HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಮಾತೆಯರಿಂದ ಭಗವಾನ್ ಕೃಷ್ಣನ ಸಂದೇಶಗಳು ಪಸರಿಸಲ್ಪಡಬೇಕು-ಪವಿತ್ರನ್ ಕೆ.ಕೆ.ಪುರಂ
                         ಜಯನಗರ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಹೇಳಿಕೆ       
   ಬದಿಯಡ್ಕ: ಧರ್ಮವು ಭಾರತೀಯ ಸಂಸ್ಕೃತಿಯ ಭದ್ರವಾದ ಅಡಿಪಾಯವಾಗಿದೆ. ದೇಶೀಯತೆ, ರಾಷ್ಟ್ರೀಯತೆಯ ಚಿಂತನೆಯಿರುವ ಮುಂದಿನ ಸಮಾಜದ ಸೃಷ್ಟಿಗೆ ಮಾತೆಯರು ತಮ್ಮ ಮಕ್ಕಳಿಗೆ ಶ್ರೀಕೃಷ್ಣನ ಆದರ್ಶವನ್ನು ತಿಳಿಸಿಕೊಡುವಲ್ಲಿ ಹೆಚ್ಚಿನ ಮುತುವಜರ್ಿ ವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಸರಗೋಡು ತಾಲೂಕು ಕಾರ್ಯವಾಹ್ ಪವಿತ್ರನ್ ಕೆ.ಕೆ.ಪುರಮ್ ತಿಳಿಸಿದರು.
ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಧಾಮರ್ಿಕಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಅಧಾಮರ್ಿಕ ಶಕ್ತಿ ಪ್ರಪಂಚವನ್ನು ನಡುಗಿಸುತ್ತಿರುವ ಸಂದರ್ಭದಲ್ಲಿ ಧರ್ಮ ಸ್ಥಾಪನೆಗಾಗಿ ಶ್ರೀಕೃಷ್ಣ ಪರಮಾತ್ಮನು ಆವಿರ್ಭವಿಸಿದನು. ವಿಶ್ವದಲ್ಲಿ ಅನೇಕ ಸಂಸ್ಕೃತಿಗಳಿದ್ದುವು, ಆದರೆ ಅವೆಲ್ಲವೂ ನಶಿಸಿ ನಾಮಾವಶೇಷವಾಗಿದೆ. ವಿಶ್ವದಲ್ಲಿಯೇ ಚಚರ್ೆಗೊಳಪಟ್ಟ, ಸಾಕಷ್ಟು ಹೊಡೆತಗಳನ್ನು ಅನುಭವಿಸಿದ, ಆಕ್ರಮಣಕ್ಕೊಳಗಾದ, ಅತಿಪುರಾತನ ಸಂಸ್ಕೃತಿಯು ಇಂದು ಕೂಡ ಭೂಮಿಯಲ್ಲಿ ಉಳಿದಿದೆ. ಅದುವೇ ನಮ್ಮ ಸನಾತನ ಹಿಂದೂ ಸಂಸ್ಕೃತಿಯಾಗಿದೆ, ಭಾರತೀಯ ಸಂಸ್ಕಾರವಾಗಿದೆ. ನಾಶಮಾಡಲು ಹೊರಟವರೇ ನಾಶವಾಗಿದ್ದಾರೆ ಎಂದರು. ಹಿಂದಿನ ಕಾಲದಲ್ಲಿ ಹಿಂದೂ ಸಂಸ್ಕೃತಿಯನ್ನು ಉಳಿಸುವಲ್ಲಿ ಮಾತೆಯರು ಪ್ರಧಾನ ಪಾತ್ರ ವಹಿಸಿದ್ದರು. ಈ ಪುರಾತನ ಸಂಸ್ಕೃತಿಯನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ. ಸಂಸ್ಕೃತಿಗೆ ಆದರ್ಶವಾಗಿ ಶ್ರೀಕೃಷ್ಣ ಪರಮಾತ್ಮನ ಕಥೆಯನ್ನು ಮಕ್ಕಳಿಗೆ ತಿಳಿಸಬೇಕು. ಕಷ್ಟಗಳನ್ನು ಸಮರ್ಥವಾಗಿ ಎದುರಿಸುವ ಆತ್ಮಬಲವನ್ನು ಮಕ್ಕಳಲ್ಲಿ ತುಂಬಿಸಬೇಕು. ಪ್ರಕೃತಿಯನ್ನು ಆರಾಧಿಸುವ, ಪೂಜಿಸುವ ನಾವು ಭಜನೆ, ಪೂಜೆ ಪುರಸ್ಕಾರಗಳ ಮೂಲಕ ತನ್ನನ್ನು ತಾನು ಎತ್ತರಕ್ಕೊಯ್ಯಬೇಕು. ಪ್ರತಿಯೊಂದು ಉತ್ಸವಗಳ, ಆಚಾರಗಳ ಅನುಷ್ಠಾನದಲ್ಲಿ ಮಹತ್ವವಿದೆ. ಅವುಗಳಲ್ಲಿರುವ ಶಾಸ್ತ್ರೀಯತೆಯನ್ನು ತಿಳಿದು ನಾವು ಆಚರಿಸಬೇಕು ಎಂದರು.
ಎಳೆ ಪ್ರಾಯದಲ್ಲಿ ಮಕ್ಕಳಿಗೆ ಎದೆಹಾಲು ನೀಡುವ ತಾಯಂದಿರ ಮನಸ್ಸು ಪರಿಶುದ್ಧವಾಗಿರಬೇಕು. ಓರ್ವ ಶ್ರೇಷ್ಠ ಪ್ರಜೆಯಾಗಿ ಈ ಮಗು ಬಾಳಬೇಕೆಂಬ ಹಂಬಲ ತಾಯಿಯಲ್ಲಿರಬೇಕು. ಹಾಗಿದ್ದಲ್ಲಿ ಆತ ವಿಶ್ವವನ್ನೇ ಮುನ್ನಡೆಸುವ ಸಾಮಥ್ರ್ಯವಿರುವ ಪ್ರಜೆಯಾಗಬಲ್ಲನು ಎಂದರು.
ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ಟರ್ ಅಗಲ್ಪಾಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಶ್ವಹಿಂದೂಪರಿಷತ್ ಮಂಗಳೂರು ಜಿಲ್ಲೆಯ ಕೋಶಾಧ್ಯಕ್ಷ ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ ಶುಭಾಶಂಸನೆಗೈದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ಬಾಬು ಮಣಿಯಾಣಿ ಜಯನಗರ ಪ್ರತಿಭಾ ಪುರಸ್ಕಾರವನ್ನು ನೀಡಿದರು. ಅಗಲ್ಪಾಡಿ ಯಾದವ ಸೇವಾ ಸಂಘದ ಅಧ್ಯಕ್ಷ ಕುಂಞಿರಾಮ-ನಾರಾಯಣ ಮಣಿಯಾಣಿ ಮಾರ್ಪನಡ್ಕ ಬಹುಮಾನ ವಿತರಿಸಿದರು.
ವೇದಿಕೆಯಲ್ಲಿ ಜನಾರ್ದನ ಮಣಿಯಾಣಿ ಬೆದ್ರುಕೂಡ್ಲು, ಬಾಬು ಮಣಿಯಾಣಿ ಜಯನಗರ, ಶ್ರೀ ಮಂದಿರದ ಅರ್ಚಕ ನಾರಾಯಣ ಭಟ್, ನಾರಾಯಣ ಮಣಿಯಾಣಿ ಪದ್ಮಾರು, ಸುಧಾಮ ಮಣಿಯಾಣಿ ಪದ್ಮಾರು, ಮೋಹನ ಪದ್ಮಾರು, ವಸಂತಿ ಟೀಚರ್ ಅಗಲ್ಪಾಡಿ, ಕಾರ್ಯಕ್ರಮದ ಪ್ರ.ಸಂಚಾಲಕ ರಾಜೇಶ್ ಮಾಸ್ಟರ್ ಅಗಲ್ಪಾಡಿ ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಪ್ರಧಾನ ಕಾರ್ಯದಶರ್ಿ ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ, ಅಗಲ್ಪಾಡಿ ಯಾದವ ಸೇವಾ ಸಂಘದ ಪ್ರಧಾನ ಕಾರ್ಯದಶರ್ಿ ನಾರಾಯಣ ಪದ್ಮಾರು ಧನ್ಯವಾದವನ್ನಿತ್ತರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಕಾರ್ಯದಶರ್ಿ ಅಚ್ಚುತ ಮಾಸ್ಟರ್ ಅಗಲ್ಪಾಡಿ ನಿರೂಪಣೆಗೈದರು. ಮಾನಸ ಅಗಲ್ಪಾಡಿ ಮತ್ತು ಬಳಗದವರಿಂದ ಪ್ರಾರ್ಥನೆ ನಡೆಯಿತು. ಅನೀಶ್ ಪಿ.ಜಿ. ರಕ್ಷಿತ್ ಎ.ಎಸ್., ಸ್ಪೂತರ್ಿಕಾ ಕೆ., ಉಷಾ ಕಡಾರು ಅಗಲ್ಪಾಡಿ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾದರು.
ಬೆಳಗ್ಗೆ ಶ್ರೀದೇವರಿಗೆ ಪೂಜೆ, ವಿವಿಧ ಸ್ಪಧರ್ೆಗಳು, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರಿ ಕ್ಷೇತ್ರದಿಂದ ಶ್ರೀ ಮಂದಿರಕ್ಕೆ ಮುದ್ದುಕೃಷ್ಣ ರಾಧೆಯರ ವೇಷದೊಂದಿಗೆ ಉಜ್ವಲ ದೃಶ್ಯವೈಭವದ ಸಡಗರದ ಘೋಷಯಾತ್ರೆಯಲ್ಲಿ ನೂರಾರು ಪುಟಾಣಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡರು. ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರಿ ಕ್ಷೇತ್ರದ ವತಿಯಿಂದ ಹಾಗೂ ಶ್ರೀದುಗರ್ಾ ಫ್ರೆಂಡ್ಸ್ ಕ್ಲಬ್ ಪಾನೀಯವನ್ನು ನೀಡಿ ಸಹಕರಿಸಿದರು. ರಾತ್ರಿ ಭಜನೆ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
  ಸಂತಾನ ಪ್ರಾಪ್ತಿಗಾಗಿ ಪ್ರಾರ್ಥನೆ :
ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಅದೆಷ್ಟೋ ಭಕ್ತಾದಿಗಳು ಸಂತಾನಕ್ಕಾಗಿ ಪ್ರಾಥರ್ಿಸುತ್ತಾರೆ. ತಮ್ಮ ಬೇಡಿಕೆ ಈಡೇರಿದ ನಂತರ ಗಂಡು ಮಗುವಾದರೆ ಶ್ರೀಕೃಷ್ಣನ ವೇಷ, ಹೆಣ್ಣು ಮಗುವಾದರೆ ರಾಧೆಯ ವೇಷವನ್ನು ಶ್ರೀಕೃಷ್ಣಜನ್ಮಾಷ್ಟಮಿಯಂದು ತೊಡಿಸಿ ಹರಕೆ ಸಲ್ಲಿಸುತ್ತಿರುವುದು ವಾಡಿಕೆಯಾಗಿದೆ. ಈ ವರ್ಷ 65ಕ್ಕಿಂತಲೂ ಹೆಚ್ಚು ಮಕ್ಕಳು ಶ್ರೀಕೃಷ್ಣ ರಾಧೆಯರ ವೇಷದಲ್ಲಿ ಸಂಭ್ರಮಿಸಿದ್ದು, 10ಕ್ಕಿಂತ ಹೆಚ್ಚು ಮಕ್ಕಳ ಹೆತ್ತವರು ಹರಕೆಯ ರೂಪದಲ್ಲಿ ಸೇವೆ ಸಲ್ಲಿಸಿದ್ದರು.




 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries