ರೂ.550 ಕೋಟಿ ಮೌಲ್ಯದ ಯೋಜನೆಗಳ ಘೋಷಣೆ: ವಾರಣಾಸಿಗೆ ಪ್ರಧಾನಿ ಮೋದಿ ಉಡುಗೊರೆ
ವಾರಣಾಸಿ: ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೂ.550 ಕೋಟಿಯ ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಚಾಲನೆ ನೀಡಿದ್ದಾರೆ.
ವಾರಣಾಸಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಳೇ ಕಾಶಿಗಾಗಿ ಇಂಟಿಗ್ರೇಟೆಡ್ ಪವರ್ ಡೆವಲಪ್ಮೆಂಟ್ ಸ್ಕೀಮ್ (ಐಪಿಡಿಎಸ್) ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಅಟಲ್ ಇನ್ಕ್ಯುಬೇಷನ್ ಸೆಂಟರ್ ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಜೊತೆಗೆ ಹಲವು ಯೋಜನೆಗಳಿಗೆ ಚಾಲನೆ ನೀಡಿರುವ ಮೋದಿಯವರು, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ನೇತ್ರಶಾಸ್ತ್ರ ಕೇಂದ್ರಕ್ಕೆ ಶಂಕು ಸ್ಥಾಪನೆ ಮಾಡಿದ್ದಾರೆ.
ಯೋಜನೆಗಳಿಗೆ ಚಾಲನೆ ನೀಡದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಹರ ಹರ ಮಹಾದೇವ್ ಎಂದು ಕೂಗಿದ್ದಾರೆ. ಗಂಗೋತ್ರಿಯ ಗಂಗಾ ನದಿಯನ್ನು ಶುದ್ಧೀಕರಿಸು ಶ್ರಮ ಪಡಲಾಗುತ್ತಿದೆ. ಗಂಗಾ ನದಿ ಶುದ್ಧೀಕರಣ ಯೋಜನೆಗೆ ಈ ವರೆಗೂ ರೂ.21,000 ಕೋಟಿ ವೆಚ್ಚವಾಗಿದೆ. ವಾರಣಾಸಿಯಲ್ಲಿ ಪಯರ್ಾಟಣೆಯಿಂದ ಪರಿವರ್ತನೆಯ ಅಭಿಯಾನ ನಿರಂತವಾಗಿ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.