ೆ ಸೆ. 9ರಂದು ಬಣ್ಣದ ಮಹಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಸನ್ಮಾನ ಸಮಾರಂಭ
ಮತ್ತು ಯಕ್ಷಗಾನ ಬಯಲಾಟ
ಪುತ್ತೂರು: ಯಕ್ಷಗಾನ ಪ್ರಕಾರದಲ್ಲಿ ಬಣ್ಣದ ವೇಷವೆಂದು ಕರೆಯಲ್ಪಡುವ ರಾಕ್ಷಸ ಮತ್ತು ರಾಕ್ಷಸ ಗುಣಗಳನ್ನು ಹೊಂದಿರುವ ಪಾತ್ರಗಳಿಗೆ ವಿಶೇಷವಾದ ಸ್ಥಾನವಿದೆ. ಸಾಂಪ್ರದಾಯಿಕ ಯಕ್ಷಗಾನ ಬಯಲಾಟವು ಬಣ್ಣದ ವೇಷವೊಂದರ ಹೊರತು ಅಪೂರ್ಣವೆನ್ನುವುದು ಸಾರ್ವತ್ರಿಕ ಅಭಿಪ್ರಾಯ.
ಇಂತಹ ಬಣ್ಣದ ವೇಷಗಳಲ್ಲಿ ಸರಿಸುಮಾರು ಏಳು ದಶಕಗಳ ಕಾಲ ಮಿಂಚಿದ ಒಬ್ಬ ಅದ್ಫುತ ಕಲಾವಿದ ಶ್ರೀ ಬಣ್ಣದ ಮಹಾಲಿಂಗ ಸಂಪಾಜೆಯವರು. ಅವರು ಇಂದು ಜೀವಿಸಿರುತ್ತಿದ್ದರೆ ಶತಾಯುಷಿಗಳಾಗಿ ನಮ್ಮೊಡನಿರುತ್ತಿದ್ದರು. ತನ್ನ ಅದ್ಭುತ ಪ್ರತಿಭೆಯಿಂದಲೇ ಯಕ್ಷರಂಗವನ್ನು ಬೆರಗು ಹುಟ್ಟಿಸಿದ ಯಕ್ಷರಾತ್ರಿಗಳ ಈ ಪ್ರಚಂಡ ರಾಕ್ಷಸ 25. 05. 2004ರಂದು ಇಹಲೋಕದವನ್ನು ತ್ಯಜಿಸಿದಾಗ ಅವರ ಪ್ರಾಯ 91. ಅವರ ನೆನಪಿನಲ್ಲಿ ಕಳೆದ ವರ್ಷ ಪುತ್ತೂರನ್ನು ಕೇಂದ್ರವಾಗಿರಿಸಿ ಸ್ಥಾಪಿಸಲ್ಟಟ್ಟ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಎರಡನೆಯ ವರ್ಷದ ಕಾರ್ಯಕ್ರಮವು ಸೆ. 9 ಭಾನುವಾರ ಅಪರಾಹ್ನ 1.30 ರಿಂದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿಮರ್ಿಸಿದ ಪಡುಮಲೆ ನಾರಾಯಣ ಪಾಟಾಳಿ ವೇದಿಕೆಯಲ್ಲಿ ನೆರವೇರಲಿರುವುದು.
ಮಧ್ಯಾಹ್ನ1.30 ರಿಂದ ಚೂಡಾಮಣಿ ಪ್ರಸಂಗದ ಯಕ್ಷಗಾನ ಬಯಲಾಟದೊಂದಿಗೆ ಕಾರ್ಯಕ್ರಮ ಆರಂಭವಾಗುವುದು. 4.30 ರಿಂದ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಪೆಣರ್ೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಅನುವಂಶಿಕ ಗೌರವ ಮೊಕ್ತೇಸರರು ಮತ್ತು ಹಿರಿಯ ಸಾಹಿತಿಗಳೂ ಆದ ಶ್ರೀಕೃಷ್ಣಯ್ಯ ಅನಂತಪುರ ಉದ್ಘಾಟಿಸುವರು. ಹಿರಿಯ ಯಕ್ಷಗಾನ ಕಲಾವಿದ ಮತ್ತು ಮಾಜಿ ಶಾಸಕರಾದ ಕುಂಬಳೆ ಸುಂದರ ರಾವ್ ಬಣ್ಣದ ಮಹಾಲಿಂಗರವರ ಸಂಸ್ಮರಣೆಯನ್ನು ಮಾಡಲಿದ್ದಾರೆ. ವಿಶೇಷ ಅತಿಥಿಗಳಾಗಿ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು, ಆದರ್ಶ ಆಸ್ಪತ್ರೆಯ ಹಿರಿಯ ಸರ್ಜನ್ ಡಾ. ಎಂ. ಕೆ. ಪ್ರಸಾದ್, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಆದ್ಯಕ್ಷರಾದ ಎನ್. ಸುಧಾಕರ ಶೆಟ್ಟಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ತೆಂಕುತಿಟ್ಟಿನ ಸುಪ್ರಸಿದ್ಧ ನಿವೃತ್ತ ಬಣ್ಣದ ವೇಷಧಾರಿ ಮತ್ತು ಬಣ್ಣದ ಮಹಾಲಿಂಗರ ಕಿರಿಯ ಒಡನಾಡಿಗಳೂ ಆದ ದಾಸನಡ್ಕ ರಾಮ ಕುಲಾಲರಿಗೆ ಪ್ರದಾನ ಮಾಡಲಾಗುವುದು. ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಕೆ. ಸಿ. ಪಾಟಾಳಿ ಪಡುಮಲೆಯವರು ಅಭಿನಂದನಾ ಭಾಷಣವನ್ನು ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ತೆಂಕುತಿಟ್ಟಿನ ಹಿರಿಯ ನಿವೃತ್ತ ಕಲಾವಿದರಾದ ಪದವಿನಂಗಡಿ ರಾಮ ಪಾಟಾಳಿಯವರನ್ನು ಸನ್ಮಾನಿಸಲಾಗುವುದು. ಪ್ರತಿಷ್ಠಾನದ ಗೌರವ ಸಲಹೆಗಾರರಾದ ಕೆ. ರಾಮ ಮುಗ್ರೋಡಿಯವರು ಅಭಿನಂದನಾ ಭಾಷಣವನ್ನು ಮಾಡುವರು. ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಸುಬ್ರಾಯ ಸಂಪಾಜೆ ಮತ್ತು ಗೌರವ ಸಲಹೆಗಾರ ಮಹಾಲಿಂಗ ಮಂಗಳೂರು ಉಪಸ್ಥಿತರಿರುವರು. ಸಂಜೆ 6.ರಿಂದ ಪರಂಪರೆಯ ಮೇಳೈಸುವಿಕೆಯೊಂದಿಗೆ ತೆಂಕುತಿಟ್ಟು ಯಕ್ಷ ಪರಂಪರೆಯ ಹರಿಕಾರರಾದ ಅಮ್ಮಣ್ಣಾಯ, ಹೊಳ್ಳ ಮತ್ತು ಬಲಿಪ ಪ್ರಸಾದರ ಸಾರಥ್ಯದಲ್ಲಿ ಸುಪ್ರಸಿದ್ಧ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಕೂಡುವಿಕೆಯಿಂದ ಕುಂಭಕರ್ಣ ಕಾಳಗ ಮತ್ತು ಘಟೋತ್ಕಜ ವಧೆ ಎಂಬ ಯಕ್ಷಗಾನ ಬಯಲಾಟವು ನಡೆಯಲಿದೆ.
ಯಕ್ಷಗಾನದ ಬಣ್ಣದ ವೇಷ ಮತ್ತು ಪರಂಪರೆಗೆ ಹೆಚ್ಚಿನ ಒತ್ತು ಕೊಟ್ಟು ಆಯೋಜಿಸಲಾದ ಈ ಕಾರ್ಯಕ್ರಮಗಳು ಅನೇಕ ಪ್ರತ್ಯೇಕತೆಗಳೊಂದಿಗೆ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ, ಬಣ್ಣದ ಮಹಾಲಿಂಗರ ವ್ಯಕ್ತಿತ್ವದ ಅನಾವರಣಕ್ಕೆ ಪೂರಕವಾಗಿ ನಡೆಯಲಿವೆ. ಆ ಮೂಲಕ ಯಕ್ಷರಂಗದ ದಿಗ್ಗಜರೊಬ್ಬರ ಔಚಿತ್ಯಪೂರ್ಣ ಸಂಸ್ಮರಣೆಯು ನಡೆದು ಹೊಸ ದಾಖಲೆ ಸೃಷ್ಟಿಸಲಿದೆ.