ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪಾಲ್ಗೊಳ್ಳದ ಕೇರಳ : ಪಿ.ಎಸ್.ಶ್ರೀಧರನ್ ಪಿಳ್ಳೆ ಆರೋಪ
ಕಾಸರಗೋಡು: ವಾಷರ್ಿಕ 5 ಲಕ್ಷ ರೂಪಾಯಿಗಳ ಸಂರಕ್ಷಣೆಯನ್ನು ಒದಗಿಸುವ ಉದ್ದೇಶದ ಆಯುಷ್ಮಾನ್ ಭಾರತ್ ಯೋಜನೆಯನ್ನು ಅನುಷ್ಠಾನಕ್ಕೆ ತಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚಾಗಬಹುದು ಮತ್ತು ಅದರ ಕೀತರ್ಿ ಅವರಿಗೆ ಸಲ್ಲಬಹುದೆಂಬ ಭೀತಿಯಿಂದ ಕೇರಳವು ಈ ಯೋಜನೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿತೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ಆರೋಪಿಸಿದ್ದಾರೆ.
ಈಗಿರುವ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ (ಆರ್ಎಸ್ಬಿವೈ)ಯಡಿ 1,250ರೂ. ಗಳ ಪ್ರೀಮಿಯಂ ಅನ್ನು ಠೇವಣಿಯಾಗಿರಿಸಿದಾಗ 30,000ರೂ. ಗಳ ರಕ್ಷೆ ಲಭ್ಯವಾಗುತ್ತದೆ. ಆದರೆ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್ ಯೋಜನೆಯಡಿ ಜನರು 1,110 ರೂ. ಗಳ ಪ್ರೀಮಿಯಂಗೆ 5 ಲಕ್ಷ ರೂ. ಗಳ ಸಂರಕ್ಷೆಗೆ ಅರ್ಹರಾಗುತ್ತಾರೆ. ಅದು ಕಿಡ್ನಿ ರೋಗಿಗಳು ಸಹಿತ ಎಲ್ಲರಿಗೂ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಯೋಜನೆಯನ್ನು ತಿರಸ್ಕರಿಸಲು ರಾಜ್ಯದ ಎಡರಂಗ ಸರಕಾರಕ್ಕೆ ಎಷ್ಟು ಮತ್ತು ಹೇಗೆ ಧೈರ್ಯ ಬಂತು ಎಂದವರು ಪ್ರಶ್ನಿಸಿದರು. ಕಲ್ಲಿಕೋಟೆ ಪ್ರೆಸ್ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.
ಆಯುಷ್ಮಾನ್ ಭಾರತ್ ಯೋಜನೆಯು ಒಂದು ಹಗರಣ ಎಂಬ ಕೇರಳದ ಹಣಕಾಸು ಸಚಿವ ಡಾ.ಟಿ.ಎಂ.ಥೋಮಸ್ ಐಸಾಕ್ ಅವರ ಆರೋಪಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಪಿ.ಎಸ್.ಶ್ರೀಧರನ್ ಪಿಳ್ಳೆ ಅವರು ಥೋಮಸ್ ಐಸಾಕ್ ಓರ್ವ ವಂಚಕನಾಗಿರುವುದರಿಂದ ಅವರು ಹಾಗೆ ತಿಳಿದಿರಬಹುದು ಎಂದರು. ಸರಕಾರವು ಕುರುಡು ರಾಜಕೀಯ ವೈಷಮ್ಯದಿಂದಾಗಿ ಕೇಂದ್ರ ಸರಕಾರದ ಉಪಯುಕ್ತ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲು ಹಿಂದೇಟು ಹಾಕುತ್ತಿದೆ ಎಂದು ಹೇಳಿದರು. ಪಿಣರಾಯಿ ವಿಜಯನ್ ಸರಕಾರವು ತನ್ನ ತೀಮರ್ಾನವನ್ನು ಮರುಪರಿಶೀಲಿಸದಿದ್ದಲ್ಲಿ ಬಿಜೆಪಿ ಪ್ರಬಲ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದವರು ಎಚ್ಚರಿಕೆ ನೀಡಿದರು.
* ಮೂವರು ಪಾದ್ರಿಗಳು ಬಿಜೆಪಿಯನ್ನು ಸೇರಿದ್ದಾರೆಂಬುದು ನಿಜ. ಭವಿಷ್ಯದಲ್ಲಿ ಇನ್ನಷ್ಟು ಮಂದಿ ಪಕ್ಷವನ್ನು ಸೇರಲಿದ್ದಾರೆ. ಬಿಜೆಪಿ ಕುರಿತು ಅಲ್ಪಸಂಖ್ಯಾತರಲ್ಲಿ ಆತಂಕವನ್ನು ಸೃಷ್ಟಿಸಿದ ರಮೇಶ್ ಚೆನ್ನಿತ್ತಲ ಮತ್ತು ಕೊಡಿಯೇರಿ ಬಾಲಕೃಷ್ಣನ್ ಅವರ ತಂತ್ರ ಇನ್ನು ಮುಂದೆ ನಡೆಯದು. ಇನ್ನಾದರೂ ಕಾಂಗ್ರೆಸ್ ಮತ್ತು ಸಿಪಿಎಂ ಮುಖಂಡರು ಬಿಜೆಪಿ ವಿಚಾರಕ್ಕೆ ಬಾರದಿರುವುದು ಒಳಿತು. ಅಲ್ಲದೆ ಬಿಜೆಪಿಯು ಕೇರಳದಲ್ಲಿ ಭಾರೀ ಬೆಳವಣಿಗೆ ಹೊಂದುತ್ತಿರುವುದು ಗಮನಾರ್ಹ ವಿಷಯವಾಗಿದೆ.
ಪಿ.ಎಸ್.ಶ್ರೀಧರನ್ ಪಿಳ್ಳೆ,
ಅಧ್ಯಕ್ಷರು, ಬಿಜೆಪಿ ಕೇರಳ ರಾಜ್ಯ ಸಮಿತಿ