ವಿದ್ಯುತ್ ಚಾಲಿತ ಮೆಮು ರೈಲು ಕಾಸರಗೋಡಿಗೆ -ಸಂಸದ ಪಿ.ಕರುಣಾಕರನ್
ಕಾಸರಗೋಡು: ಕಣ್ಣೂರು-ಮಂಗಳೂರು ಮಧ್ಯೆ ಸಾಗಲಿರುವ ವಿದ್ಯುತ್ ಚಾಲಿತ ಮೆಮು ರೈಲು ಶೀಘ್ರದಲ್ಲೇ ಕಾಸರಗೋಡಿಗೆ ತಲುಪಲಿದೆ ಎಂದು ಸಂಸದ ಪಿ.ಕರುಣಾಕರನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರ ಮತ್ತು ಉಪನಗರಗಳಿಗೆ ಪೂರಕವಾಗಿರುವ ರೈಲು ಜಿಲ್ಲೆಯ ಹಾಗೂ ಕರಾವಳಿಯ ಪ್ರಧಾನ ನಗರಗಳ ಸಂಪರ್ಕಕ್ಕೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಕಣ್ಣೂರು ನಗರದಿಂದ ಮಂಗಳೂರು ತನಕದ ಮೆಮು ರೈಲುಯಾನಕ್ಕೆ ಶೀಘ್ರದಲ್ಲೇ ಹಸಿರು ನಿಶಾನೆ ಸಿಗಲಿದೆ ಎಂದು ದಕ್ಷಿಣ ರೈಲ್ವೇ ಪ್ರಧಾನ ಪ್ರಬಂಧಕ ಆರ್.ಕೆ.ಕುಲಕ್ಷೇತ್ರ ಈ ಸಂದರ್ಭ ತಿಳಿಸಿದ್ದಾರೆ. ಕನರ್ಾಟಕಕ್ಕೆ ಸಮೀಪವತರ್ಿಯಾಗಿರುವ ಕಾಞಂಗಾಡು-ಕಾಣಿಯೂರು ರೈಲು ಯೋಜನೆಯ ಸವರ್ೇ ಕಾರ್ಯ ಪೂರ್ಣಗೊಂಡಿದ್ದು, ರೈಲ್ವೇ ಇಲಾಖೆ ಅಧೀನದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಂಸದರು ತಿಳಿಸಿದ್ದಾರೆ. 1488 ಕೋಟಿ ರೂ.ಗಳ ಕಾಞಂಗಾಡು-ಕಾಣಿಯೂರು ರೈಲು ಯೋಜನೆಗೆ ಕೇಂದ್ರ ಸರಕಾರ ಮುಂದಿನ ಬಜೆಟ್ಟಿನಲ್ಲಿ ಹಣ ಮೀಸಲಿಡಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಉಳಿದಂತೆ ನೀಲೇಶ್ವರ, ಬೇಕಲ, ಉಪ್ಪಳದ ರೈಲ್ವೇ ಮೇಲ್ಸೇತುವೆಗಳ ನಿಮರ್ಾಣ ಕಾರ್ಯವನ್ನು ಶೀಗ್ರದಲ್ಲೇ ರೈಲ್ವೇ ಇಲಾಖೆ ಆರಂಭಿಸಲಿದೆ. ಬೈಂದೂರು- ಕಣ್ಣೂರು ಪ್ಯಾಸೆಂಜರ್ ರೈಲನ್ನು ಗುರುವಾಯೂರು ತನಕ ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಇಲಾಖೆ ಅಂಗೀಕರಿಸಲಿದೆ ಎನ್ನುವ ವಿಶ್ವಾಸವನ್ನು ಸಂಸದರು ವ್ಯಕ್ತಪಡಿಸಿದ್ದಾರೆ. ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡಬೇಕು. ಉಳಿದಂತೆ ಅಂತ್ಯೋದಯ ರೈಲಿಗೆ ಕಾಞಂಗಾಡು ಮತ್ತು ಪಯ್ಯನ್ನೂರಿನಲ್ಲಿ ನಿಲುಗಡೆ ನೀಡಬೇಕು ಎಂದು ಸಂಸದರು ರೈಲ್ವೇ ಇಲಾಖೆ ಅಧಿಕೃತರಲ್ಲಿ ಬೇಡಿಕೆ ಇರಿಸಿದ್ದಾರೆ. ಮಾವೇಲಿ ಎಕ್ಸ್ಪ್ರೆಸ್ ರೈಲುಯಾನದ ಸಮಯವನ್ನು ಈ ಹಿಂದಿನಂತೆ ಮುಂದುವರಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.