ಹಿಂದೂ ವಿಶ್ವಾಸ ಅವಹೇಳನ : ಕಾಸರಗೋಡಿನಲ್ಲಿ ಪ್ರತಿಭಟನೆ
ಕಾಸರಗೋಡು: ಗಣೇಶ ಚತುಥರ್ಿಯಂದು ಕಾಸರಗೋಡಿನ ಮಲಯಾಳ ಸಂಜೆ ಪತ್ರಿಕೆ `ಉತ್ತರದೇಶಂ' ನಲ್ಲಿ ಭಕ್ತರನ್ನು ಅವಹೇಳನಗೈಯುವ ಕಾಟರ್ೂನ್ ಪ್ರಕಟಿಸಲಾಗಿದೆ ಎಂದು ಆರೋಪಿಸಿ ಹಿಂದೂ ಐಕ್ಯವೇದಿಕೆ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾಸರಗೋಡು ಮತ್ತು ಬದಿಯಡ್ಕದಲ್ಲಿ ಪ್ರತಿಭಟನೆ ಮೆರವಣಿಗೆ ನಡೆಯಿತು.
ಹಿಂದೂ ಭಾವನೆಗಳನ್ನು ಅವಹೇಳನಗೈಯ್ಯುವ ಕಾಟರ್ೂನ್ ಪ್ರತಿಭಟಿಸಿ ಕಾಸರಗೋಡು ನಗರದಲ್ಲಿ ಶುಕ್ರವಾರ ಬೆಳಿಗ್ಗೆ ಮೆರವಣಿಗೆ ನಡೆಸಲಾಯಿತು. ಕಾಸರಗೋಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಪತ್ರಿಕೆಯಲ್ಲಿ ಪ್ರಕಟವಾದ ಕಾಟರ್ೂನ್ ವಿರುದ್ಧ ಘೋಷಣೆಯನ್ನು ಮೊಳಗಿಸಲಾಯಿತು.
ಉತ್ತರದೇಶಂ ದೈನಿಕದ ಗುರುವಾರದ ಪ್ರಕಟಣೆಯ ಮುಖಪುಟದಲ್ಲಿ ವ್ಯಂಗ್ಯಚಿತ್ರಕಾರ ಪಿ.ವಿ.ಕೃಷ್ಣನ್ ಅವರು ಪ್ರಧಾನಿ ಮೋದಿಯವರನ್ನು ಹೋಲುವಂತೆ ಗಣಪತಿ ತನ್ನ ವಾಹನವಾದ ಮೂಶಿಕನಲ್ಲಿ ಭೂಲೋಕಕ್ಕೆ ತೆರಳಲು ತನ್ನ ವಾಹನವೆಲ್ಲಿ ಎಂದು ಕೇಳಿದಾಗ ಮೂಶಿಕವು ಪೆಟ್ರೋಲ್ ಬೆಲೆಯ ಅಪರಿಮಿತ ಏರಿಕೆಯಿಂದ ಇಂಧನ ಇಲ್ಲ ಎಂಬ ರೀತಿಯಲ್ಲಿ ಪ್ರಕಟವಾಗಿರುವುದು ವಿವಾದಾತ್ಮಕವಾಗಿ ಬದಲಾಯಿತು. ಈ ಹಿಂದೆಯೂ ಇದೇ ಕಲಾವಿದರು ಬೇರೊಂದು ಧರ್ಮದ ಭಾವನೆಯನ್ನು ಕೆರಳಿಸುವ ವ್ಯಂಗ್ಯ ಚಿತ್ರ ರಚಿಸಿ ವಿವಾದ ಸೃಷ್ಟಿಯಾಗಿ ಬಳಿಕ ಕ್ಷಮೆ ಕೇಳಿದ್ದರು.