HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಶ್ರೀಕೃಷ್ಣನ ಸಂದೇಶಗಳಲ್ಲಿ  ಸಾಮಾಜಿಕ ಬದ್ಧತೆಯ ಸಾರವಿದೆ
      ಪರಂಬಳ ಕಯ್ಯಾರಿನಲ್ಲಿ  ನಡೆದ ಶ್ರೀಕೃಷ್ಣ  ಜನ್ಮಾಷ್ಟಮಿಯ ಧಾಮರ್ಿಕ ಸಭೆಯಲ್ಲಿ  ಪಳ್ಳತ್ತಡ್ಕ ಪರಮೇಶ್ವರ ಭಟ್
  ಉಪ್ಪಳ: ಜಗತ್ತಿಗೇ ಗುರುವಾಗಿರುವ ಶ್ರೀಕೃಷ್ಣ  ಪರಮಾತ್ಮನ ಪ್ರತೀ ಸಂದೇಶದಲ್ಲೂ ಧಾಮರ್ಿಕ ಜಾಗೃತಿಯ ಸೈದ್ಧಾಂತಿಕ ನಿಲುವಿದೆ ಹಾಗೂ ಸಾಮಾಜಿಕ ತತ್ವದ ಮತ್ತು  ಬದ್ಧತೆಯ ಶ್ರೇಷ್ಠ  ಸಾರವಿದೆ ಎಂದು ಹಿರಿಯ ವೈದಿಕ ವಿದ್ವಾಂಸ ಬ್ರಹ್ಮಶ್ರೀ ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್ ತಿಳಿಸಿದರು. 
   ವಿಶ್ವ ಹಿಂದು ಪರಿಷತ್ ಮತ್ತು  ಬಜರಂಗ ದಳ ಪರಂಬಳ ಕಯ್ಯಾರು ಉಪಖಂಡ ಸಮಿತಿ ಹಾಗೂ ಶ್ರೀಕೃಷ್ಣ  ಜನ್ಮಾಷ್ಟಮಿ ಉತ್ಸವ ಸಮಿತಿ ಮತ್ತು  ಮಹಿಳಾ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ  ಪರಂಬಳ ಕಯ್ಯಾರಿನಲ್ಲಿ  ಭಾನುವಾರ ಅಪರಾಹ್ನ  ಜರಗಿದ 15ನೇ ವರ್ಷದ ಶ್ರೀಕೃಷ್ಣ  ಜನ್ಮಾಷ್ಟಮಿ ಮಹೋತ್ಸವದ ಧಾಮರ್ಿಕ ಸಭೆಯಲ್ಲಿ ಅವರು ಭಾಗವಹಿಸಿ ಧಾಮರ್ಿಕ ಉಪನ್ಯಾಸ ನೀಡಿದರು.
    ಶ್ರೀಕೃಷ್ಣ  ಪರಮಾತ್ಮ  ಅವತಾರ ಪುರುಷನಾಗಿದ್ದು , ಕೃಷ್ಣವತಾರ ಎಂದರೆ ಪೂರ್ಣ ಅವತಾರ ಎಂದೇ ಅರ್ಥ. 125 ವರ್ಷಗಳ ಕಾಲ ವಿಶ್ವವನ್ನು  ಆಳಿದ ಶ್ರೀಕೃಷ್ಣನ ಭಗವದ್ಗೀತೆ ಸಂದೇಶ ಎಂದೆಂದಿಗೂ ಪ್ರಸ್ತುತವಾಗಿದೆ. ಅಜರ್ುನನಿಗೆ ಶ್ರೀಕೃಷ್ಣ  ಬೋಧಿಸಿದ ಭಗವದ್ಗೀತೆಯನ್ನು  ಪ್ರತಿಯೋರ್ವರೂ ಅಧ್ಯಯನ ಮಾಡಿಕೊಳ್ಳಬೇಕು. ಅಲ್ಲದೆ ಶ್ರೀಕೃಷ್ಣನ ಬಾಲ್ಯದ ತುಂಟಾಟದ ಪ್ರತೀ ಘಟನೆಗಳನ್ನು  ಮನನ ಮಾಡಿಕೊಂಡಾಗ ಮಾತ್ರ ಅದರೊಳಗಿನ ಸಾರವನ್ನು  ಪಡೆಯಲು ಸಾಧ್ಯ ಎಂದರು. 
    ಗೋಹತ್ಯೆ, ಅತ್ಯಾಚಾರ, ಅನಾಚಾರ, ಲವ್ ಜಿಹಾದ್, ಜಾತಿ ಪದ್ಧತಿ, ವಿವಿಧ ಕೋಮುಗಳ ಮಧ್ಯೆ ವೈಷಮ್ಯ, ಧರ್ಮದ ಅವಹೇಳನ, ಮತಾಂತರ ಮುಂತಾದ ಸಾಮಾಜಿಕ ಪಿಡುಗುಗಳಿಗೆ ಕಡಿವಾಣ ಹಾಕಬೇಕಾಗಿದೆ. ಗೋವುಗಳನ್ನು  ಪೂಜಿಸುವ ಪದ್ಧತಿಯನ್ನು  ಮುಂದುವರಿಸಬೇಕು. ಈ ಮೂಲಕ ಗೋವುಗಳ ಮಹತ್ವವನ್ನು  ಸಮಾಜಕ್ಕೆ ತಿಳಿಯಪಡಿಸಬೇಕು. ಜಗತ್ತು  ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ, ರಾಮಾಯಣ, ಮಹಾಭಾರತ, ಭಗವದ್ಗೀತೆ ಮೊದಲಾದ ಧಾಮರ್ಿಕ ಗ್ರಂಥಗಳ ತಳಹದಿಯಲ್ಲೇ ಸಮಾಜವು ನೆಲೆನಿಂತಿದೆ ಎಂಬುದನ್ನು  ಮರೆಯಬಾರದು ಎಂದು ಅವರು ನುಡಿದರು.
    ವಿಶ್ವ ಹಿಂದು ಪರಿಷತ್ ಮಂಗಳೂರು ಜಿಲ್ಲಾ  ಕಾಯರ್ಾಧ್ಯಕ್ಷ  ಗೋಪಾಲ ಕುತ್ತಾರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದಶರ್ಿ ಶರಣ್ ಪಂಪುವೆಲ್, ಧರ್ಮತ್ತಡ್ಕ ಶ್ರೀ ದುಗರ್ಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್ ನೇರೋಳು, ಕವಿ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ  ಕೆ.ಉಳಿಯತ್ತಡ್ಕ, ಸಾಹಿತಿ, ಕಲಾವಿದೆ, ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಡನೀರು ಇದರ ಅಧ್ಯಕ್ಷೆ  ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ, ಕಾಸರಗೋಡು ಜಿಲ್ಲಾ  ಪಂಚಾಯತು ಸದಸ್ಯೆ ಪುಷ್ಪಾ  ಅಮೆಕ್ಕಳ, ಪೈವಳಿಕೆ ಗ್ರಾಮ ಪಂಚಾಯತು ಸದಸ್ಯೆ ರಾಜೀವಿ ಪಿ.ರೈ ಕಯ್ಯಾರು ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಶುಭಹಾರೈಸಿದರು.
   ಕೇರಳ ರಾಜ್ಯದ ಪ್ರಾಕೃತಿಕ ವಿಕೋಪದಲ್ಲಿ  ಮಡಿದವರಿಗೆ, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನ ಹಾಗೂ ಹುತಾತ್ಮ  ಸೈನಿಕರಿಗೆ ಇದೇ ಸಂದರ್ಭದಲ್ಲಿ  ಮೌನಪ್ರಾರ್ಥನೆ ಸಲ್ಲಿಸಿ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು. ಗಣೇಶ್ ಪೊನ್ನೆತ್ತೋಡು ವಂದೇ ಮಾತರಂ ಹಾಡಿದರು. ಸತೀಶ್ಕುಮಾರ್ ಕಾಪು ಸ್ವಾಗತಿಸಿ, ಗಿರೀಶ್ಕುಮಾರ್ ಕಯ್ಯಾರು ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪೆರಿಯಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
    ಮಹೋತ್ಸವದ ಅಂಗವಾಗಿ ಬೆಳಿಗ್ಗೆ  ಮಂಜೇಶ್ವರ ಬ್ಲಾಕ್ ಪಂಚಾಯತು ಸದಸ್ಯ ಪ್ರಸಾದ್ ರೈ ಕಯ್ಯಾರು ಅವರಿಂದ ದೀಪ ಪ್ರಜ್ವಲನೆ, ಸಮಾರಂಭ ಉದ್ಘಾಟನೆ, ಸಂಘದ ಸದಸ್ಯರು ಮತ್ತು  ಸದಸ್ಯೆಯರಿಂದ ಭಜನೆ, ವಿವಿಧ ಸ್ಪಧರ್ೆಗಳ ಆಯೋಜನೆ, ಆಯ್ದ  ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಭೋಜನ ನಡೆಯಿತು. ಸಂಜೆ ಮಡಿಕೆ ಒಡೆಯುವುದು ಸಹಿತ ವಿವಿಧ ಸ್ಪಧರ್ೆಗಳ ಮುಂದುವರಿಕೆ ಮತ್ತು  ರಾತ್ರಿ ಸ್ಪಧರ್ಾ ವಿಜೇತರಿಗೆ ಬಹುಮಾನಗಳನ್ನು  ವಿತರಿಸಲಾಯಿತು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries