HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕನ್ನಡದ ಸಂಸ್ಕೃತಿ ದೀಪದಂತೆ ಬೆಳಗಬೇಕು
ನುಡಿ ಸರಣಿಯಲ್ಲಿ ಉಡುಪುಮೂಲೆ
ಕುಂಬಳೆ: 'ದೀಪ' ದ ಎರಡು ಅಕ್ಷರಗಳು ಆಯಸ್ಸನ್ನು ವೃದ್ಧಿಸುತ್ತದೆ, ಮತ್ತು ಬರುವ ವಿಘ್ನಗಳನ್ನು ದೂರ ಮಾಡುತ್ತದೆ. ದೀಪ ಬೆಳಗಿಸುವ ಪ್ರಕ್ರಿಯೆ ಬರುವ ವಿಘ್ನಗಳನ್ನು ದೂರ ಮಾಡಿ ಸಂಘಟನೆಯೊಂದರ ಆಯಸ್ಸನ್ನು ಹೆಚ್ಚಿಸುತ್ತದೆ. ಕನ್ನಡಕ್ಕೆ ಬರುವ ವಿಘ್ನಗಳನ್ನು ದೂರೀಕರಿಸಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ತಾಳಮದ್ದಳೆಯಂತಹ ಕಲೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಜ್ಯೋತಿಷಿ, ಧಾಮರ್ಿಕ ಮುಂದಾಳು ರಾಘವೇಂದ್ರರಾಜ ಉಡುಪಮೂಲೆ ಅಭಿಪ್ರಾಯಪಟ್ಟರು.
 ಸಿರಿಚಂದನ ಕನ್ನಡಯುವ ಬಳಗ ಕಾಸರಗೋಡು ಸಂಸ್ಥೆಯ ನೇತೃತ್ವದಲ್ಲಿ ನಾಯ್ಕಾಪಿನ ಅನಂತನಗರದ ಕೆ. ರಾಮಚಂದ್ರ ಭಟ್ ಅವರ ನಿವಾಸ 'ಶ್ರೀಕೃಪಾ'ದಲ್ಲಿ ಶನಿವಾರ ನಡೆದ ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನ'ದ ಆರನೆಯ ಕಾರ್ಯಕ್ರಮವನ್ನು ದೀಪಪ್ರಜ್ವಲನಗೊಳಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಜಾಗೃತಿ ಉಪನ್ಯಾಸ ನೀಡಿದ ಬಳಗದ ಕಾರ್ಯಕಾರಿ ಸಮಿತಿ ಸದಸ್ಯೆ ಮೇಘಶ್ರೀ ಪಿ.ಎ ಮಾತನಾಡಿ, ಭಾಷಾವಾರು ಪ್ರಾಂತ್ಯ ವಿಂಗಡಣೆಯಾದಂದಿನಿಂದಲೇ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಗೆ ಹಲವು ಸಮಸ್ಯೆಗಳು ಉಂಟಾಗಿವೆ. ಕೆಲವು ಮಂದಿ ಒಂದೆಡೆಯಲ್ಲಿ ಅವನ್ನೆಲ್ಲಾ ಸರಳಗೊಳಿಸುತ್ತಾ ಬಂದಂತೆ ಇನೊಂದೆಡೆಯಲ್ಲಿ ಅವನ್ನು ಇಲ್ಲವಾಗಿಸುವ ಕರಾಳ ಕೈಗಳ ಸಂಖ್ಯೆ ಹೆಚ್ಚಾಗುತ್ತಿವೆ. ಲೋಕಸೇವಾ ಆಯೋಗದ ಸಂದರ್ಶನದಲ್ಲಿ ಭಾಷಾತಜ್ಞರು ಮಾಡಿದ ಎಡವಟ್ಟಿನ ಸಮಸ್ಯೆಯನ್ನು ಯುವತಲೆಮಾರು ಅನುಭವಿಸುವಂತಾಗಿದೆ. ರಿಷಬ್ ಶೆಟ್ಟಿ ನಿಮರ್ಾಣದ ಚಲನಚಿತ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಇದರಲ್ಲಿ ಬಂದಿರುವ ಕಥಾಹಂದರ ಮತ್ತು ಮಂಗಲ್ಪಾಡಿ ಶಾಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಸಮಸ್ಯೆಗಳ ನಡುವೆ ಸಾಮ್ಯತೆ ಇರುವುದು ಕಾಕತಾಳೀಯ. ಈ ಸಿನೆಮಾದಿಂದ ಕನ್ನಡ ಹೋರಾಟ ಮತ್ತಷ್ಟು ಬಲವಾಗಬೇಕಿದೆ. ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಿ ಪ್ರಯೋಜನವಿಲ್ಲ ಎನ್ನುವ ಮನೋಭಾವ ನಮ್ಮಲ್ಲಿ ಹಲವರಿಗಿದೆ. ಆದರೆ ಅದು ಸರಿಯಲ್ಲ. ಮಾತೃಭಾಷೆಯಲ್ಲಿ ಕಲಿತವನೇ ಹೆಚ್ಚು ಸದೃಢವಾಗಿ ಬೆಳೆಯಬಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಳಗದ ಕಾರ್ಯದಶರ್ಿ ಅಬ್ದುಲ್ ರಶೀದ್ ಉಪ್ಪಳ ಸಮಸ್ಯೆಗಳು ನಮ್ಮನ್ನು ಹೆಚ್ಚು ಕ್ರಿಯಾಶೀಲರಾಗುವಂತೆ ಮಾಡುತ್ತವೆ. ಕಾಸರಗೋಡಿನಲ್ಲಿ ಯುವಕರ ಕ್ರಿಯಾಶೀಲ ದುಡಿಮೆ ಅತ್ಯಗತ್ಯವಾದುದರಿಂದಲೇ ಸಿರಿಚಂದನ ಕನ್ನಡ ಯುವ ಬಳಗ (ರಿ)ದ ರೂಪೀಕರಣವಾಯಿತು. ಬಳಗ ಇಂದು ಜಾತಿ, ಮತ, ಧರ್ಮಗಳ ಇತಿಮಿತಿಗಳ ವ್ಯಾಪ್ತಿಗಿಂತ ಹೊರತಾಗಿದೆ. ಕೇರಳದಲ್ಲಿ ನೆರೆ ಬಂದಾಗ ಪರಿಹಾರ ಕಾರ್ಯದಲ್ಲಿ ಬಳಗ ಸಕ್ರಿಯವಾಗಿ ದುಡಿದಿದೆ. ಪಿ.ಎಸ್ ಸಿ ತರಗತಿ, ಗಿಡನೆಡುವಕಾರ್ಯಕ್ರಮ, ಇಂತಹ ಹಲವು ವಿಷಯಗಳಲ್ಲಿ ಬಳಗ ತೊಡಗಿಸಿಕೊಂಡಿದೆ. ಮಂಗಲ್ಪಾಡಿಯಲ್ಲಿ ಕನ್ನಡದ ಗಂಧಗಾಳಿ ಅರಿಯದ ಅಧ್ಯಾಪಕನ ನೇಮಕ ಮಾಡಿದ್ದರಿಂದ ಮಕ್ಕಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕನ್ನಡ ಭಾಷಾತಜ್ಞರ ಬೇಜವಾಬ್ದಾರಿಯಿಂದಾಗಿ ಒಂದುತಲೆಮಾರು ಕಷ್ಟ ಅನುಭವಿಸಬೇಕಾಯಿತು. ವಿದ್ಯಾವಂತರು ಮುಖ್ಯವಾಗಿ ಉನ್ನತ ಸ್ಥಾನದಲ್ಲಿದ್ದವರು ತಮ್ಮ ನೆಲೆ ಬೆಲೆಯನ್ನುಅರಿತುಕೊಂಡು ವ್ಯವಹರಿಸದಿದ್ದರೆ ಆ ವ್ಯಕ್ತಿಗೆ ಮಾತ್ರವಲ್ಲ, ಅವರು ದುಡಿಯುತ್ತಿರುವ ಸಂಸ್ಥೆಗೆ ಕಳಂಕ ಎಂದರು.
  ಸರಕಾರೀ ಕಾಲೇಜಿನ ಶಿಕ್ಷಕೇತರ ಸಿಬ್ಬಂದಿ ಸುಂದರಿ ಯು ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಿರಿಚಂದನ ಕನ್ನಡಯುವ ಬಳಗದ ಅಧ್ಯಕ್ಷ ರಕ್ಷಿತ್ ಪಿ.ಎಸ್, ಮಾರ್ಗದರ್ಶಕ ಡಾ. ರತ್ನಾಕರ ಮಲ್ಲಮೂಲೆ ಉಪಸ್ಥಿತರಿದ್ದರು.
ನೀಚರ್ಾಲು ಮಹಾಜನ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೆ.ರಾಮಚಂದ್ರ ಭಟ್ಸ್ವಾಗತಿಸಿ, ಬಳಗದ ಸದಸ್ಯ ಮತ್ತು ಕ್ಯಾಂಪ್ಕೋ ಉದ್ಯೋಗಿ ಪ್ರಸಾದ್ಕೆ.ಎಸ್ ವಂದಿಸಿದರು. ಕು.ಸಿಂಧೂರ ಕೆ.ಆರ್ಪ್ರಾರ್ಥನೆ ಹಾಡಿದರು. ಬಳಗದ ಸದಸ್ಯೆ ಆಷರ್ಿತಾಸಿ.ಎಚ್ ಕಾರ್ಯಕ್ರಮ ನಿರೂಪಿಸಿದರು.
 ಬಳಿಕ ದಿವಾಣ ಶಿವಶಂಕರ ಭಟ್ ನೇತೃತ್ವದಲ್ಲಿ ದೇವಿದಾಸ ವಿರಚಿತ ಯಕ್ಷಗಾನ ತಾಳಮದ್ದಳೆ 'ಶ್ರೀಕೃಷ್ಣ ಸಂಧಾನ' ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಯತೀಶ್ ಬಲ್ಲಾಳ್ ನಾಟೆಕಲ್ಲು ಹಾಗೂ ಮುರಳೀಕೃಷ್ಣ ಶಾಸ್ತ್ರಿ ತೆಂಕಬೈಲು, ಚೆಂಡೆ ಮತ್ತು ಮದ್ದಳೆಯಲ್ಲಿ ಉದಯಕಂಬಾರು ಮತ್ತು ಲವಕುಮಾರ್ ಐಲ, ಮುಮ್ಮೇಳದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಶ್ರದ್ಧಾ ನಾಯರ್ಪಳ್ಳ ಮತ್ತು ದಿವಾಕರ ಬಲ್ಲಾಳ ಎ.ಬಿ, ಭೀಮನಾಗಿ ನವೀನ ಕುಂಟಾರು, ದ್ರೌಪದಿಯ ಪಾತ್ರದಲ್ಲಿ ಶಶಿಧರ ಕುದಿಂಗಿಲ, ಧರ್ಮರಾಯನಾಗಿ ಕಾತರ್ಿಕ್ ಪಡ್ರೆ, ವಿದುರನಾಗಿ ಮಣಿಕಂಠ ಪಾಂಡಿಬಯಲು, ಕೌರವನಾಗಿ ಮನೋಜ್ ಎಡನೀರು ಸಹಕರಿಸಿದರು. ಬಳಗದ ಜತೆ ಕಾರ್ಯದಶರ್ಿ ಸೌಮ್ಯಾಪ್ರಸಾದ್ ಪಾತ್ರ ಪರಿಚಯ ಮಾಡಿ ಸದಸ್ಯ ಕೀರ್ತನ್ಕುಮಾರ್ ಸಿ.ಎಚ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries