ಜನಜಾಗೃತಿ ವೇದಿಕೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
ಮುಳ್ಳೇರಿಯ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯ ನೇತೃತ್ವದಲ್ಲಿ ಬೋವಿಕ್ಕಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಶೆರೀಫ್ ಕೊಡವಂಜಿ ಅವರು ವಿದ್ಯಾಥರ್ಿಗಳಿಗೆ ಅಮಲು ಪದಾರ್ಥಗಳ ಸೇವನೆಯಿಂದುಂಟಾಗುವ ಆರೋಗ್ಯ ದುಷ್ಪರಿಣಾಮಗಳು, ಕೌಟುಂಬಿಕ,ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಅಮಲು ದಾಸರಾಗದಂತೆ ಜೀವನ ಕಾಪಿಡುವ ಬಗ್ಗೆ ತಿಳುವಳಿಕೆ ನೀಡಿ ಜಾಗೃತಿ ಮೂಡಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಾಮನ ಆಚಾರ್ಯ ಬೋವಿಕ್ಕಾನ ಅಧ್ಯಕ್ಷತೆ ವಹಿಸಿದ್ದರು. ನವಜೀವನ ಸಮಿತಿ ಅಧ್ಯಕ್ಷ ಜಯರಾಮ, ಶಿಕ್ಷಕಿ ಸೋಪಿಯಮ್ಮ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಜಯಲಕ್ಷ್ಮೀ ಭಟ್ ಸಿದ್ದನಕೆರೆ ಕಾರ್ಯಕ್ರಮ ಸಂಯೋಜಿಸಿದರು. ಮುಖ್ಯೋಪಾಧ್ಯಾಯಿನಿ ವಿಮಲಾ ಟೀಚರ್ ಸ್ವಾಗತಿಸಿ, ಕೆ.ಎ.ಪ್ರದೀಪ್ ಮಾಸ್ತರ್ ವಂದಿಸಿದರು. ಯೋಜನೆಯ ಮೇಲ್ವಿಚಾರಕಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು.