HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ವಿಮೆ ಮಾಡಿಸದ ಅಪಘಾತಕ್ಕೀಡಾದ ವಾಹನಗಳನ್ನು ಹರಾಜು ಮಾಡಿ: ಸುಪ್ರೀಂ ಕೋಟರ್್
     ನವದೆಹಲಿ: ಅಪಘಾತಕ್ಕೊಳಗಾಗಿರುವವವರಿಗೆ ಪರಿಹಾರ ನೀಡಲು ವಿಮೆ ಮಾಡಿಸಿಕೊಳ್ಳದಿರುವ ವಾಹನಗಳನ್ನು ಎಲ್ಲಾ ರಾಜ್ಯಗಳು ಹರಾಜಿಗಿಡಬೇಕು ಎಂದು ಸುಪ್ರೀಂ ಕೋಟರ್್ ಆದೇಶ ನೀಡಿದೆ. ಈ ನಿಯಮ ಜಾರಿಗೆ ಬರಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು 12 ವಾರಗಳ ಕಾಲವಕಾಶವನ್ನು ನ್ಯಾಯಾಲಯ ನೀಡಿದೆ.
   ಆದೇಶದ ಪ್ರಕಾರ ಹರಾಜಿನಿಂದ ಬಂದ ಹಣವನ್ನು ಮೋಟಾರು ಅಪಘಾತ ಹಕ್ಕುಗಳ ನ್ಯಾಯಾಧೀಕರಣ(ಎಂಎಸಿಟಿ)ಯಲ್ಲಿ ಠೇವಣಿಯಿಡಬೇಕು. ಪ್ರಸ್ತುತ ದೆಹಲಿಯಲ್ಲಿ ಮಾತ್ರ ಈ ನಿಯಮ ಪಾಲಿಸಲಾಗುತ್ತಿದೆ.
   ಎಂಎಸಿಟಿ ಕಾಯ್ದೆಯಡಿ, ಅಪಘಾತದಲ್ಲಿ ಮಡಿದವರ ಹಿಂದಿನ ಆದಾಯಗಳಂತಹ ವಿಷಯಗಳನ್ನು ನಿಗದಿಪಡಿಸಿ ಪರಿಹಾರಗಳನ್ನು ನೀಡಬೇಕು. ಅಪಘಾತದಲ್ಲಿ ಮೃತಪಟ್ಟ ಕುಟುಂಬದ ಸಂಬಂಧಪಟ್ಟ ವ್ಯಕ್ತಿಯ ಖಚರ್ುವೆಚ್ಚಗಳಿಗೆ ಹಣವನ್ನು ನೀಡಬೇಕಾಗುತ್ತದೆ. ಅದು ಅಪಘಾತದಲ್ಲಿ ಮೃತ ವ್ಯಕ್ತಿಯ ವಯಸ್ಸನ್ನು ಅವಲಂಬಿಸಿರುತ್ತದೆ.
   ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ವಿಮೆ ಕಡ್ಡಾಯ ಮಾಡಿಸಬೇಕೆಂದು ಇತ್ತೀಚೆಗೆ ಸುಪ್ರೀಂ ಕೋಟರ್್ ಕಡ್ಡಾಯ ಮಾಡಿದ ನಂತರ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಳೆದ ತಿಂಗಳು ದೀಘರ್ಾವಧಿ ಮೂರನೇ ವ್ಯಕ್ತಿ ವಿಮೆಯನ್ನು ಕಡ್ಡಾಯ ಮಾಡಿತ್ತು. ಮೋಟಾರು ವಾಹನಗಳ ಕಾಯ್ದೆ ಪ್ರಕಾರ ಮೂರನೇ ವ್ಯಕ್ತಿ ವಿಮೆ ಕಡ್ಡಾಯವಾಗಿರುತ್ತದೆ.
ವಿಮೆ ಮಾಡಿಸಿಕೊಳ್ಳದ ವಾಹನಗಳನ್ನು ಚಲಾಯಿಸುವುದು ಅಪರಾಧ ಮತ್ತು ವಾಹನಗಳಿಗೆ ಮೋಟಾರು ವಾಹನಗಳ ಕಾಯ್ದೆಯಡಿ ಮೂರನೇ ಪಾಟರ್ಿ ವಿಮೆ ಕಡ್ಡಾಯ ಮಾಡಬೇಕೆಂದು ಅಪಘಾತಕ್ಕೀಡಾದ ವ್ಯಕ್ತಿಯೊಬ್ಬರ ಪತ್ನಿ ಮಾಡಿದ್ದರ ಮನವಿ ಮೇರೆಗೆ ಸುಪ್ರೀಂ ಕೋಟರ್್ ಈ ಆದೇಶ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries