HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಪೈವಳಿಕೆಯಲ್ಲಿ ಮೇಜರ್ ಸಾಹಿತ್ಯ ಗೋಷ್ಠಿ
   ಉಪ್ಪಳ: ಈ ನೆಲದ ಶ್ರೀಮಂತ ಸಂಸ್ಕೃತಿಯಲ್ಲಿ ಮಾತೆಯರಿಗಿರುವ ವಿಶೇಷ ಸ್ಥಾನ-ಮಾನಗಳು ವಿಶಿಷ್ಟವಾದುದು. ಕೌಟುಂಬಿಕ ವ್ಯವಸ್ಥೆಯ ನಿರ್ವಹಣೆಯೊಂದಿಗೆ ಆಧುನಿಕ ಮಹಿಳೆಯರು ಸಾಮಾಜಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಸಾಹಿತಿ, ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅಭಿಪ್ರಾಯ ವ್ಯಕ್ತಪಡಿಸಿದರು.
    ಗ್ರಂಥಾಲಯ ದಿನಾಚರಣೆಯ ಅಂಗವಾಗಿ ಪೈವಳಿಕೆ ಮೇಜರ್ ಯೂತ್ ಕ್ಲಬ್ ಲೈಬ್ರರಿ ಆಶ್ರಯದಲ್ಲಿ ಶುಕ್ರವಾರ ಗ್ರಂಥಾಲಯದಲ್ಲಿ ಆಯೋಜಿಸಲಾದ ಸಾಹಿತ್ಯ ಗೋಷ್ಠಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
  ಹೊಸ ತಲೆಮಾರಿಗೆ ಸಾಕಷ್ಟು ಅವಕಾಶಗಳು ಲಭ್ಯವಿದ್ದು, ಸಮರ್ಪಕ ಬಳಕೆಯ ಮೂಲಕ ಭವಿಷ್ಯತ್ತಿನ ಉನ್ನತಿಗೆ ಬಳಸುವ ಚಾಕಚಕ್ಯತೆಯನ್ನು ಮೈಗೂಡಿಸಬೇಕು. ಗ್ರಾಮೀಣ ಪ್ರದೇಶಗಳ ಮಹಿಳೆಯರು ಸಂಸ್ಕೃತಿ ಸಂವರ್ಧನೆಯಲ್ಲಿ ಪ್ರಧಾನ ಪಾತ್ರವಹಿಸುತ್ತಿದ್ದು, ಸಮಾಜದ ಬೆಂಬಲ ಅಗತ್ಯವಿದೆ ಎಂದು ಅವರು ತಿಳಿಸಿದರು. ಮನೆಯ ಮಕ್ಕಳ ಭವಿಷ್ಯವನ್ನು ರೂಪಿಸುವ ಮಹಿಳೆಯರು ಜೊತೆಜೊತೆಗೆ ಒಟ್ಟು ಕುಟುಂಬವನ್ನು ಮುನ್ನಡೆಸುತ್ತ ತನ್ನ ಬೆಳವಣಿಗೆಯ ಸಾಧ್ಯತೆಗಳಿಗೂ ಆದ್ಯತೆ ನೀಡಿ ಇನ್ನಷ್ಟು ಸಾಧನೆಗೆ ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು. ಗ್ರಂಥಾಲಯಗಳನ್ನು ಜನರು ಬಳಸಿ ಆ ಮೂಲಕ ವಿಷಯ ಸಂಪಾದನೆಗೆ ಮಹತ್ವ ನೀಡಿ ಸುಂದರ ಸಮಾಜ ನಿಮರ್ಾಣಕ್ಕೆ ಕಾರಣರಾಗಬೇಕು ಎಂದು ಕರೆನೀಡಿದರು.     
  ಪೈವಳಿಕೆ ಗ್ರಾ.ಪಂ. ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿಸೋಜ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಪೈವಳಿಕೆ ಗ್ರಾ.ಪಂ. ಅಧ್ಯಕ್ಷ ಭಾರತೀ ಜೆ.ಶೆಟ್ಟಿ ಉದ್ಘಾಟಿಸಿದರು. ಶಶಿಕಲಾ, ಮಾಲತಿ, ಗುಲಾಬಿ, ರಾಜೀವಿ ಮೊದಲಾದವರು ಉಪಸ್ಥಿತರಿದ್ದರು. ಗ್ರಂಥಾಲಯದ ಅಧ್ಯಕ್ಷೆ ಕದೀಜಾ ಝೌರಾ ಸ್ವಾಗತಿಸಿ, ಕಾರ್ಯದಶರ್ಿ ಸುಜಾತಾ ಬಿ.ರೈ ವಂದಿಸಿದರು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries