ಬಂಬ್ರಾಣದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ-ಗೌರವಾರ್ಪಣೆ
ಕುಂಬಳೆ: ಬಂಬ್ರಾಣ ಸಾಕ್ಷರತಾ ಕೇಂದ್ರದಲ್ಲಿ ವಿಶ್ವ ಸಾಕ್ಷರತಾ ದಿನಾಚರಣೆ ಹಾಗೂ ಹಿರಿಯ ಸಾಕ್ಷರತಾ ವಿದ್ಯಾಥರ್ಿಯವರಿಗೆ ಗೌರವಾರ್ಪಣೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡುವ ತರಗತಿ ಮೊದಲಾದ ಕಾರ್ಯಕ್ರಮಗಳು ಶನಿವಾರ ನಡೆಯಿತು.
ಚೈಲ್ಡ್ ಲೈನ್ ಕಾಸರಗೋಡು ಹಾಗೂ ನಿರಂತರ ಕಲಿಕಾ ಕೇಂದ್ರ, ಕುಂಬಳೆ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೈಲ್ಡ್ ಲೈನ್ ನಿದರ್ೇಶಕರಾದ ಅಬ್ದುಲ್ ರಹಿಮಾನ್ ರವರು ವಹಿಸಿದರು.ಕುಂಬಳೆ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಆರಿಫ್ ಉದ್ಘಾಟಿಸಿದರು. ಬಳಿಕ ಸಾಕ್ಷರತಾ ಕೇಂದ್ರದ ಹಿರಿಯ ವಿದ್ಯಾಥರ್ಿಯವರಾದ ಸುಂದರ ಆರಿಕ್ಕಾಡಿ ಯವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಚೈಲ್ಡ್ ಲೈನ್ ಸಂಯೋಜನಾಧಿಕಾರಿ ಉದಯಕುಮಾರ್ ಮುಂಡೋಡು 'ಮಕ್ಕಳ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರ'ಎಂಬ ವಿಷಯದ ಬಗ್ಗೆ ತರಗತಿ ನಡೆಸಿದರು.ಚೈಲ್ಡ್ ಲೈನ್ ಕೌನ್ಸಿಲರಾದ ರಮ್ಯ ಎನ್, ರಮ್ಯಾ ಎಮ್. ಉಪಸ್ಥಿತರಿದ್ದರು.