HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಸಾಯಿರಾಂ ಭಟ್ ರಿಗೆ ನೀಚರ್ಾಲಿನಲ್ಲಿ ಸನ್ಮಾನ   
     ಬದಿಯಡ್ಕ: ನೀಚರ್ಾಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಕೊಡುಗೈದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಕಿಳಿಂಗಾರು ಅವರನ್ನು ಸನ್ಮಾನಿಸಲಾಯಿತು.
ಶ್ರೀ ಗಣೇಶ ಚತುಥರ್ಿಯ ಶುಭದಿನದಂದು ನೀಚರ್ಾಲು ಅಶ್ವತ್ಥಕಟ್ಟೆ ಪರಿಸರದಲ್ಲಿ  ಗಣಪತಿ ಹವನ, ಶ್ರೀ ಸತ್ಯವಿನಾಯಕ ಪೂಜೆಯ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರನ್ನು ಶಾಲು ಹೊದೆಸಿ ಫಲಪುಷ್ಪಗಳನ್ನಿತ್ತು ಗೌರವಿಸಲಾಯಿತು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಧಾಮರ್ಿಕ ಮುಂದಾಳು ಬಿ. ವಸಂತ ಪೈ ಬದಿಯಡ್ಕ ಧಾಮರ್ಿಕ ಭಾಷಣ ಮಾಡಿದರು. ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಸಜ್ಜನ ಭಕ್ತ ಬಾಂಧವರ ಧಾಮರ್ಿಕ ನಂಬಿಕೆಗಳು ಸಹಿತ ಅವರಲ್ಲಿನ ಆಸ್ತಿಕ ಗುಣಗಳು ದೇವತಾ ಸಾನ್ನಿಧ್ಯಗಳ ಭೌತಿಕ ಅಭಿವೃದ್ಧಿಗೆ ಮತ್ತು ಆಧ್ಯಾತ್ಮಿಕ ಶಕ್ತಿಕೇಂದ್ರನೆಲೆಯಾಗಲು ಸಹಕಾರಿಯಾಗುತ್ತವೆ. ಆಧುನಿಕ ಪರಿವರ್ತನೆಯ ಯುಗದಲ್ಲಿ ನಂಬಿಕೆಗಳೇ ಮಾನವೀಯ ಅಭ್ಯುದಯಕ್ಕೆ ನಾಂದಿ ಹಾಡುತ್ತವೆ. ಶ್ರೀ ದೇವರ ಕಾರ್ಯದಲ್ಲಿ ಸಕ್ರಿಯವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಆಡಂಭರದ ಉತ್ಸವಗಳು ನಮ್ಮದಾಗಬಾರದು. ಭಕ್ತಿಯಲ್ಲಿ ಆಢಂಬರವನ್ನು ತೋರಿಸಬೇಕು. ಫಲಾಫೇಕ್ಷೆ ನಿರೀಕ್ಷಿಸದೆ ಸೇವೆಯನ್ನು ಮಾಡಿದಲ್ಲಿ ದೇವರ ಅನುಗ್ರಹ ಸದಾ ಇರುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಯನ್. ಕೃಷ್ಣ ಭಟ್, ಗ್ರಾಮಪಂಚಾಯತ್ ಸದಸ್ಯೆ ಪ್ರೇಮಾ ಪಾಲ್ಗೊಂಡು ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಗಣೇಶೋತ್ಸವ ಸಮಿತಿಯ ಕೋಶಾಧಿಕಾರಿ ಬಾಲಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಉಪಾಧ್ಯಕ್ಷ ರವೀಂದ್ರ ಮಾಸ್ತರ್ ನೀಚರ್ಾಲು ವಂದಿಸಿದರು. ಸೀತಾರಾಮ ಆಚಾರ್ಯ ನೀಚರ್ಾಲು ನಿರೂಪಣೆಗೈದರು. ವಿಷ್ಣುಶರ್ಮ ನೂಜಿಲ ಅಭಿನಂದನಾಪತ್ರವನ್ನು ವಾಚಿಸಿದರು. ವೇದಮೂತರ್ಿ ಕಿಳಿಂಗಾರು ಶಂಕರನಾರಾಯಣ ಭಟ್ಟ ಪಾಂಡೇಲು ವೈದಿಕ ಪ್ರಾರ್ಥನೆ ನಡೆಸಿಕೊಟ್ಟರು.
ಬೆಳಗ್ಗೆ ದೀಪ ಪ್ರತಿಷ್ಠೆ, ಗಣಪತಿ ಹವನ, ಕಿಳಿಂಗಾರು ವೇದಮೂತರ್ಿ ಶಿವಶಂಕರ ಭಟ್ಟ ಪಾಂಡೇಲು ಇವರ ನೇತೃತ್ವದಲ್ಲಿ ಶ್ರೀ ಸತ್ಯವಿನಾಯಕ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ, ಭಜನಾ ಸಾಮ್ರಾಟ್ ಮಧೂರು ಇವರಿಂದ ವಿಶೇಷ ಭಜನಾ ಕಾರ್ಯಕ್ರಮ, ಸ್ವರಸಿಂಚನ ಸುಗಮ ಸಂಗೀತ ಬಳಗ ಸುಳ್ಯ ಇವರಿಂದ `ಭಕ್ತಿ ರಸಮಂಜರಿ', ಸಂಜೆ ತಲ್ಪಣಾಜೆ ವೆಂಕಟ್ರಮಣ ಭಟ್ ಮತ್ತು ಬಳಗದವರಿಂದ ಯಕ್ಷಗಾನ ಗಾನ ವೈಭವ, ಶ್ರೀಕೃಷ್ಣ ಬಾಲಗೋಕುಲ, ಅರಿಯಪ್ಪಾಡಿ ಮಾಡ ಇವರಿಂದ ನೃತ್ಯ ವೈವಿಧ್ಯದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries