ಗಣೇಶೋತ್ಸವ -ವೈಭವ
ನಾಡಿನೆಲ್ಲೆಡೆ ಈಗ ಶ್ರೀಗಣೇಶೋತ್ಸವದ ಸಂಭ್ರಮದ ಮಧ್ಯೆ ಉತ್ಸವದ ಆಚರಣಾ ಮಹತ್ವದ ಬಗ್ಗೆ ಮಾಹಿತಿಯೊಂದನ್ನು ಸಮರಸ ಸುದ್ದಿ ಓದುಗರಿಗೆ ನೀಡುತ್ತಿದ್ದು, ಹೆಸರಾಂತ ಕವಿ, ಲೇಖಕ ಕೆ.ಗೋಪಾಲಕೃಷ್ಣ ಭಟ್ ಕಟ್ಟತ್ತಿಲ ಇಲ್ಲಿ ಬರೆದಿದ್ದಾರೆ.
ಓಂ ಲಂಬೋದರಂ ಪರಮಸುಂದರಮೇಕದಂತಂ
ರಕ್ತಾಂಬರಂ ತ್ರಿನಯನಂ ಪರಮಂ ಪವಿತ್ರಮ್|
ಉದ್ಯದ್ದಿವಾಕರೋಜ್ವಲ ಕಾಯಕಾಂತಂ
ವಿಘ್ನೇಶ್ವರಂ ಸಕಲ ವಿಘ್ನಹರಂ ನಮಾಮಿ||
ತ್ವಾಂ ದೇವ ವಿಘ್ನದಲನೇತಿ ಚ ಸುಂದರೇತಿ
ಭಕ್ತಿಪ್ರಿಯೇತಿ ಸುಖದೇತಿ ಫಲಪ್ರದೇತಿ|
ವಿದ್ಯಾಪ್ರದೇತ್ಯಘಹರೇತಿ ಚಯೇ ಸ್ತುವಂತಿ
ತೇಭ್ಯೋ ಗಣೇಶ ವರದೋ ಭವ ನಿತ್ಯಮೇವ||
ಭಾದ್ರಪದ ಶುಕ್ಲ ಚತುಥರ್ಿಯ ಮೊದಲ ಪೂಜೆ ಪಡೆವ ವಿಶ್ವಂಭರ, ಜಗದಾಧಿಪ, ಕ್ಷಿಪ್ರ ಪ್ರಸಾದ, ವಿಘ್ನವಿನಾಯಕನಾದ ಗಣೇಶ ಚತುಥರ್ಿ, ವಿಶ್ವದಾದ್ಯಂತ ಸಮಸ್ತ ಹಿಂದೂ ಸನಾತನ ಸಂಸ್ಕೃತಿಯಲ್ಲಿ ಪುರಾತನ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಪ್ರತೀ ಮನೆಮನೆಯ ಪ್ರತಿ ಮನಮನದ ಧಾಮರ್ಿಕ ಹಬ್ಬ. ಈ ದಿನ ಮಹಾಗಣಪತಿಯ ಆರಾಧನೆ, ಮಹಾಗಣಪತಿಯ ಹೋಮ, ಸಿದ್ಧಿ ವಿನಾಯಕನ, ಬುದ್ಧಿ ಪ್ರದಾಯಕನ ಪೂಜೆ ಪುನಸ್ಕಾರಗಳು ವಿಧಿವಿಧಾನಗಳಿಂದ ನಡೆದರೆ ಕೆಲವೆಡೆ ವಾರಗಟ್ಟಲೆ ತಿಂಗಳುಗಟ್ಟಲೆ ಆರಾಧಿಸಲ್ಪಡುವವು.
ವಿನಾಯಕನ, ವಿಜಯಪ್ರದನ ಪೂಜಾ ವಿಧಿ-ವಿಧಾನಗಳು ಹಿಂದಿನ ಆರ್ಯವಂಶದ ಚರಿತ್ರೆಯಲ್ಲಿಯೇ ಚಾಚೂ ತಪ್ಪದೆಯೇ ನಿಷ್ಠೆಯಿಂದ ಭಕ್ತಿ-ಶ್ರದ್ಧೆಯಿಂದ ನಡೆದುಕೊಂಡು ಬರುತ್ತಿರುವ ಸಂಗತಿ ತುಂಬಾ ಐತಿಹ್ಯಪೂರ್ಣವಾಗಿದೆಯೆಂಬುದು ಅಕ್ಷರಶ ಸತ್ಯ. ಪ್ರಮುಖವಾಗಿ ಕೂರ್ಮವತಾರದ ಮೊದಲೇ ಈ ದೇವತಾರಾಧನೆಯು ಪ್ರಸಿದ್ಧವಾಗಿದ್ದಿತು ಎಂಬುದು ಪ್ರತಿಯೊಬ್ಬನೂ ಗಮನಿಸಬೇಕಾದ ಅಂಶ. ಭಾಗವತದಲ್ಲಿರುವಂತೆಯೇ ಗಣಪತಿಯ ದಯೆಯಿಂದ ಭಗವಾನ್ ಶ್ರೀಕೃಷ್ಣನು ಕಳೆದುಹೋಗಿರುವ ಯುಧಿಷ್ಠಿರನ ರಾಜ್ಯವೆಲ್ಲವು ಪುನರಪಿ ಯುಧಿಷ್ಠಿರನಿಗೇ ಪ್ರಾಪ್ತವಾಗುವ ಹಾಗೆಯೇ ಭೋಧಿಸಿದ್ದನು. ಐಹಲ್ಯೆಯೂ, ದಮಯಂತಿಯೂ, ರಘುನಾಥನೂ, ಹನುಮಂತನೂ, ಭಗೀರಂಥನೂ, ವೈನತೇಯನೂ, ದೇವಾಧಿಧೇವತೆಗಳೂ, ಶ್ರೀಕೃಷ್ಣ ಪರಮಾತ್ಮನೂ ಗಣಪತಿಗೆ ಅಗ್ರಪೂಜೆಯನ್ನು ನೀಡಿ ಪ್ರಸನ್ನಿಕರಿಸಿದರು. ಗಣಪತಿಯ ಆರಾಧಕರಿಗೆ ನಿವರ್ಿಘ್ನವಾಗಿ ಸಕಲ ಮನೋರಥಸಿದ್ಧಿಗಳೂ, ಇಷ್ಟಾರ್ಥ ಸಿದ್ಧಿಗಳೂ, ಸುವಾಸಿನಿಯವರಿಗೆ ಯೋಗ್ಯ ವರರೊಂದಿಗೆ ವಿವಾಹಯೋಗಗಳೂ, ವೈಧವ್ಯಹರಣವೂ ಉಂಟಾಗುವವೆಂಬ ಪುರಾಣವಚನವಿದೆ.
ಹಿಂದುಗಳೆಲ್ಲರೂ ಜಾತಿಭೇಧಗಳಿಲ್ಲದೆಯೇ ಮಹಾಗಣಪತಿಯ ಪೂಜೆಗಳನ್ನು ಏಕರೂಪವಾಗಿ ಕಾಲದಿಂದ ಕಾಲಕ್ಕೆ ನಿತ್ಯನೂತನವಾಗಿ ಸಂಪ್ರದಾಯಕ್ಕೆ ಚ್ಯುತಿಯಿರದಂತೆ ಸತ್ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯವೇ ಸರಿ.
ಕಾಲಕಾಲದ ಬೆಳೆಗಳು ಒಟ್ಟುಗೂಡಿಸಲ್ಪಟ್ಟ ವ್ಯಾಪಾರ ವ್ಯವಹಾರ ಪ್ರಾರಂಭವಾಗುವ ಈ ಭಾದ್ರಪದ ಮಾಸದಲ್ಲಿ ಆತುರರಾದ ವರ್ತಕರಿಗೂ, ಅದರ ಮೇಲೆ ಆದರಿಸಿ ಲೇವಾದೇವಿ ನಡೆಸುವ ಇತರ ಸಮಸ್ತರಿಗೂ ವಿಘ್ನಕಾರಕನ, ವಿಘ್ನವಿನಾಶಕನ, ವಿಘ್ನವಿನಾಯಕನ ವ್ರತವನ್ನು ಮಾಡಬೇಕೆಂದು ವಿಧಿಸಿರುವರು. ಪೂಜಾ ಸಂಕಲ್ಪದಲ್ಲಿ 'ಸಕಲ ಕುಟುಂಭಾನಾಂ ಕ್ಷೇಮಸ್ಥೈರ್ಯ ವೀರ್ಯ ವಿಜಯಾಯುರಾರೋಗ್ಯ ಐಶ್ವಯರ್ಾದಿ ಧನಕನಕ ಸುವಸ್ತುವಾಹನ ಮನೋರಥ ವಾಂಛಿತ ಫಲ ಸಿದ್ಧ್ಯರ್ಥ ಎನ್ನುವುದರಿಂದ ಈ ವಿಶ್ವಂಬರನ ಪೂಜೆಯಿಂದ ಸಮಸ್ತ ಜಗದಗಲ ಜೀವಜಗತ್ತಿನ ಪ್ರಾಣಿ ಕೋಟಿಸಂಕುಲಗಳ ಕ್ಷೇಮಾಯುರಾರೋಗ್ಯಗಳು ವೃದ್ಧಿಸಿ, ಮನೋರಥಗಳು ನೇರವೇರಬೇಕೆಂಬುದೇ ಮೂಲ ಉದ್ದೇಶವಾಗಿದೆ. ಇಂತಹ ಸುಮಂಗಲ ವೃತವನ್ನು ಪ್ರತಿಯೊಬ್ಬನೂ ಆಚರಿಸುತ್ತಾನೆ. ನಮ್ಮ ಸರ್ವ ಆಚಾರಗಳಲ್ಲಿಯೂ, ವಿಚಾರಗಳಲ್ಲಿಯೂ ಸಂಸ್ಕಾರ-ಸಂಸ್ಕೃತಿಗಳಲ್ಲಿಯೂ ಪಾರಾಮಾಥರ್ಿಕ, ವ್ಯಾವಹಾರಿಕ ವಿಚಾರಗಳೆರಡೂ ಅರ್ಥಗಭರ್ಿತವಾಗಿರುವುದು. ಗಣೇಶನೆಂದರೆ ಸಂಘಾಧ್ಯಕ್ಷ ನೆಂಬ ಅರ್ಥವಿರುವುದು.
ಮಹಾಗಣಪತಿಯು ಬ್ರಹ್ಮಚಾರಿ. ಗೃಹಸ್ಥನಲ್ಲ. ಸಿದ್ಧಿ-ಬುದ್ಧಿಯರ ವರಿಸಿದ ಎಂಬ ಮಾತು ರೂಢಿಯಿಂದ ಬಂದಿರುವುದು. ಸಿದ್ಧಿ ಮತ್ತು ಬುದ್ಧಿ ಎಂಬ ಎರಡು ಗುಣಗಳ ಅಧಿದೇವತೆಗಳ ಕಾರಣ ವಿದ್ಯೆ ಬುದ್ಧಿಯ ಮೂಲಕ ಕಾವ್ಯಸಿದ್ಧಿಗೆ ಕಾರಣವಾಗಿದೆ. ಶ್ರೀಕೃಷ್ಣನ ಅಪವಾದದ ಒಂದು ಸನ್ನಿವೇಶಕ್ಕೆ ಗಣಪತಿ ಸಾಕ್ಷಿ ಎಂಬುವಂತಿದ್ದರೆ, ಚಂದ್ರನಿಗೆ ಶಾಪ ನೀಡಿರುವುದು ಗಣಪತಿಯ ಮಹಿಮೆ. ದ್ವಾಪರ ಯುಗದಲ್ಲೂ ಉಲ್ಲೇಖಾರ್ಹ ಇಲ್ಲಿ ಶಾಪ ಮತ್ತು ವಿಮೋಚನೆಯು ಚಂದ್ರ ಹಾಗು ಸರ್ಪದ ನಡುವಿನ ಆಂತರಿಕ, ಮಾನಸಿಕ ಸಂಬಂಧಗಳ ಪರಿಪಕ್ವತೆಯನ್ನು ಬಿಂಬಿಸುವುದಾದರೂ ಗಣಪತಿಯ ಆರಾಧನೆಯಲ್ಲಿ ಗಮನಿಸಬೇಕಾದ ಪ್ರಮುಖ ಅಂಶ.
ಗಜಾಸುರನೆಂಬ ರಾಕ್ಷಸ ದೇವಾನುದೇವತೆಗಳಿಗೆಲ್ಲಾ ಮಾರಕನಾದಾಗ ಗಣಪತಿಯ ಸೊಂಡಿಲಿನಿಂದ ಬಾಯೊಳಗೆ ನೂಕಲು ಗಂಟಲಿನಲ್ಲಿ ಸಿಕ್ಕಿಹಾಹಿಕೊಂಡು ಗಣಪತಿಯ ಇಡೀ ಶರೀರವೇ ವಿಷಪುರಿತವಾದಾಗ ಧನ್ವಂತರಿಯು ವಿಷನಾಶಕ ಹಾಗೂ ಜೌಷಧಿಯುಕ್ತ ಗರಿಕೆಯನ್ನು ತಿನ್ನಲುಕೊಟ್ಟು ವಿಷವನ್ನಿಳಿಸಿದ ಕಾರಣ ಗಣಪತಿಗೆ ಗರಿಕೆಯಹುಲ್ಲೇ ಪ್ರಧಾನವಾಯಿತು. ಇಂದಿಗೂ ಗ್ರಹಣದ ಕಾಲದಲ್ಲಿ ಗ್ರಹಣಮೋಕ್ಷಾನಂತರ ನಾವು ನೀರು, ಆಹಾರ ಸೇವಿಸಬೇಕಾದರೆ ಅಲ್ಲಿ ಗರಿಕೆಯ ಹುಲ್ಲು ಹಾಕಿಯೇ ಸ್ವೀಕರಿಸುವುದು ವಾಡಿಕೆ. ಪ್ರಾಣಿಗಳೂ ಹೊಟ್ಟೆ ನೋವಾದಾಗ ಗರಿಕೆಯನ್ನು ಸೇವಿಸುವುದನ್ನು ಕಾಣುತ್ತೇವೆ.
ಗಣಪತಿಯು ಅಡ್ಡವಿಡ್ಡೂರಗಳನ್ನು ದೂರ ಮಾಡುವವನು. ಅವನಿಗೆ ಅಲಂಕಾರಿಕ ಸಾಮಾಗ್ರಿಗಳೆಂದರೆ ಪ್ರಕೃತಿಯೇ ಆಗಿದೆ. ಕಬ್ಬು, ಭತ್ತದ ತೆನೆ, ತಳಿರು-ತೋರಣ, ಮಾವಿನ ಎಲೆ, ಹಲಸಿನ ಎಲೆ, ಬಿದಿರು, ಗೋಳಿ, ಅರಳಿ, ಅಶ್ವಥ್ಥ ಮುಂತಾದವುಗಳು. ಜಾತಿ-ಮತಗಳ, ರೀತಿ-ನೀತಿಗಳ ಎಲ್ಲೆ ಮೀರಿದ ದೇವರು, ಪ್ರತೀ ಮನೆಯಲ್ಲೂ ಗಣಪತಿಯ ಆರಾಧನೆಯು ಅವರವರ ಅನೂಕೂಲತೆಗಳಿಗೆ ಸಂಬಂಧಪಟ್ಟಂತೆಯೇ ಇರುವುದು ವಾಡಿಕೆಯಲ್ಲಿದೆ. ಮತ್ತೊಂದು ಇಲ್ಲಿ ನಾವು ಗಮನಿಸಲೇಬೇಕಾದ ಪ್ರಮುಖ ಅಂಶವೆಂದರೆ ಗಣಪತಿಗೆ ಮಾಡಿ ಬಡಿಸುವ ಕಜ್ಜಾಯ, ಪಂಚಕಜ್ಜಾಯ, ಅಪ್ಪಕಜ್ಜಾಯ ಕಡಲೆ, ಎಳ್ಳುಂಡೆ, ಮೋದಕ, ಚಕ್ಕುಲಿ, ವಡೆ ಹೋಳಿಗೆ, ಪಾಯಸ, ತಿಂಡಿ, ತೀರ್ಥ ತಿನಿಸುಗಳನ್ನು ವರ್ಷಕ್ಕೊಂದು ಬಾರಿ ಅವುಗಳಲ್ಲಿ ಒಂದೊಂದನ್ನು ತಪ್ಪದೇ ಬದಲಿಸಿ ಬದಲಿಸಿ ನೈವೇದ್ಯಕ್ಕಾಗಿ ಅಣಿ ಗೊಳಿಸಬೇಕಾಗಿರುವುದು ಇದು ಇಂದಿನ ಯುವ ಪೀಳಿಗೆಗೆ ತಿಳಿಯದೇ ಮೂಲೆ ಗುಂಪಾಗಿರುವ ವಿಚಾರಧಾರೆ, ಮಹಾಗಣಪತಿಯು ಈ ಪ್ರಕೃತಿಯ ಪ್ರತಿಯೊಂದು ಜೀವರಾಶಿಗೂ ಪ್ರಾಶಸ್ತ್ಯ ನೀಡಿರುವುದು ಅವನ ಶರೀರ ರಚನೆಯಿಂದಲೇ ವೇದ್ಯವಾಗಿದೆ. ಗಣಪತಿಯು ವೇದಾತೀತ ಹಾಗೂ ವೇದವ್ಯಾಸರೊಂದಿಗೆ ಭಾರತ-ಬರೆದ ಮಹಾನ್ 'ಕವಿವರೇಣ್ಯ' ಎಂಬುದು ಜನಜನಿತ.
ಆನೆಯ ತಲೆ ಮನುಷ್ಯನ ದೇಹ ಪಡೆದಿರುವ ಗಣಪನಿಗೆ ಪುಟ್ಟ ಇಲಿ ವಾಹನ. ಅದಕ್ಕೆ ತದ್ವಿರುದ್ಧವಾದ ಹಾವನ್ನೇ ಹೊಟ್ಟೆಗೆ ಸುತ್ತಿರುವ ಅಗಲವಾದ ಮೊರದ ಕಿವಿ. ಅತೀ ಸೂಕ್ಷ್ಮ ದೃಷ್ಠಿಯ ಸಣ್ಣ ಕಣ್ಣು, ದೂರದಿಂದಲೇ ಸುವಾಸನೆಯನ್ನು ಆಘ್ರಣಿಸಬಲ್ಲ ಮೂಗು, ದಂತಪಂಕ್ತಿಯಲ್ಲಿ ಏಕದಂತ, ನಾಲ್ಕೂ ಕರಗಳಲ್ಲೂ ಚತುವೇದೋಪಾದಿಯಲ್ಲಿಯೇ ಅವುಗಳನ್ನೆಲ್ಲಾ ಪ್ರತಿಬಿಂಬಿಸುವ, ಪಾಶ, ಅಂಕುಶ, ಮೋದಕ, ವರದಾಭಯ, ಶ್ರೀ ಶಂಕರಾಚಾರ್ಯರ ಚತುರಾಮ್ನಾಯ ಪೀಠಗಳಲ್ಲಿ ಒಂದನೆಯದಾದ ಶೃಂಗೇರಿ ಶ್ರೀ ಶಾರಾದಾಂಬೆಯ ತುಂಗಾ ನದೀತೀರದ ರಮ್ಯತಾಣದಲ್ಲಿ ಕಪ್ಪೆಗೆ ನಾಗರಹಾವೇ ಹೆಡೆಬಿಚ್ಚಿ ನೆರಳಾಗಿ ನಿಂದು ಆಶ್ರಯ ನೀಡಿದ ಕಪ್ಪೆಶಂಕರ ನಾಮಾಂಕಿತ ಕ್ಷೇತ್ರ ಇಂದಿಗೂ ಕಲಿಯುಗದಲ್ಲಿ ಕಾಣಸಿಗುವುದು. ಇದೇ ಉಪಮೇಯಲ್ಲೇ ಪರಸ್ಪರ ತದ್ವಿರುದ್ಧ ಗುಣಗಳುಳ್ಳ ವಿರೋಧಾಭಾಸದ ಎರಡು ಜೀವಿಗಳೂ ಪರಸ್ಪರ ಹೊಂದಾಣಿಕೆಯಿಂದ ಬದುಕುವುದನ್ನು ಅತೀಸೂಕ್ಷ್ಮವಾಗಿ ನಾವೆಲ್ಲರೂ ಇಂದು ಈ ವಿಶ್ವಂಭರನ ದೇಹಪ್ರಕೃತಿಯಲ್ಲಿ ಜ್ವಲಂತವಾಗಿ ಕಂಡುಬುರುವುದು. ಗಣಪತಿಗೆ ನಾವು ಕೊಡುವಂತಹ ಎಳೆಗರಿಕೆಯೇ ಅತೀ ಪ್ರಧಾನ. ಶ್ರೀಕೃಷ್ಣ ಪರಮಾತ್ಮನು ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವು ಹೇಗೆ ತೃಪ್ತನೋ ಹಾಗೆಯೇ ನಮ್ಮ ಮಣ್ಣಿನಲ್ಲೇ ಬೆಳೆದ, ಮಣ್ಣಿನ ಆಕೃತಿಯೇ ಮೈದಳೆದ ಗಣಪತಿಗೆ ಗರಿಕೆಯ ಹುಲ್ಲೇ ಸಾಕು, ಅಭಯ ನೀಡಲು ಮತ್ತಾವ ವೈಭವ, ಆಧುನಿಕ ಆಡಂಬರಗಳ, ರಂಗುರಂಗಿನ ವೈಭವೋಪೇತ ಪರಿಕರಗಳ ಅಗತ್ಯತೆಯೂ ಬೇಡ, ಮಹಾಗಣಪತಿಯನ್ನು ಪ್ರತೀಮನೆಯಲ್ಲೂ ಪ್ರತಿಷ್ಠಾಪಿಸಿ, ನೆಲೆಗೊಳಿಸಿ, ಶಕ್ತ್ಯಾನುಸಾರ ಪೂಜಿಸಿ, ಭಕ್ತ್ಯಾನುಸಾರ ಭಜಿಸಿ, ಅಚರ್ಿಸಿ, ಮೆಚ್ಚಿಸಿ ಜಲಸ್ತಂಭನಗೊಳಿಸಿ ಕಣ್ತುಂಬಿಕೊಳ್ಳಬೇಕಾಗಿರುವುದು ಸತ್ಸಂಪ್ರದಾಯ. ಇದರಲ್ಲಿ ಅತೀಮುಖ್ಯವಾಗಿ ನಾವು ಗಮನಕೋಡಲೇಬೇಕಾದ ಅಂಶವೆಂದರೆ ಪ್ರಕೃತಿಪ್ರಿಯನಾದ ಗಣಪನಿಗೆ ಪ್ರಕ್ರೃತಿವಿನಾಶದ ರಾಸಾಯನಿಕ ಪದಾರ್ಥಗಳನ್ನು ಅವನ ಮೃತ್ತಿಕಾರೂಪಕ್ಕೆ ಚ್ಯುತಿತರುವಂತಹ ಪ್ರಕೃತಿಗೆ ಮಾರಕವಾಗಿರುವ, ಜಗತ್ತಿನ ವಿನಾಶಕ್ಕೆ ಮೂಲತೇತುವಾದ ರಾಸಾಯನಿಕಗಳು, ವಿಷಪೂರಕ ಅಂಶಗಳು ಬಳಕೆಯಾದರೆ ಅದರಿಂದ ಕೆರೆಯ ನೀರು ಕಲುಷಿತಗೊಂಡು ಬಳಸುವ ವ್ಯಕ್ತಿಗಳಿಗೆ ಮಾರಕವಾಗದಿರಲಿ. ಗಣಪತಿಯಲ್ಲಿರುವ ಮೂಲ ಅಂಶವೆಂದರೆ ಗಣಪತಿಗೆ ಹಸಿವು ಜಾಸ್ತಿ. ದೊಡ್ಡ ಹೊಟ್ಟೆ. ಅವನ ತಂದೆಯಾದ ಪರಶಿವನೇ ಗಣಪತಿಗೆ ಆಹಾರಕೊಟ್ಟು ಸಂತೃಪ್ತಿ ಪಡಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ನಂದಿ ಬೃಂಗಿಯರೊಂದಿಗೆ ಭೋಲೋಕಕ್ಕೆ ಕಳುಹಿಸಿದನೆಂದು ರೂಢಿಯಲ್ಲಿದೆ. ಆದುದರಿಂದ ಕಲಿಯುಗದಲ್ಲಿ ಕೇವಲ ಮನುಷ್ಯರಾದ ನಮ್ಮಿಂದ ಅವನ ಹಸಿವು ನೀಗಿಸಲು ಸಾಧ್ಯವಿಲ್ಲ. ಆದುದರಿಂದ ಗಣಪತಿಯನ್ನು ಪ್ರತಿಷ್ಠಾಪಿಸಿ ಒಂದೆರೆಡು ದಿನಗಳಲ್ಲಿ ಜಲಸ್ತಂಭನಗೊಳಿಸಲೇಬೇಕಾಗಿರುವುದರಿಂದ ಮಣ್ಣಿನ ಗಣಪತಿಯ ಮೂತರ್ಿ ಮಾಡಿ ನೀರಿನಲ್ಲಿ ಸ್ತಂಭನಗೊಳಿಸುತ್ತೇವೆ. ಇದು ಅದ್ದೂರಿಯಲ್ಲ. ನಂಬಿಕೆ, ಶ್ರದ್ಧೆ, ಭಕ್ತಿ, ಪೂಜೆ, ಹವನ, ಆರಾಧನೆ, ಆಚರಣೆ, ಸಂಸ್ಕೃತಿ ಸಂಪ್ರದಾಯ ಇವಿಷ್ಟೇ ಇದಕ್ಕೆ ಚ್ಯುತಿಬರದಂತೆ ನಡೆದುಕೊಳ್ಳುವುದಷ್ಟೇ ಜವಬ್ದಾರಿ.
ಸಾಹಿತಿ: ಕೆ. ಗೋಪಾಲಕೃಷ್ಣ ಭಟ್ ಕಟ್ಟತ್ತಿಲ
ಅಧ್ಯಕ್ಷರು, ಪುತ್ತೂರು ಸಾಹಿತ್ಯ ವೇದಿಕೆ