HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಪ್ರಜ್ಞಾವಂತ ಕಲಾಸಕ್ತರಿಂದ ಯಕ್ಷಗಾನಕ್ಕೆ ಪ್ರೋತ್ಸಾಹ ಸ್ತುತ್ಯರ್ಹ-ಡಾ.ಶ್ರೀನಿಧಿ ಸರಳಾಯ
                       ಶೇಣಿ ರಂಗಜಂಗಮ ಕಾರ್ಯಕ್ರಮ 
     ಬದಿಯಡ್ಕ: ಪ್ರಜ್ಞಾವಂತ ಆಸಕ್ತರು ಇಂದು ಕಲೆಗೆ ಪ್ರೋತ್ಸಾಹವನ್ನು ನೀಡುತ್ತ ಯಕ್ಷಗಾನವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಸಂಸ್ಕೃತಿಯ ಮೇಲಿನ ದಬ್ಬಾಳಿಕೆ, ನಮ್ಮತನವನ್ನು ನಾವು ಕಳೆದುಕೊಂಡಿರುವುದರಿಂದ ಯಕ್ಷಗಾನಕ್ಕೆ ಹೊಡೆತ ಬಿದ್ದ  ಕಾಲವೊಂದಿತ್ತು. ಆದರೆ ಇಂದು ಕಾಲಚಕ್ರ ಬದಲಾಗಿದೆ ಎಂದು ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಹೇಳಿದರು.
ಅವರು ಗುರುವಾರ ಬದಿಯಡ್ಕ ಬಸ್ ನಿಲ್ದಾಣದ ಮುಂಭಾಗ ಶಾಸ್ತ್ರೀಸ್ ಕಂಪೌಂಡ್ನ ಸೀತಾರಾಮ ಸಂಕೀರ್ಣದಲ್ಲಿ ಶೇಣಿ ರಂಗ ಜಂಗಮ ಟ್ರಸ್ಟ್  ಕಾಸರಗೋಡು, ಯಕ್ಷಸ್ನೇಹಿ ಬಳಗ ಪೆರ್ಲ ಇವರ ನೇತೃತ್ವದಲ್ಲಿ ಶೇಣಿ ಶತಕ ಸರಣಿ-8 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಕ್ಷದಿಗ್ಗಜ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಜನ್ಮ ಶತಮಾನೋತ್ಸವ ವಷರ್ಾಚರಣೆಯ ಸಂಭ್ರಮದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಎಣ್ಮಕಜೆ ಗ್ರಾಮಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ. ಪೆರ್ಲ ಶೇಣಿ ಸಂಸ್ಮರಣಾ ಭಾಷಣ ಮಾಡಿ ಮಾತನಾಡಿ  ಶೇಣಿಯವರ ಸವಿನೆನಪಿಗಾಗಿ ಸ್ಮಾರಕವನ್ನು ನಿಮರ್ಿಸಬೇಕು. ಬಡತನದಲ್ಲಿ ಹುಟ್ಟಿ ಕಲೆಯಲ್ಲಿ ಶ್ರೀಮಂತಿಕೆಯನ್ನು ಕಂಡು ಯಕ್ಷಗಾನದ ಮೂಲಕ ಹೃದಯ ವಿಶಾಲತೆಯ, ಮಾನವತೆಯ, ಧರ್ಮಸಾಮರಸ್ಯದ ಸಂದೇಶವನ್ನು ಅವರು ಪ್ರಪಂಚಕ್ಕೆ ನೀಡಿದ್ದಾರೆ. ಒಬ್ಬ ವ್ಯಕ್ತಿ ಪ್ರಾಮಾಣಿಕವಾಗಿ ವೃತ್ತಿಯನ್ನು  ಆಯ್ಕೆಮಾಡಿಕೊಂಡರೆ ಆತ ಒಂದಲ್ಲ ಒಂದು ದಿನ ಕೀತರ್ಿಶಾಲಿಯಾಗಿ ಉಳಿಯುತ್ತಾರೆ ಎನ್ನುವುದಕ್ಕೆ ಶೇಣಿಯವರ ಬದುಕು ಒಂದು ಉತ್ತಮ ಉದಾಹರಣೆಯಾಗಿದೆ. ಬದುಕಿನುದ್ದಕ್ಕೂ ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಜನಸಾಮಾನ್ಯರನ್ನು ರಾತ್ರಿಯೆಲ್ಲಾ ರಂಜಿಸಿ ಯಕ್ಷಪ್ರಪಂಚದ ಮಿನುಗುತಾರೆಯಾಗಿ ಮೂಡಿಬಂದಿದ್ದಾರೆ. ಸೋಲಿಲ್ಲದ ಸರದಾರನಾಗಿ ಎಂದಿಗೂ ನಮ್ಮ ಮನದಲ್ಲಿ ಅವರು ನೆಲೆಯಾಗಿದ್ದಾರೆ ಎಂದು ಅವರು ತಿಳಿಸಿದರು.
  ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಎಸ್.ಎನ್. ಮಯ್ಯ ಬದಿಯಡ್ಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯದಶರ್ಿ ಎನ್.ಕೆ.ಅರವಿಂದ ಕುಮಾರ್ ಅಲೆವೂರಾಯ, ಕಲಾಪೋಷಕ ರಾಘವೇಂದ್ರ ನಾಯಕ್ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸತೀಶ ಪುಣಿಂಚತ್ತಾಯ ಪೆರ್ಲ ಸ್ವಾಗತಿಸಿ, ನಾರಾಯಣ ಮೂಲಡ್ಕ ವಂದಿಸಿದರು. ಶೇಣಿ ವೇಣುಗೋಪಾಲ ಭಟ್ ನಿರೂಪಣೆಗೈದರು. ಬಾಲ ಕಲಾವಿದ ಮಾಸ್ಟರ್ ಸಮೃದ್ಧ ಪುಣಿಂಚತ್ತಾಯ ಪೆರ್ಲ ಯಕ್ಷಗಾನ ಶೈಲಿಯಲ್ಲಿ ಗಜಮುಖ ನಾನಿನ್ನ ನೆನೆವೆ ಎಂದು ಪ್ರಾರ್ಥನೆಯನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಂಡರು.
ಬಳಿಕ ನಡೆದ ಸಂವಾದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಭಾಗವತರಾಗಿ ಬೇಂದ್ರೋಡು ಗೋವಿಂದ ಭಟ್, ಸತೀಶ ಪುಣಿಂಚತ್ತಾಯ ಪೆರ್ಲ, ಚೆಂಡೆಮದ್ದಳೆಯಲ್ಲಿ ಉದಯ ಕಂಬಾರು, ಶ್ರೀಧರ ಎಡಮಲೆ ಸಹಕರಿಸಿದರು. ಪಾತ್ರವರ್ಗದಲ್ಲಿ ಡಾ. ಬೇ.ಸಿ. ಗೋಪಾಲಕೃಷ್ಣ, ಶೇಣಿ ವೇಣುಗೋಪಾಲ ಭಟ್, ಸದಾಶಿವ ಆಳ್ವ ತಲಪಾಡಿ, ನಾರಾಯಣ ಮೂಲಡ್ಕ ತಮ್ಮ ಪಾತ್ರಗಳಿಗೆ ಜೀವತುಂಬುವ ಮಾತುಗಳಿಂದ ಗಮನಸೆಳೆದರು.
ಶುಕ್ರವಾರ ಅಪರಾಹ್ನ ಅಂಗದ ಸಂಧಾನ ಪ್ರಸಂಗದಲ್ಲಿ ತಾಳಮದ್ದಳೆ ನಡೆಯಿತು. ಇಂದು(ಶನಿವಾರ) ಅಪರಾಹ್ನ ಸಮಾರೋಪ ಸಮಾರಂಭದಲ್ಲಿ ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಅಧ್ಯಕ್ಷತೆಯಲ್ಲಿ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್, ಕೇಳು ಮಾಸ್ತರ್ ಅಗಲ್ಪಾಡಿ ಪಾಲ್ಗೊಳ್ಳಲಿದ್ದಾರೆ. ಬಳಿಕ ವೀರಮಣಿ ಕಾಳಗ ತಾಳಮದ್ದಳೆ ಪ್ರಸ್ತುತಗೊಳ್ಳಲಿದ್ದು, ತಲ್ಪಣಾಜೆ ವೆಂಕಟ್ರಮಣ ಭಟ್ ಭಾಗವತರಾಗಿ ಸಹಕರಿಸಲಿದ್ದಾರೆ. ಪಾತ್ರವರ್ಗದಲ್ಲಿ ವಿನಯ ಆಚಾರ್ ಹೊಸಬೆಟ್ಟು,ಶೇಣಿ ವೇಣುಗೋಪಾಲ ಭಟ್, ಮೂಲಡ್ಕ ನಾರಾಯಣ, ಕುಮಾರಿ ಅಶ್ವಿನಿ ಆಚಾರ್ ಹೊಸಬೆಟ್ಟು, ಶಂಕರ್ ಸಾರಡ್ಕ ಪಾಲ್ಗೊಳ್ಳಲಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries