HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಗಡಿನಾಡ ಜಾನಪದ ಉತ್ಸವ - ಸಿಡಿ ಬಿಡುಗಡೆ
   ಬದಿಯಡ್ಕ : ಕನರ್ಾಟಕ ಜಾನಪದ ಪರಿಷತ್ ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿವಿಧ ಜಾನಪದ ಕಲಾ ಪ್ರಕಾರಗಳನ್ನು  ಒಳಗೊಂಡಿರುವ ಗಡಿನಾಡ ಜಾನಪದ ಉತ್ಸವದ ವಿಡಿಯೋ ಸಿಡಿಯನ್ನು  ಕನರ್ಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ್ ಹೊರಟ್ಟಿ  ಆವರು ವಿಧಾನ ಸೌಧದಲ್ಲಿ  ಮಂಗಳವಾರ ಬಿಡುಗಡೆಗೊಳಿಸಿದರು. ಬಳಿಕ ಅವರು ಮಾತನಾಡಿ, ಗಡಿನಾಡಲ್ಲಿ ನಡೆಯುತ್ತಿರುವ ಸಾಹಿತ್ಯ, ಸಾಂಸ್ಕೃತಿಕ ಚಟುವಟಕೆಗಳು ಕನ್ನಡ ಸಂಸ್ಕೃತಿಯನ್ನು  ಎತ್ತಿ ಹಿಡಿಯುವಲ್ಲಿ ಗಮನೀಯ ಪಾತ್ರ ವಹಿಸುತ್ತಿವೆ.  ಜಾನಪದ ಕಲಾರೂಪಗಳನ್ನು  ಒಂದೇ ವೇದಿಕೆಯಲ್ಲಿ  ಪ್ರದಶರ್ಿಸಿ, ಜಾನಪದ ಸಂಸ್ಕೃತಿಯನ್ನೂ  ಮುನ್ನಡೆಸುವ ಪ್ರಯತ್ನ  ಶ್ಲಾಘನೀಯ. ಜೊತೆಗೆ  ಪ್ರದರ್ಶನಗಳನ್ನು ಸಿಡಿ ರೂಪದಲ್ಲಿ ಹೊರತಂದಿರುವುದು ದಾಖಲೀಕರಣದ ದೃಷ್ಟಿಯಿಂದ ಅಗತ್ಯವಿದ್ದು, ಶಾಶ್ವತವಾಗಿ ಉಳಿಯುವಂತೆ ಮಾಡಿದ ಪ್ರಯತ್ನ  ಅಭಿನಂದನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
   ಕಾರ್ಯಕ್ರಮದಲ್ಲಿ  ಕನರ್ಾಟಕ ಜಾನಪದ ಪರಿಷತ್ ಬೆಂಗಳೂರು ಕೇಂದ್ರ ಸಮಿತಿಯ ಅಧ್ಯಕ್ಷ ಟಿ. ತಿಮ್ಮೇಗೌಡ, ಸುಚಿತ್ರ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಕೆವಿಆರ್ ಟಾಗೋರ್, ಕನರ್ಾಟಕ ಸರಕಾರದ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ  ವೆಂಕಟಲಕ್ಷ್ಮಿ ಬಸವಲಿಂಗ ರಾಜು, ಉದ್ಯಮಿ ರಿಜ್ವಾನ್ ಬಪ್ಪನಾಡು, ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ , ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ , ಕೇರಳ ಬ್ಯಾರಿ ಅಕಾಡೆಮಿ ಕಾರ್ಯದಶರ್ಿ ಝೆಡ್.ಎ. ಕಯ್ಯಾರ್, ಹಿರಿಯ ಸಾಹಿತಿ ಕೇಳು ಮಾಸ್ತರ್ ಅಗಲ್ಪಾಡಿ, ಸಿಡಿ ನಿಮರ್ಾಪಕ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಹಾಗೂ ಸಿಡಿ ನಿಮರ್ಾಪಕ ತಂಡ ಫೋಕ್ಸ್  ಸ್ಟಾರ್ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries