HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಬಿಜೆಪಿ ಚೆಂಗಳ ಪಂಚಾಯತಿ ಬೂತ್ ಸಮಿತಿಯ ಸಮ್ಮೇಳನ
     ಮುಳ್ಳೇರಿಯ : ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸವಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕು. ಕೇರಳ ರಾಜ್ಯದ ಎಡರಂಗ ಸರಕಾರದ ಮಲತಾಯಿ ಧೋರಣೆಯನ್ನು ಅನುಸರಿಸುವುದರಿಂದ ಜನತೆಗೆ ಅರ್ಹವಾಗಿ ಲಭಿಸಬೇಕಾದ ಸವಲತ್ತುಗಳು ಸಕಾಲಕ್ಕೆ ದೊರಕದಂತಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದರು.
ಅವರು ಚೂರಿಪಳ್ಳದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಚೆಂಗಳ ಪಂಚಾಯತಿ 120ನೇ ಬೂತ್ ಸಮಿತಿಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
   ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳು ಜನತೆಗೆ ಲಭಿಸಿಲ್ಲ. ಎಡ ಬಲ ರಂಗಗಳ ಅನೇಕ ಕಾರ್ಯಕರ್ತರು ತಮ್ಮ ಪಕ್ಷದ ಬಗ್ಗೆ ಬೇಸತ್ತು ಭಾರತೀಯ ಜನತಾಪಕ್ಷದತ್ತ ವಾಲುತ್ತಿದ್ದಾರೆ. ಮೋದಿ ಸರಕಾರದ ಆಡಳಿತದಿಂದ ದೇಶ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೇರುವಂತೆ ಪಕ್ಷದ ಕಾರ್ಯಕರ್ತರು ಸಂಘಟಿತ ಪ್ರಯತ್ನವನ್ನು ಮಾಡಬೇಕು ಎಂದು ಕರೆಯಿತ್ತರು.
ಬೂತ್ ಸಮಿತಿಯ ಅಧ್ಯಕ್ಷ ಸತೀಶ್ ನೆಕ್ರಾಜೆ ಸಭೆಯ ಅಧ್ಯಕ್ಷತೆ ವಹಿಸಿದರು. ಯುವಮೋಚರ್ಾ ರಾಜ್ಯ ಸಮಿತಿ ಸದಸ್ಯ ಸುನಿಲ್ ಪಿ.ಆರ್., ಕಾಸರಗೋಡು ಮಂಡಲ ಪ್ರಧಾನ ಕಾರ್ಯದಶರ್ಿ ಹರೀಶ್ ನಾರಂಪಾಡಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
   ಬಿಜೆಪಿ ಚೆಂಗಳ ಪಂಚಾಯತಿ ಪೂರ್ವ ವಲಯ ಅಧ್ಯಕ್ಷ ಮೋಹನ್ ಶೆಟ್ಟಿ ನೆಕ್ರಾಜೆ, ಪ್ರ.ಕಾರ್ಯದಶರ್ಿ ರಾಜೇಶ್ ಕುಮಾರ್ ಪೈಕ, ಕೃಷಿಕ ಮೋಚರ್ಾದ ಪ್ರಭಾಕರನ್ ಎಡನೀರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೂತ್ ಮಟ್ಟದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪ್ಲಸ್ ಟು ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಗಳಿಸಿದ ವಿದ್ಯಾಥರ್ಿಗಳನ್ನು ಅಭಿನಂದಿಸಲಾಯಿತು. ಬೂತ್ ಸಮಿತಿಯ ಪ್ರ.ಕಾರ್ಯದಶರ್ಿ ಕಿಶೋರ್ ಕುಮಾರ್ ಸ್ವಾಗತಿಸಿ, ಕಾರ್ಯಕರ್ತ ರವಿ ಎಡನೀರು ವಂದಿಸಿದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries