ನಾಯ್ಕಾಪಿನಲ್ಲಿ ಜನ್ಮಾಷ್ಟಮಿ-ಕುಂಬಳೆ ಶ್ರೀಧರ ರಾವ್ ಸಹಿತ ಪ್ರಮುಖರಿಗೆ ಗೌರವಾಭಿನಂದನೆ-ಬಯಲಾಟ
ಕುಂಬಳೆ : ಅನೇಕ ಉತ್ತಮ ಕಲಾವಿದರನ್ನು ಕಲಾಕ್ಷೇತ್ರಕ್ಕೆ ನೀಡಿದ ಕೀತರ್ಿ ಕುಂಬಳೆ ಸೀಮೆಗಿದೆ. ಒಬ್ಬ ವ್ಯಕ್ತಿಯಿಂದಾಗಿ ಊರಿಗೆ, ಸ್ಥಳಕ್ಕೆ ಹೆಸರು ಬರುತ್ತದೆ ಎಂಬುದಕ್ಕೆ ಕುಂಬಳೆ ಶ್ರೀಧರ ರಾವ್ ಸಾಕ್ಷಿ. ಕಲಾಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡುವ ಅವಕಾಶ ಅವರಿಗೆ ಲಭಿಸಲಿ ಎಂದು ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಗಟ್ಟಿ ಕುಂಬಳೆ ಹೇಳಿದರು.
ಅವರು ಶಾಸ್ತಾ ಮಿತ್ರ ಸಂಗಮ ನಾಯ್ಕಾಪು ಇದರ ಆಶ್ರಯದಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಜಯಂತಿ ಹಾಗೂ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಖ್ಯಾತ ಯಕ್ಷಗಾನ ಕಲಾವಿದರುಗಳಾದ ಕುಂಬಳೆ ಶ್ರೀಧರ ರಾವ್, ಸದಾಶಿವ ಗಟ್ಟಿ ನಾಯ್ಕಾಪು, ಭಜನಾ ಕಲಾವಿದ ಪದ್ಮನಾಭ ಚೆಟ್ಟಿಯಾರ್ ಹಾಗೂ ಹಿರಿಯ ಮಹಿಳಾ ಯಕ್ಷಗಾನ ಕಲಾವಿದೆ ವಸುಂಧರಾ ಹರೀಶ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನವನ್ನು ಸ್ವೀಕರಿಸಿ ಕುಂಬಳೆ ಶ್ರೀಧರ ರಾವ್ ಮಾತನಾಡಿ, ಕಷ್ಟ ಸುಖಗಳ ಮೂಲಕ ದಿನ ಕಳೆದಿದೆ. ಹಿರಿಯರ, ಊರವರ ಪ್ರೋತ್ಸಾಹದಿಂದ 55 ವರ್ಷಗಳ ಕಾಲ ಕಲಾವಿದನಾಗಿ ಕಲಾಮಾತೆಯ ಸೇವೆಗೈಯುವ ಅವಕಾಶ ಲಭಿಸಿದೆ. `ಕುಂಬಳೆ' ಹೆಸರಿನಲ್ಲಿ ಈಗಾಗಲೇ ಅನೇಕ ಕಲಾವಿದರು ಹೊರಹೊಮ್ಮಿದ್ದಾರೆ. ಇನ್ನೂ ಅನೇಕ ಯುವ ಕಲಾವಿದರು ನಮ್ಮ ಪರಂಪರೆಯನ್ನು ಉಳಿಸಬೇಕು. ಬಡತನದ ಬೇಗೆಯಲ್ಲಿ ಬೆಂದು ಹೆತ್ತ ತಾಯಿ ಹುಟ್ಟಿಸಿದ ತಂದೆ ಕಷ್ಟಪಟ್ಟು ಸಾಕಿದ್ದಾರೆ. ಈ ಸನ್ಮಾನವು ಆ ಮಹಾ ತಾಯಿಯ ಪಾದಗಳಿಗೆ ಸಮಪರ್ಿತ ಎಂದರು. ಕನಸು ಮನಸಲ್ಲೂ ನೆನೆಸದ ಯೋಗ ಈಗ ಕೂಡಿಬಂದಿದೆ. ಹತ್ತೂರ ಸನ್ಮಾನಕ್ಕಿಂತ ಹುಟ್ಟೂರ ಸನ್ಮಾನಕ್ಕೆ ಹೆಚ್ಚು ಮೌಲ್ಯವಿದೆ. ಶಾಸ್ತಾರನ ಅನುಗ್ರಹದಿಂದ ನಾಯ್ಕಾಪಿನಲ್ಲಿ ಹಿಂದೆಯೂ ಇದ್ದ ಸಂಘಟನಾ ಶಕ್ತಿ ಇಂದು ಕೂಡಾ ಮುಂದುವರಿಯುತ್ತಿದೆ ಎಂದರು.
ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಜಯಂತಿ ಹಾಗೂ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಅಧ್ಯಕ್ಷ ಭರತೇಶ್ ನಾಯ್ಕಾಪು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಅಧ್ಯಾಪಕ ಈಶ್ವರ ಭಟ್ ನೆಗಳಗುಳಿ, ಹರಿಶ್ಚಂದ್ರ ಪುರೋಹಿತ್ ನಾಯ್ಕಾಪು, ನಿವೃತ್ತ ಮುಖ್ಯ ಅಧ್ಯಾಪಿಕೆ ಪದ್ಮಾವತಿ ಟೀಚರ್ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಊರಿನ ಸಾಧಕರನ್ನು ಸನ್ಮಾನಿಸಲಾಯಿತು. ಮುರಳೀಧರ ಯಾದವ ನಾಯ್ಕಾಪು ನಿರೂಪಣೆಗೈದರು. ಜಿತೇಶ್ ನಾಯ್ಕಾಪು ವಂದಿಸಿದರು. ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ `ಸುಂದೋಪ ಸುಂದ', `ಕುಶಲವ' ಎಂಬ ಪ್ರಸಂಗಗಳ ಯಕ್ಷಗಾನ ಮನಸೂರೆಗೊಂಡಿತು.
ಬೆಳಿಗ್ಗೆ ಶ್ರೀಕೃಷ್ಣ ವೇಷಧಾರಿ ಮಕ್ಕಳನ್ನು ನಾಯ್ಕಾಪು ಅಂಗನವಾಡಿಯಿಂದ ಮೆರವಣಿಗೆ ಮೂಲಕ ಸ್ಪಧರ್ಾ ಸ್ಥಳಕ್ಕೆ ಕರೆ ತರಲಾಯಿತು. ನಂತರ ಮುದ್ದುಕೃಷ್ಣ ವೇಷ ಸ್ಪದರ್ೆ ಜರಗಿತು. ಮಧ್ಯಾಹ್ನ ಅನ್ನದಾನ ನಡೆಯಿತು. ಬಳಿಕ ಸಂಜೆ 3 ಗಂಟೆಯಿಂದ ಸಾರ್ವಜನಿಕ ಮೊಸರುಕುಡಿಕೆ ಸ್ಪಧರ್ೆಯು ಜರಗಿತು. ಸುಮಾರು 26 ರಷ್ಟು ತಂಡಗಳು ಭಾಗವಹಿಸಿದ್ದವು.