HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಸೆ.9 : ಬೆಂಗಳೂರಿನಲ್ಲಿ ಕಾಸರಗೋಡು ಚಿನ್ನಾ ಅವರಿಗೆ ರಂಗ ಗೌರವ
    ಕಾಸರಗೋಡು: ಕನರ್ಾಟಕ ಮತ್ತು ಕೇರಳದ ಸಾಂಸ್ಕೃತಿಕ ಕೊಂಡಿ, ನಟನೆ, ನಿದರ್ೇಶನ, ಸಂಗೀತ, ಸಾಹಿತ್ಯ, ಭಾಷಾಂತರ, ಸಂಘಟನೆ, ರಂಗಭೂಮಿ, ಸಿನಿಮಾ ಹೀಗೆ ಬದುಕಿನ ಎಲ್ಲಾ ಆಯಾಮಗಳಿಗೆ ತೆರೆದುಕೊಂಡಿರುವ ಕಾಸರಗೋಡು ಚಿನ್ನಾ ಅವರಿಗೆ ಸೆ.9 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಅಭಿನಂದನೆ ಮತ್ತು ರಂಗಗೌರವ ಕಾರ್ಯಕ್ರಮ ಜರಗಲಿದೆ. ಭಾಗವತರು ಸಾಂಸ್ಕೃತಿಕ ಸಂಘಟನೆ ಮತ್ತು ಚಿನ್ನಾ ಗೆಳೆಯರು ಆಯೋಜಿಸಿದ ಕಾರ್ಯಕ್ರಮದಲ್ಲಿ ಚಿನ್ನ ಚಿತ್ತಾರ ಕಾಸರಗೋಡು ಚಿನ್ನಾ ವಿಚಾರಗೋಷ್ಠಿ, ಗಾಯನ, ಅಭಿನಂದನೆ  ನಡೆಯಲಿದೆ.
   ಮಧ್ಯಾಹ್ನ 3 ಗಂಟೆಗೆ ನಡೆಯುವ ವಿಚಾರಗೋಷ್ಠಿಗೆ ರಂಗ ಸಂಘಟಕ ಕೆ.ವಿ.ನಾಗರಾಜಮೂತರ್ಿ ಚಾಲನೆ ನೀಡುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸುವರು. ಚಿನ್ನಾ - ರಂಗಭೂಮಿ ಬಗ್ಗೆ ಮಂಡ್ಯ ರಮೇಶ್, ಚಿನ್ನಾ - ಸಿನಿಮಾ ಬಗ್ಗೆ ನಿದರ್ೇಶಕ ಬಿ.ಸುರೇಶ್, ಚಿನ್ನಾ - ಸಾಹಿತ್ಯ ಬಗ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ಪೈ, ಚಿನ್ನಾ - ಸಂಘಟನೆ ಬಗ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ನಾ.ದಾಮೋದರ ಶೆಟ್ಟಿ ಮಾತನಾಡಲಿದ್ದಾರೆ.
   ಸಂಜೆ 5.30 ಕ್ಕೆ ಸೀಮಾ ರಾಯ್ಕರ್ ಮತ್ತು ಬಿ.ಪಿ.ಗೋಪಾಲಕೃಷ್ಣ ಅವರಿಂದ ಗಾಯನ ನಡೆಯಲಿದೆ. ಸಂಜೆ 6 ಕ್ಕೆ ಕಾಸರಗೋಡು ಚಿನ್ನಾ ದಂಪತಿಗಳಿಗೆ ರಂಗ ಗೌರವ ನಡೆಯಲಿದ್ದು ಖ್ಯಾತ ಉದ್ಯಮಿ ಡಾ.ಪಿ.ದಯಾನಂದ ಪೈ ಉದ್ಘಾಟಿಸುವರು. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಎಚ್.ಜಿ.ದತ್ತಣ್ಣ ಅಧ್ಯಕ್ಷತೆ ವಹಿಸುವರು. ರಂಗಭೂಮಿ, ಚಲನ ಚಿತ್ರ ನಟಿ, ರಂಗಭೂಮಿ ಕಲಾವಿದೆ ಉಮಾಶ್ರೀ ಅಭಿನಂದನಾ ನುಡಿಯನ್ನಾಡುವರು. ನಾಟಕಕಾರರಾದ ಡಿ.ಕೆ.ಚೌಟ, ಚಲನಚಿತ್ರ ನಟ ರಾಮಕೃಷ್ಣ ಶ್ರೀಧರ್, ನಟಿ ವಿಜಯಲಕ್ಷ್ಮೀ ಸಿಂಗ್, ಖ್ಯಾತ ಸಾಹಿತಿ ಶಾ.ಮಂ.ಕೃಷ್ಣ ರಾವ್ ಶುಭಹಾರೈಸುವರು. ಪತ್ರಕರ್ತ ರವೀಂದ್ರ ಜೋಷಿ, ಶಿವಲಿಂಗ ಪ್ರಸಾದ್ ಉಪಸ್ಥಿತರಿರುವರು.
  ಭಾಗವತರು ಯಾರು!?:
   ರಂಗಭೂಮಿ, ಸುಗಮ ಸಂಗೀತ, ಸಾಹಿತ್ಯ, ಕಲೆ ಸಹಿತ ಬಹು ವಿಧ ವಿಚಾರಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಕಲಾ ಸ್ನೇಹಿ ಸಂಘಟನೆಯಾಗಿದೆ. ಈ ಸಂಘಟನೆಯು ಈವರೆಗೆ 17 ನಾಟಕೋತ್ಸವಗಳನ್ನು ಆಯೋಜಿಸಿರುವುದೂ ಹಿರಿಮೆಯ ಗರಿಯಾಗಿ ಗುರುತಿಸಲ್ಪಟ್ಟಿದೆ. ರಂಗಭೂಮಿಯನ್ನು ವರ್ತಮಾನಕ್ಕೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಮುಂದಿರುವ ಭಾಗವತ ಸಂಘಟನೆ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲೂ ತನ್ನ ಸೇವೆಯ ವ್ಯಾಪಕತ್ವವನ್ನು ದಾಖಲಿಸಿದೆ.ಸಾಂಸ್ಕೃತಿಕ ಪಾರಿಚಾರಿಕೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾಗವತರು ಸಂಘಟನೆಯ ಅಹನರ್ಿಶಿ ಕಲಾ ಸಾಹಿತ್ಯ ಯಾನ ಕನ್ನಡ ನಾಡು-ನುಡಿ ಕಟ್ಟುವಿಕೆಯಲ್ಲಿ ಮಹತ್ವವಾದ್ದು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries