ನವ ಕೇರಳ ನಿಧಿ ಸಂಗ್ರಹ ಅಭಿಯಾನ ಪ್ರಚಾರ
ಸೈಕಲ್ ಜಾಥಾ ಆರಂಭ
ಮಂಜೇಶ್ವರ: ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಸಂಭವಿಸಿದ ನಾಶನಷ್ಟದ ಪರಿಹಾರಾರ್ಥವಾಗಿ ಧನ ಸಂಗ್ರಹಿಸಲು ಜಿಲ್ಲೆಯಲ್ಲಿ ಸೆ.13 ರಿಂದ ನಡೆಯುವ ನಿಧಿ ಸಂಗ್ರಹ ಅಭಿಯಾನದಂಗವಾಗಿ ಪ್ರಚಾರ ಸೈಕಲ್ ಯಾತ್ರೆ ಸೆ.12 ಬುಧವಾರ ಬೆಳಿಗ್ಗೆ ಹೊಸಂಗಡಿ ಜಂಕ್ಷನ್ನಿಂದ ಆರಂಭಗೊಂಡಿತು.
ಸಂಸದ ಪಿ.ಕರುಣಾಕರನ್ ಧ್ವಜ ಹಾರಿಸಿ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶ್ರೀನಿವಾಸ್ ಯಾತ್ರೆಗೆ ನೇತೃತ್ವ ನೀಡಿದರು. ಸಂಜೆ ಕಾಲಿಕಡವಿನಲ್ಲಿ ಯಾತ್ರೆ ಸಮಾಪ್ತಿಗೊಂಡಿತು.
ಕಾರ್ಯಕ್ರಮದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು, ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಅಸೀಸ್ ಹಾಜಿ, ಆರ್ಡಿಒ ಎಡಿಎಂ ದೇವಿದಾಸ್ ಉಪಸ್ಥಿತರಿದ್ದರು. ಯಾತ್ರೆಗೆ ಉಪ್ಪಳ, ಕುಂಬಳೆ, ಕಾಸರಗೋಡಿನಲ್ಲಿ ಸ್ವಾಗತ ನೀಡಲಾಯಿತು. ಕಾಲಿಕಡವಿನಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್ ಧ್ವಜ ಪಡೆದುಕೊಳ್ಳುವ ಮೂಲಕ ಯಾತ್ರೆ ಸಂಪನ್ನಗೊಂಡಿತು.