಹತ್ವವನ್ನು ಮಕ್ಕಳು ತಿಳಿದುಕೊಳ್ಳಬೇಕು. ಮನದ ಜಾಢ್ಯತೆಯನ್ನು ಹೋಗಲಾಡಿಸಿ ಆದರ್ಶವನ್ನು ಪಾಲಿಸಿಕೊಂಡು ಬರಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿಯವರಿಗೆ ಹಾಗೂ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ದೇಶದ ಜನತೆಗೆ ಶ್ರದ್ಧಾಂಜಲಿ ಅಪರ್ಿಸಲಾಯಿತು. ಹರಿಶ್ರೀ ಬಾಲಗೋಕುಲದ ವಿದ್ಯಾಥರ್ಿಗಳು ಪ್ರಾರ್ಥನೆಯನ್ನು ಹಾಡಿದರು. ಭಾರತಾಂಬಾ ಸ್ವಸಹಾಯ ಸಂಘದ ಅಧ್ಯಕ್ಷ ಗೋಪಾಲ ಮಣಿಯಾಣಿ ಸ್ವಾಗತಿಸಿದರು. ಕಿಶೋರ್ ಕುಮಾರ್ ದೇವರಮೆಟ್ಟು ನಿರೂಪಣೆಗೈದರು. ಸಭಾಕಾರ್ಯಕ್ರಮದ ನಂತರ ವಿವಿಧ ಸ್ಪಧರ್ೆಗಳನ್ನು ಆಯೋಜಿಸಲಾಗಿತ್ತು. ಚಿತ್ರರಚನೆ, ಪ್ರಬಂಧ, ಭಗವದ್ಗೀತೆ ಕಂಠಪಾಠ, ಛದ್ಮವೇಷ, ಸಂಗೀತಕುಚರ್ಿ, ಲಿಂಬೆಚಮಚ, ಮಡಕೆ ಒಡೆಯುವುದು, ಓಟ, ಪೂಕಳಂ, ರಸಪ್ರಶ್ನೆ, ಗೋಣಿಚೀಲ ಓಟ, ಸೂಜಿ ನೂಲು, ದೇಶಭಕ್ತಿಗೀತೆ ಸ್ಪಧರ್ೆಗಳಲ್ಲಿ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡರು.