ಸಾಮಾಜಿಕ ಕಳಕಳಿಯ ಕಲಾವಿದನಿಗೆ ಅಂತಿಮ ಜಯ ಸವಾಕ್ನಿಂದ ಶತಸಿದ್ದ- ಚಿತ್ರ ನಿದರ್ೇಶಕ ಫಾರೂಖ್ ಅಬ್ದುಲ್ಲ
ಸವಾಕ್ ಜಿಲ್ಲಾ ಅಧ್ಯಯನ ಶಿಬಿರ-ಮಹಿಳಾ ಸಮಾವೇಶ ಉದ್ಘಾಟಿಸಿ ಅಭಿಮತ
ಮಂಜೇಶ್ವರ: ರಾಷ್ಟ್ರ, ಸಮಾಜ ಪರಿವರ್ತನೆಯಲ್ಲಿ ಕಲಾವಿದರುಗಳ ಪಾತ್ರ ಮಹತ್ತರವಾದುದಾಗಿದ್ದು, ಕಲಾವಿದರಾಶೋತ್ತರಗಳ ನಿರ್ವಹಣೆಯ ಜವಾಬ್ದಾರಿಯು ನಾಗರಿಕ ಸಮಾಜಕ್ಕಿದೆ. ರಾಜ್ಯದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಕಲಾ ಕ್ಷೇತ್ರಗಳ ಸಂಘಟನೆ ನ್ಯಾಯಯುತ ಬೇಡಿಕೆಗಳನ್ನು ಪೂರೈಸುವಲ್ಲಿ ಮುಂಚೂಣಿಯಲ್ಲಿರುವುದು ಸಂಘಟನಾತ್ಮಕ ಶಕ್ತಿಯ ಸಂಕೇತ ಎಂದು ಮಲೆಯಾಳ ಹಿರಿಯ ಚಲನಚಿತ್ರ ನಿದರ್ೇಶಕ ಫಾರೂಖ್ ಅಬ್ದುಲ್ಲ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್ ಕೇರಳ(ಸವಾಕ್) ನೇತೃತ್ವದಲ್ಲಿ ಭಾನುವಾರ ಮಂಜೇಶ್ವರದ ಕಲಾಸ್ಪರ್ಶಂ ಪೈನ್ ಆಟ್ಸರ್್ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ ಮತ್ತು ಮಹಿಳಾ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರು, ಕಲಾ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವವರು ವ್ಯಾಪಕ ಸವಾಲುಗಳಿಂದ ಇಂದು ಜರ್ಜರಿತರಾಗಿದ್ದು, ಸಾಮಾಜಿಕ ಕಳಕಳಿಯ ಕಲಾಸೇವೆಗೆ ಎಂದಿಗೂ ಮಾನ್ಯತೆ ಸವಾಕ್ ಮೂಲಕ ಲಭ್ಯವಾಗುವುದೆಂದು ತಿಳಿಸಿದರು.
ಸವಾಕ್ ಜಿಲ್ಲಾಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಲಾಗಿ ಪ್ರಧಾನ ಭಾಷಣಗೈದು ಮಾತನಾಡಿದ ಸವಾಕ್ ರಾಜ್ಯಾಧ್ಯಕ್ಷ ಆಲಿಯಾರ್ ಪುನ್ನಪ್ರ ಅವರು, ಹೋರಾಟದ ಹಿನ್ನೆಲೆಯಿಂದ ಮೂಡಿಬಂದಿರುವ ಸವಾಕ್ ಕಲಾವಿದರ ಶಕ್ತಿಯಾಗಿ ಬೆಳೆದು ನಿಂತಿದೆ. ಕಲಾವಿದರಲ್ಲಿ ಮನುಷ್ಯತ್ವದ ಭಾವ ಮಾತ್ರ ಹುಟ್ಟಬಲ್ಲದಾಗಿದ್ದು, ಸುದೃಢ ಸಮಾಜ ನಿಮರ್ಾಣದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಅವರು ತಿಳಿಸಿದರು.
ರಾಜ್ಯವನ್ನು ಹೈರಾಣಗೊಳಿಸಿರುವ ಪ್ರಾಕೃತಿಕ ವಿಕೋಪಗಳಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಆದರೆ ರಾಜ್ಯ ಸರಕಾರವು ಈ ಕಾರಣಗಳಿಂದ ರಾಜ್ಯ ಶಾಲಾ ಕಲೋತ್ಸವಗಳನ್ನು ರದ್ದುಪಡಿಸಲು ಹೊರಟಿರುವುದು ನವೋತ್ಥಾನ ಕನಸುಗಳನ್ನು ಹಿಸುಕುವ ಯತ್ನ ಎಂದು ತಿಳಿಸಿದರು. ಕಲೆ, ಸಂಸ್ಕೃತಿ, ಸಾಹಿತ್ಯಗಳಿಲ್ಲದ ನವೋತ್ಥಾನ ಕಲ್ಪನೆ ಹುಚ್ಚುತನದ ಪರಮಾವಧಿಯಾಗಿದ್ದು, ಸರಕಾರದ ಇಂತಹ ಅಪಕ್ವ ನಿಧರ್ಾರಗಳಿಂದ ಯುವ ಕಲಾವಿದರ ಭವಿಷ್ಯ ಮತ್ತಷ್ಟು ಕಳಾಹೀನಗೊಳ್ಳುವ ಭೀತಿ ಎದುರಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಧ್ವನಿಯೆತ್ತಬೇಕು ಎಂದು ಅವರು ಕರೆನೀಡಿದರು.
ಸವಾಕ್ ರಾಜ್ಯ ಪ್ರಧಾನ ಕಾರ್ಯದಶರ್ಿ ಸುದರ್ಶನನ್ ವರ್ಣ ಉಪಸ್ಥಿತರಿದ್ದು ಮಾತನಾಡಿದರು. ರಾಜ್ಯ ಸಮಿತಿ ಕಾರ್ಯಕಾರಿ ಕಾರ್ಯದಶರ್ಿ ವಿನೋದ್ ಕುಮಾರ್ ಅಚುಂಬಿತ ಅವರು ಕಲಾವಿದ ಮತ್ತು ಸಂಘಟನೆ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನೀಡಿದರು. ರಾಜ್ಯ ಜೊತೆ ಕಾರ್ಯದಶರ್ಿ ನ್ಯಾಯವಾದಿ ಪಿ.ಪಿ. ವಿಜಯನ್, ಸವಾಕ್ ಮಹಿಳಾ ಸಮಿತಿ ರಾಜ್ಯಾಧ್ಯಕ್ಷೆ ಬಿಂದು ಸಜಿತ್ ಕುಮಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಜಯಶ್ರೀ ಕಾರಡ್ಕ, ಸವಾಕ್ ಮಂಜೇಶ್ವರ ವಲಯಾಧ್ಯಕ್ಷ ಪ್ರಮೋದ್ ಪಣಿಕ್ಕರ್, ಕಾಸರಗೋಡು ವಲಯಾಧ್ಯಕ್ಷ ಸನ್ನಿ ಅಗಸ್ಟಿನ್, ಕಾರಡ್ಕ ವಲಯಾಧ್ಯಕ್ಷ ಮಧುಸೂದನ ಬಲ್ಲಾಳ್, ಕಾಂಞಿಂಗಾಡ್ ವಲಯಾಧ್ಯಕ್ಷ ಗೋವಿಂದನ್ ಮಾರಾರ್ ಉಪಸ್ಥಿತರಿದ್ದು ಮಾತನಾಡಿದರು.
ಕಲಾ ಸ್ಪರ್ಶಂ ಅಕಾಡೆಮಿ ನಿದರ್ೇಶಕಿ ಜೀನ್ ಮೊಂತೇರೋ, ಸವಾಕ್ ಮಂಜೇಶ್ವರ ಬ್ಲಾಕ್ ಕಾರ್ಯದಶರ್ಿ ಚಂದ್ರಹಾಸ ಕಯ್ಯಾರ್, ಉಪಾಧ್ಯಕ್ಷರಾದ ದಯಾನಂದ ಮಾಡ, ಸುಜಾತಾ ಮಂಜೇಶ್ವರ, ಎ.ಬಿ.ರಾಧಾಕೃಷ್ಣ ಬಲ್ಲಾಳ್, ಖಜಾಂಜಿ ಬಾಲಕೃಷ್ಣ ಮಾಸ್ತರ್, ಭಾಸ್ಕರ ಮಂಜೇಶ್ವರ, ಮೋಹಿನಿ ಕೊಪ್ಪಳ, ಸವಾಕ್ ಮಹಿಳಾ ಸಮಿತಿ ಜಿಲ್ಲಾ ಕಾರ್ಯದಶರ್ಿ ಜಯಂತಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣ್ಯರನ್ನು ಅಭಿನಂದಿಸಲಾಯಿತು.
ಸವಾಕ್ ಮಂಜೇಶ್ವರ ವಲಯಾಧ್ಯಕ್ಷ ಪ್ರಮೋದ್ ಪಣಿಕ್ಕರ್ ಸ್ವಾಗತಿಸಿ, ಕಾರ್ಯದಶರ್ಿ ಚಂದ್ರಹಾಸ ಕಯ್ಯಾರು ವಂದಿಸಿದರು. ಜಿಲ್ಲಾ ಕಾರ್ಯದಶರ್ಿ ವೇಣುಗೋಪಾಲ ಶೇಣಿ ಕಾರ್ಯಕ್ರಮ ನಿರೂಪಿಸಿದರು.