ಯಕ್ಷಗಾನದ ತವರೂರು ಕಣಿಪುರದಲ್ಲಿ ರಂಗಸಿರಿ
ಕುಂಬಳೆ: ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ನೂತನ ವಿದ್ಯಾಥರ್ಿಗಳ ಯಕ್ಷಗಾನ ರಂಗಪ್ರವೇಶವು ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಇತ್ತೀಚೆಗೆ ನಡೆಯಿತು. "ನರಕಾಸುರ ಮೋಕ್ಷ" ಕಥಾಭಾಗವನ್ನು ಪ್ರದಶರ್ಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಕಾರ್ಯಕ್ರಮವು ಪ್ರಥಮ ಪ್ರದರ್ಶನವಾಗಿದ್ದರೂ ಜನಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಯಕ್ಷಗಾನ ಪಿತಾಮಹ ಪಾತರ್ಿಸುಬ್ಬ ಓಡಾಡಿದ ಯಕ್ಷಗಾನದ ತವರೂರು ಕುಂಬಳೆಯಲ್ಲಿ ರಂಗಪ್ರವೇಶ ನಡೆದದ್ದು ವಿಶೇಷವಾಗಿತ್ತು. ಯಕ್ಷಗಾನ ಹಿಮ್ಮೇಳ, ಮುಮ್ಮೇಳಗಳಲ್ಲಿ ನೈಪುಣ್ಯ ಪಡೆದಿರುವ ಯಕ್ಷಗುರು ಬಾಯಾರಿನ ಸೂರ್ಯನಾರಾಯಣ ಪದಕಣ್ಣಾಯ ಅವರು ವಿದ್ಯಾಥರ್ಿಗಳನ್ನು ತರಬೇತುಗೊಳಿಸಿದ್ದಾರೆ.
ಕೃಷ್ಣನಾಗಿ ವಷರ್ಾಲಕ್ಷ್ಮಣ್ ಬದಿಯಡ್ಕ, ಸತ್ಯಭಾಮೆಯಾಗಿ ಅಭಿಜ್ಞಾ ಬೊಳುಂಬು, ನರಕಾಸುರನಾಗಿ ಮನ್ವಿತ್ಕೃಷ್ಣ ನಾರಾಯಣಮಂಗಲ, ಮುರಾಸುರನಾಗಿ ಶರತ್ ಕುಮಾರ್ ಅಮ್ಮಣ್ಣಾಯ ಪಾವೂರು, ದೇವೇಂದ್ರನ ಪಾತ್ರದಲ್ಲಿ ಜೆನೀತ್ ಶೆಟ್ಟಿ ಬದಿಯಡ್ಕ, ಅಗ್ನಿಯಾಗಿ ಆಯುಷ್ಲಕ್ಷ್ಮಣ್ ಬದಿಯಡ್ಕ, ವಾಯುವಾಗಿ ರಿತೇಶ್ ಜಗನ್ನಾಥ್ ಸೂರಂಬೈಲು ಪಾತ್ರಗಳಿಗೆ ಜೀವತುಂಬಿದರು. ಭಾಗವತರಾಗಿ ವಾಸುದೇವ ಕಲ್ಲೂರಾಯರ ಧ್ವನಿ ಮೆಚ್ಚುಗೆಪಡೆಯಿತು. ಮದ್ದಳೆಯಲ್ಲಿ ಮುರಳಿ ಮಾಧವ ಮಧೂರು, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ ತಮ್ಮ ಕೈಚಳಕ ಮೆರೆದರು. ನೇಪಥ್ಯದಲ್ಲಿ ಕೇಶವ ಆಚಾರ್ಯ ಕಿನ್ಯ, ಶ್ರೀಶ ಪಂಜಿತ್ತಡ್ಕ, ಹರ್ಷಪ್ರಸಾದ್ ಪುತ್ತಿಗೆ, ಗಿರೀಶ ಕುಂಪಲ ಸಹಕರಿಸಿದರು.