ಬಲೆಯಲ್ಲಿ ಸಿಲುಕಿದ ಶ್ವಾನ
ಕುಂಬಳೆ: ಮಂಗಳವಾರ ಕುಂಬಳೆಯ ಶೇಡಿಕಾವು ಮೈದಾನದಲ್ಲಿ ಅಚ್ಚರಿಯೊಂದು ನಡೆದು ಕುತೂಹಲಕ್ಕೆ ಕಾರಣವಾಯಿತು. ಕುಂಬಳೆ ಗ್ರಾಮ ಪಂಚಾಯತಿ ಅಧೀನದ ಶೇಡಿಕಾವಿನ ಆಟದ ಮೈದಾನದಲ್ಲಿ ಪುಟ್ಬಾಲ್ ಪಂದ್ಯಾಟಕ್ಕಾಗಿ ಕಟ್ಟಲಾದ ರಕ್ಷಣಾ ಬಲೆಯಲ್ಲಿ ಮೇಲ್ನೋಟಕ್ಕೆ ಕಾಡು ಮೃಗವೊಂದು ಸಿಲುಕಿದೆಯೋ ಎಂಬಂತೆ ದೂರದಿಂದ ಆಕಾರವೊಂದು ಕಾಣಿಸಿ ಸ್ಥಳೀಯ ಶ್ರೀಕೃಷ್ಣ ವಿದ್ಯಾಲಯದ ವಿದ್ಯಾಥರ್ಿಗಳು ಭಯಗೊಂಡರು. ವಿಷಯ ತಿಳಿದು ಆಗಮಿಸಿದ ಒಂದಷ್ಟು ಸ್ಥಳೀಯರು ಧೈರ್ಯವಹಿಸಿ ಹತ್ತಿರ ಸಾಗಿ ನೋಡುತ್ತಿರುವಂತೆ ಬದುಕಿದೆಯಾ ಬಡ ಜೀವವೇ ಎಂಬ ನಿಟ್ಟುಸಿರಿನೊಂದಿಗೆ ನಿರಾಳರಾದರು.
ಪುಟ್ಬಾಲ್ ಪಂದ್ಯಾಟದ ರಕ್ಷಣಾ ಬೇಲಿಯಾಗಿ ಬಳಸಲಾಗಿದ್ದ ಬಲೆಯೊಳಗೆ ಬಹುಷಃ ಸೋಮವಾರ ರಾತ್ರಿ ಶ್ವಾನವೊಂದು ಆಕಸ್ಮಿಕವಾಗಿ ಸುಲುಕಿ ಹೊರಬರಲಾರದ ತೊಳಲಾಡುತ್ತಿತ್ತು. ವಿದ್ಯಾಥರ್ಿಗಳು ಆ ಬಳಿಕ ಶ್ವಾನವನ್ನು ರಕ್ಷಿಸಲು ಪ್ರಯತ್ನಿಸಿದರೂ ವಿಫಲರಾದರು. ಬಳಿಕ ಸ್ಥಳೀಯರು ಹರಸಾಹಸಪಟ್ಟು ಕೊನೆಗೂ ಶ್ವಾನ ಸ್ವಾತಂತ್ರ್ಯ ನೀಡಿದರು.