ಪೊಸಡಿ ಗುಂಪೆಯಲ್ಲಿ ಗುಹಾ ಪ್ರವೇಶ-ತೀರ್ಥ ಸ್ನಾನಗೈದು ಪುನೀತರಾದ ಭಕ್ತರು
ಉಪ್ಪಳ: ತೀರ್ಥ ಅಮಾವಾಸ್ಯೆಯ ದಿನವಾದ ಭಾನುವಾರ ಬಾಯಾರುಪದವು ಸಮೀಪದ ಪುರಾಣ ಪ್ರಸಿದ್ಧ ಪೊಸಡಿ ಗುಂಪೆ ಪವಿತ್ರ ಗುಹಾ ಪ್ರವೇಶ ನಡೆಯಿತು. ಬೆಳಗ್ಗೆ 6 ಗಂಟೆ ಸುಮಾರಿಗೆ ಆರಂಭವಾದ ಗುಹಾ ಪ್ರವೇಶಕ್ಕೆ ಹೆಚ್ಚಿನ ಸಂಖ್ಯೆಯ ಧಾಮರ್ಿಕ ಶ್ರದ್ಧಾಳುಗಳು ಭಾಗವಹಿಸಿ ವಿಭೂತಿ ಸಂಗ್ರಹಿಸಿ ಪುನೀತರಾದರು. ಪೊಸಡಿ ಗುಂಪೆ ಕಾನ ತರವಾಡಿನ ಶ್ರೀಕೃಷ್ಣ ಭಟ್ ಮತ್ತು ರವೀಶ್ ಭಟ್ ಗುಂಪೆ ನೆಲ್ಲಿ ತೀರ್ಥಕ್ಕೆ ಪುಷ್ಪಗಳನ್ನು ಅಪರ್ಿಸಿ ತೀರ್ಥ ಸ್ನಾನ ಮಾಡುವ ಮೂಲಕ ವಿಭೂತಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಬಾರಿಯ ಗುಂಪೆ ವಿಭೂತಿ ಸಂಗ್ರಹಕ್ಕೆ ನೂರಕ್ಕಿಂತಲೂ ಮಿಕ್ಕಿದ ಭಕ್ತರು ಆಗಮಿಸಿದ್ದರು. ಕಾಟುಕುಕ್ಕೆ ಆಗಲ್ಪಾಡಿಯಿಂದ ಬಂದ ಆಸ್ತಿಕರು ಗುಹಾ ಪ್ರವೇಶ ಮಾಡಿದರು. ಭಕ್ತಾದಿಗಳು ಗುಂಪೆಯ ನೆಲ್ಲಿ ತೀರ್ಥದಲ್ಲಿ ಮಿಂದು ಶುಚಿಭರ್ೂತರಾಗಿ ಗೋವಿಂದನ ಸ್ಮರಣೆಯೊಂದಿಗೆ ಕಣಿವೆ ಮಾರ್ಗವಾಗಿ ಸಂಚರಿಸಿ ಸುಮಾರು 200 ಮೀ. ದೂರದ ವಿಭೂತಿ ಗುಹೆ ಪ್ರವೇಶಿಸಿದರು. ತೀರ ಬೆಳಕಿನ ಅಭಾವವಿರುವ ಕತ್ತಲ ಗುಹೆಗೆ ದೀಪ ನಿಶಿದ್ಧವಾದ ಕಾರಣ ಒಬ್ಬರ ಹಿಂದೆ ಒಬ್ಬರಂತೆ ಕೈ ಹಿಡಿದು ಗುಹಾ ಸುರಂಗ ಸಂಚರಿಸಿ ವಿಭೂತಿ ಸಂಗ್ರಹಿಸುವ ಮೂಲಕ ಪುನೀತರಾದರು.
ವಿಭೂತಿ ಸಂಗ್ರಹದ ಮಹತ್ವ:
ಪುರಾತನ ಕಾಲದಿಂದ ನಡೆದು ಬರುತ್ತಿರುವ ಪರಂಪರೆಯಂತೆ ಶ್ರಾವಣ ಮಾಸದ ತೀರ್ಥ ಅಮಾವಾಸ್ಯೆಯಂದು ಪೊಸಡಿ ಗುಂಪೆಯ ಗುಹೆ ಪ್ರವೇಶಿಸಿ ವಿಭೂತಿ ಸಂಗ್ರಹಿಸುವುದು ವಾಡಿಕೆಯಾಗಿದೆ. ಶಾಕ್ತ ಮತ್ತು ಶೈವ ಸಂಪ್ರದಾಯದಂತೆ ವಿಭೂತಿಧಾರಣೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಪೊಸಡಿ ಗುಂಪೆ ಗುಹಾ ಪ್ರವೇಶ ವಿಶೇಷವಾಗಿದೆ.