ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ಅಡ್ಡಗಾಲು: ಅಮೆರಿಕ
ವಾಷಿಂಗ್ಟನ್: ಭಾರತ ಪರಮಾಣು ಪೂರೈಕೆದಾರ ಸಮೂಹ(ಎನ್ ಎಸ್ ಜಿ) ಸೇರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಗುರುವಾರ ಅಮೆರಿಕ ಹೇಳಿದೆ.
ಚೀನಾ ವಿರೋಧದಿಂದಾಗಿ ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಡೊನಾಲ್ಡ್ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲದೆ ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಅಮೆರಿಕದ ಬೆಂಬಲ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ವಿಚಾರದಲ್ಲಿ ಚೀನಾ ತನ್ನ ಹಠಕ್ಕೆ ಬದ್ಧವಾಗಿ ನಿಂತಿದೆ. ಹಾಗೆಂದು ನಾವು ಭಾರತಕ್ಕೆ ನೀಡುವ ಬೆಂಬಲದಲ್ಲಿ ಯಾವುದೇ ಕೊರತೆ ಮಾಡುವುದಿಲ್ಲ. ಎಸ್ಟಿ-1 (ಸ್ಟ್ರಾಟಿಜಿಕ್ ಟ್ರೇಡ್ ಅಥರೈಸೇಷನ್) ಅನುಮತಿ ಸಂಬಂಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಒಕ್ಕೂಟಕ್ಕೆ ಭಾರತವನ್ನು ಸೇರಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಪ್ರಿನ್ಸಿಪಲ್ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿ ಅಲೈಸ್ ವೆಲ್ಸ್ ಅವರು ಹೇಳಿದ್ದಾರೆ.
48 ಸದಸ್ಯತ್ವ ರಾಷ್ಟ್ರಗಳ ಪೈಕಿ ಬಹುತೇಕ ರಾಷ್ಟ್ರಗಳು ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡಿದ್ದವಾದರೂ ಚೀನಾ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಪಡೆಯುವುದಕ್ಕೆ ಸಾಧ್ಯವಾಗಿಲ್ಲ.