HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಭಾರತೀಯ ಪರಂಪರೆಗೆ ತಪ್ಪಿ ನಡೆಯುವವರೇ ನಮ್ಮ ಪರಮ ಶತ್ರುಗಳು-ರವೀಶ ತಂತ್ರಿ
   ಮುಳ್ಳೇರಿಯ: ಜಾತೀಯತೆಗೆ, ರಾಜಕೀಯಕ್ಕೆ ಅತೀತವಾದ ಸಮಾಜವನ್ನು ನಾವು ಕಟ್ಟಿ ಬೆಳೆಸಬೇಕು. ನಾವೆಲ್ಲಾ ಒಗ್ಗಟ್ಟಿನಿಂದ  ನಮ್ಮ  ಧರ್ಮವನ್ನು ಕಟಿಬದ್ಧರಾಗಬೇಕು. ಅನ್ಯ ಮತದವರನ್ನು ವಿರೋಧಿಸದೆ ಪ್ರೀತಿಸುವ; ಆದರೆ ಇನ್ನೊಂದು ಧರ್ಮದ ಚಿಂತನೆಗಳು ನಮ್ಮ ಧರ್ಮಕ್ಕೆ ಧಕ್ಕೆ ತಂದಾಗ ವಿರೋಧಿಸೋಣ. ಭಾರತೀಯ ಪರಂಪರೆಗೆ ತಪ್ಪಿ ನಡೆಯುವವರೇ ನಮಗೆ ಪರಮ ಶತ್ರುಗಳು. ಸುದೃಢ ಭಾರತವನ್ನು ನಿಮರ್ಿಸುವಲ್ಲಿ ನಮ್ಮ ತಾಯಿ ಭಾರತಿಯು, ದೈವಿಕ ಶಕ್ತಿಗಳು, ನಮ್ಮ ಆಧ್ಯಾತ್ಮಿಕ ಚಿಂತನೆಗಳು ಸಹಕಾರಿಯಾಗಲಿ ಎಂದು ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿ ಹೇಳಿದ್ದಾರೆ.
   ಅವರು ಕುಂಟಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ನಡೆದ 37ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಆಚರಣೆಯ ಅಂಗವಾಗಿ ಗುರುವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾಮರ್ಿಕ ಭಾಷಣ ಮಾಡಿದರು. ಕಾಸರಗೋಡಿನ  ಪತ್ರಿಕೆಯೊಂದರಲ್ಲಿ ಗಣೇಶೋತ್ಸವ ಆಚರಿಸುವ ಭಕ್ತರನ್ನು ಅವಹೇಳನ ಮಾಡುವ ವ್ಯಂಗಚಿತ್ರವು ಪ್ರಕಟವಾದುದನ್ನು ಅವರು ತೀವ್ರವಾಗಿ ಖಂಡಿಸಿದರು. 
   ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ.ಯಂ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಜಯರಾಮ ಪಾಟಾಳಿ ಪಡುಮಲೆ ಅವರನ್ನು ದಿ.ಮಾಟೆಡ್ಕ ಪುರುಷೋತ್ತಮ ರಾವ್ ಸ್ಮರಣಾರ್ಥ ಬ್ರಹ್ಮಶ್ರೀ ರವೀಶ ತಂತ್ರಿ ಅಭಿನಂದಿಸಿದರು. ಕುಂಟಾರಿನ ಮೊದಲ ಮಹಿಳಾ ನ್ಯಾಯವಾದಿ ಎಂಬ ಹೆಗ್ಗಳಿಕೆ ಪಡೆದ ಕು.ಚಿತ್ರಕಲಾ, ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ದೀಕ್ಷಾ.ಕೆ.ಪಿ,  ಪ್ಲಸ್ಟು ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ಶ್ಯಾಮಿನಿ.ಯು.ಕೆ, ಕೇರಳೋತ್ಸವದಲ್ಲಿ ರಾಜ್ಯ ಮಟ್ಟದ ಸ್ಪಧರ್ೆಗಳಲ್ಲಿ ಭಾಗವಹಿಸಿದ ಸುಮಾವತಿ, ಸರಸ್ವತಿ, ದಿವ್ಯಶ್ರೀ, ಸುಜಾತ.ಎಂ, ದೀಕ್ಷಾ ಭಾಸ್ಕರನ್, ವಿದ್ಯಾವಾಣಿ, ಚಂದ್ರಶೇಖರ.ಎಂ ರನ್ನು ಅಭಿನಂದಿಸಲಾಯಿತು.
    ಮಂದಿರದ ಗುರುಸ್ವಾಮಿ ಯಾದವ ರಾವ್, ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ಗಂಗಾಧರ ಮಾಟೆಡ್ಕ, ಭಜನಾ ಮಂದಿರ ಸಮಿತಿ ಅಧ್ಯಕ್ಷ ಜನಾರ್ದನ.ಕೆ ಉಪಸ್ಥಿತರಿದ್ದರು. ರವೀಂದ್ರ.ಎಚ್ ಪ್ರಾಸ್ತಾವಿಕ ಭಾಷಣ ಮಾಡಿದರು. 
 ಸುನಿಲ್ ಕುಮಾರ್.ಎಚ್ ಸ್ವಾಗತಿಸಿದರು. ಲತೀಶ್.ಎಚ್ ಕಾರ್ಯಕ್ರಮ ನಿರೂಪಿಸಿದರು. ಯತೀಶ್.ಎಚ್ ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries