ಕೂಡ್ಲು ಗ್ರಾಮ ಕಚೇರಿಯಲ್ಲಿ ನೌಕರರ ಕೊರತೆ
ಕಾಸರಗೋಡು: ಕಾಸರಗೋಡು ನಗರ ಸಮೀಪದ ಎರಿಯಾಲ್ನಲ್ಲಿರುವ ಕೂಡ್ಲು ಗ್ರೂಪ್ ವಿಲ್ಲೇಜ್ ಆಫೀಸ್ (ಗ್ರಾಮ ಕಚೇರಿ) ವಿಭಜಿಸಬೇಕೆಂದು ಇಲ್ಲಿನ ಜನರು ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ಈ ಗ್ರಾಮ ಕಚೇರಿಯಲ್ಲಿ ನೌಕರರ ಸಂಖ್ಯೆಯೂ ತೀರಾ ಕಡಿಮೆಯಿದೆ. ಅವಶ್ಯಕತೆಗೆ ಬೇಕಾದಷ್ಟು ನೌಕರರನ್ನು ನೇಮಕಾತಿ ಮಾಡದಿರುವುದರಿಂದ ವಿವಿಧ ಅಗತ್ಯಗಳಿಗೆ ಇಲ್ಲಿಗೆ ಆಗಮಿಸುವ ಜನರು ತೀವ್ರ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಇದು ವ್ಯಾಪಕ ಪ್ರತಿಭಟನೆಗೂ ಕಾರಣವಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಅತೀ ಹೆಚ್ಚು ಮನೆಗಳು ಮತ್ತು ಕಟ್ಟಡಗಳು ಇರುವ ಗ್ರಾಮಕಚೇರಿ ಎಂದು ಕೇರಳ ರಾಜ್ಯ ಆಡಳಿತ ಪರಿಷ್ಕರಣೆ ಸಮಿತಿಯು ಗುರುತಿಸಿರುವ ಕೂಡ್ಲು ಗ್ರಾಮವನ್ನು ಜಿಲ್ಲಾ ಆಡಳಿತ ವರ್ಗವು ನಿರಂತರವಾಗಿ ಕಡೆಗಣಿಸುತ್ತಿದೆ. ಮೊಗ್ರಾಲ್ ಪುತ್ತೂರು ಪಂಚಾಯತ್ನ ಎಲ್ಲಾ ಮತ್ತು ಮಧೂರು ಪಂಚಾಯತ್ನ ಬಹುತೇಕ ಪ್ರದೇಶಗಳು ಒಳಗೊಂಡ ಈ ಗ್ರಾಮ ಕಚೇರಿಯಲ್ಲಿ ಅಗತ್ಯದ ಮಾಹಿತಿ ಪತ್ರಗಳನ್ನು ಹಂಚಲು ಕೂಡ ಗ್ರಾಮಾಧಿಕಾರಿಗಳೇ ಹೋಗಬೇಕಾಗುತ್ತಿರುವುದು ವಿಪಯರ್ಾಸ.
ಕನಿಷ್ಠ 9 ಮಂದಿ ಅಧಿಕಾರಿಗಳು ಇರಬೇಕಾಗಿದ್ದ ಇಲ್ಲಿ ಈಗ ಇರುವುದು ಕೇವಲ ಮೂರು ಮಂದಿ ಮಾತ್ರ. ಕಂದಾಯ ರಿಕವರಿ ನೋಟೀಸು, ಕಟ್ಟಡ ತೆರಿಗೆ, ಆಡಂಬರ ತೆರಿಗೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ , ರೀ ಸವರ್ೇ, ಆರ್ಡಿಒ ಕಚೇರಿ ಎಂಬಿತ್ಯಾದಿ ಕಡೆಗಳಿಂದ ಅಸಂಖ್ಯಾತ ನೋಟೀಸುಗಳು ಈ ಗ್ರಾಮ ಕಚೇರಿಗೆ ಬರುತ್ತಿರುತ್ತವೆ. ಆದರೆ ಇದರ ವಿಳಾಸ ಪತ್ತೆಹಚ್ಚಿ ಸಂಬಂಧಪಟ್ಟವರಿಗೆ ನೋಟೀಸು ರೂಪದಲ್ಲಿ ನೀಡಲು ಕೂಡ ಈಗ ಇಲ್ಲಿ ಅಗತ್ಯದ ಸಿಬ್ಬಂದಿಗಳಿಲ್ಲ.
ಕಳೆದ ಒಂದು ವರ್ಷದಿಂದ ಇಲ್ಲಿನ ವಿಲ್ಲೇಜ್ ಫೀಲ್ಡ್ ಅಸಿಸ್ಟೆಂಟ್ ಹುದ್ದೆ ಖಾಲಿಯಾಗಿ ಉಳಿದಿದೆ. ಓರ್ವರು 2017 ಆಗಸ್ಟ್ನಿಂದಲೂ ಇನ್ನೋರ್ವರು 2018ರಿಂದಲೂ ಇತರ ಕಚೇರಿಗೆ ವಗರ್ಾವಣೆಗೊಂಡಿದ್ದಾರೆ. ಆದರೆ ಇದಕ್ಕೆ ಬದಲಾಗಿ ಇತರ ನೌಕರರನ್ನು ನೇಮಕಾತಿ ಮಾಡಿಲ್ಲ. ಕಾಸರಗೋಡು ಶಾಸಕರು ಹಾಗೂ ಬಿಜೆಪಿ ಸಹಿತ ವಿವಿಧ ರಾಜಕೀಯ ಪಕ್ಷಗಳ ನೇತಾರರು ಮತ್ತಿತರರು ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್ ಸಹಿತ ಹಲವಾರು ಮಂದಿ ಸಚಿವರು, ಅಧಿಕಾರಿಗಳಿಗೆ ಕೂಡ್ಲು ಗ್ರಾಮ ಕಚೇರಿಯನ್ನು ವಿಭಜಿಸಬೇಕು ಅಥವಾ ಹೆಚ್ಚಿನ ನೌಕರರನ್ನು ನೇಮಕಾತಿ ಮಾಡಬೇಕು ಎಂದು ನಿರಂತರವಾಗಿ ಒತ್ತಾಯಿಸುವ ಮದ್ಯೆ ಈಗ ಇರುವ ಹುದ್ದೆಗಳನ್ನು ಕೂಡ ಭತರ್ಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗುತ್ತಿಲ್ಲವೆಂಬ ಆರೋಪ ಕೇಳಿಬಂದಿದೆ.
ವಿವಿಧ ಅಜರ್ಿಗಳಿಗಾಗಿ ಇಲ್ಲಿಗೆ ತಲುಪುವ ಜನರು ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಸ್ಥಿತಿಯುಂಟಾಗಿದೆ. ಮೊಗ್ರಾಲ್ ಪುತ್ತೂರು ಮತ್ತು ಶಿರಿಬಾಗಿಲು ಪ್ರದೇಶಗಳ ರೀಸವರ್ೇ ಕುರಿತಾದ ದೂರುಗಳನ್ನು ಇಲ್ಲಿನ ಗ್ರಾಮಾಧಿಕಾರಿಗಳಿಗೆ ವಹಿಸಿಕೊಟ್ಟ ಬಳಿಕ ಇಲ್ಲಿರುವ ನೌಕರರ ಸಂಕಷ್ಟ ಇಮ್ಮಡಿಯಾಗಿದೆ. ಈಗ ಇರುವ 3 ಮಂದಿ ನೌಕರರು ರಾತ್ರಿ ಹಗಲು ಕಷ್ಟಪಟ್ಟು ಸರಕಾರಿ ವಿಷಯಗಳಿಗೆ ಮತ್ತು ಜನರ ಸಮಸ್ಯೆಗಳಿಗೆ ಒಂದು ಹಂತದವರೆಗೆ ಪರಿಹಾರ ಕಲ್ಪಿಸುತ್ತಿದ್ದಾರೆ.
ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆಯೂ 2018ನೇ ಜನವರಿಯಿಂದ ತೊಡಗಿ ಇದುವರೆಗೆ 12,000ದಷ್ಟು ಸಟರ್ಿಫಿಕೇಟ್ಗಳನ್ನು ವಿತರಿಸಲಾಗಿದೆ. ಇಲ್ಲಿಗೆ ತಲುಪುವ ಜನರ ಸಮಸ್ಯೆಗಳಿಗೆ ಸಂಬಂಧಪಟ್ಟವರು ತುತರ್ು ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿವಿಧ ಜನಪರ ಸಂಘಟನೆಗಳು ಮುನ್ನೆಚ್ಚರಿಕೆ ನೀಡಿವೆ.
ಅಪಾರ ವಿಸ್ತೀರ್ಣದ ಭೂಪ್ರದೇಶ : ವಿದ್ಯಾನಗರದಲ್ಲಿರುವ ನಗರಸಭಾ ಕ್ರೀಡಾಂಗಣದಿಂದ ತೊಡಗಿ ಸೀತಾಂಗೋಳಿಯ ಕಿನ್ಫ್ರಾ ಪಾಕರ್್ ತನಕವೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಕತ್ತಬೈಲಿನಿಂದ ತೊಡಗಿ ಮೊಗ್ರಾಲ್ ಸೇತುವೆ ವರೆಗೂ ಇರುವ ಪ್ರದೇಶಗಳು ಈ ಗ್ರಾಮ ಕಚೇರಿಗೆ ಒಳಪಟ್ಟಿವೆ. ಕಾಸರಗೋಡು ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ 22 ಮತಗಟ್ಟೆಗಳು ಈ ಗ್ರಾಮ ಕಚೇರಿಯ ವ್ಯಾಪ್ತಿಯಲ್ಲಿ ಸೇರಿವೆ. ಈ ಮೂಲಕ ಕೂಡ್ಲು ಗ್ರಾಮ ಕಚೇರಿಗೆ ಅಪಾರ ಭೂಪ್ರದೇಶವು ಒಳಪಟ್ಟಿದ್ದು, ಇಲ್ಲಿನ ಅಕಾರಿಗಳು ಮತ್ತು ನೌಕರರು ಹೊರಲಾರದಷ್ಟು ಕೆಲಸದ ಹೊರೆಯನ್ನು ಹೊರಬೇಕಾಗುತ್ತಿದೆ. ಇದರಿಂದಾಗಿ ಯಾವುದೇ ಕೆಲಸಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಈ ಬಗ್ಗೆ ಕಂದಾಯ ಸಚಿವರೇ ನೇರವಾಗಿ ಗಮನಿಸಿ ಸರಿಯಾದ ವ್ಯವಸ್ಥೆ ಕಲ್ಪಿಸಬೇಕಾಗಿದೆ.