HEALTH TIPS

ಯಾವುದೇ ಶೀರ್ಷಿಕೆಯಿಲ್ಲ

   ಬೊಲ್ಪು ಸಂಘಟನೆಯಿಂದ  ಪಿ.ಎಸ್.ಸಿ.(ಕೇರಳ ಲೋಕಸೇವಾ ಆಯೋಗ) ಕಛೇರಿ ಮುಂದೆ ಧರಣಿ ಸತ್ಯಾಗ್ರಹ
    ಬದಿಯಡ್ಕ : ಕಾಸರಗೋಡಿನ ಕನ್ನಡಿಗರನ್ನು ನಿರಂತರ ಅವಗಣಿಸುತ್ತಿರುವ ರಾಜ್ಯ ಲೋಕಸೇವಾ ಆಯೋಗ(ಪಿ.ಎಸ್.ಸಿ.) ದ ಧೋರಣೆಗೆದುರಾಗಿ ಬದಿಯಡ್ಕದ ಬೊಲ್ಪು ಸಂಘಟನೆಯು ಅಕ್ಟೋಬರ್ 4ರಂದು ಬೆಳಿಗ್ಗೆ 10 ಗಂಟೆಯಿಂದ ಧರಣಿ ಸತ್ಯಾಗ್ರಹ ನಡೆಸಲಿದೆ.
ಕೆಟಗರಿ ನಂಬ್ರ 459/2016 ಕನ್ನಡ ಮಲೆಯಾಳ ಬಲ್ಲ ಎಲ್.ಡಿ.ಕ್ಲಕರ್್ ಹುದ್ದೆಗಿರುವ ಪರೀಕ್ಷೆಯನ್ನು ಶೀಘ್ರ ನಡೆಸಬೇಕು, ಕನ್ನಡ ಎಲ್.ಡಿ. ಕ್ಲಕರ್್ ಹುದ್ದೆಗಿರುವ ಮೂಲ ಅರ್ಹತೆಯನ್ನು ನಿಗದಿಪಡಿಸಬೇಕು, ಕನ್ನಡ ಶಾಲೆಗಳಿಗೆ ಕನ್ನಡ ಬಲ್ಲ ಅಧ್ಯಾಪಕರನ್ನೇ ನೇಮಿಸಬೇಕು, ಭಾಷಾ ಅಲ್ಪ ಸಂಖ್ಯಾತರ ಹಿತರಕ್ಷಣೆಯನ್ನು ಕಾಪಾಡಬೇಕು ಮುಂತಾದ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಈ ಧರಣಿ ಸತ್ಯಾಗ್ರಹ ನಡೆಯಲಿದೆ.
ಧರಣಿ ಸತ್ಯಾಗ್ರಹದ ಉದ್ಘಾಟನೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ನೆರವೇರಿಸುವರು, ಬೊಲ್ಪು ಸಂಘಟನೆಯ ಅಧ್ಯಕ್ಷ ಸುಂದರ ಬಾರಡ್ಕ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ  ಹಷರ್ಾದ್ ವಕರ್ಾಡಿ, ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಹಾಗೂ ಸದಾನಂದ ಶೇಣಿ ಅತಿಥಿಗಳಾಗಿ ಉಪಸ್ಥಿತರಿರುವರು. ಜೊತೆಗೆ ವಿವಿಧ ಕನ್ನಡ ಸಂಘಟನೆಗಳ ಮತ್ತು ಸಾಮಾಜಿಕ, ಸಾಂಸ್ಕೃತಿಕ ವಲಯದ ನೇತಾರರು ಉಪಸ್ಥಿತರಿದ್ದು ಶುಭಹಾರೈಸುವರು. ಕಾರ್ಯಕ್ರಮದಲ್ಲಿ ಕನ್ನಡ ಉದ್ಯೋಗಾಥರ್ಿಗಳು ಮತ್ತು ಕನ್ನಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬೊಲ್ಪು ಸಂಘಟನೆಯ ಕಾರ್ಯದಶರ್ಿ ಉದಯಕುಮಾರ್ ಎಂ. ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries