ಅತಿವೃಷ್ಠಿಗೆ ಸಿಲುಕಿದ ರೈಡರ್ ಗಳು
ಕಾಸರಗೋಡು: ಬುಲೆಟ್ ರೈಡರ್ ಗಳಾದ ಈರ್ವರು ಹಿಮಾಚಲಪ್ರದೇಶದ ಮನಾಲಿಗೆ ಪ್ರವಾಸಕ್ಕೆ ತೆರಳಿದವರು ಅಲ್ಲಿಯ ಅತಿವೃಷ್ಠಿಗೆ ಸಿಲುಕಿರುವುದು ಬೆಳಕಿಗೆ ಬಂದಿದೆ. ಇವರು ಸಂಕಷ್ಟಕ್ಕೊಳಗಾಗಿರುವುದನ್ನು ತಿಳಿದ ಮನೆಯವರು ರಕ್ಷಣೆಗಾಗಿ ಸೈನ್ಯಕ್ಕೆ ಮೊರೆಯಿಟ್ಟಿದ್ದಾರೆ.
ಕಾಸರಗೋಡು ರೈಲು ನಿಲ್ದಾಣ ಪರಿಸರದ ತಾಯಿಲಂಗಾಡಿಯ ನಾಝಿ ಕೋಟೇಜ್ನ ಶಾಹುಲ್ ಹಮೀದ್ ರವರ ಪುತ್ರ ಬಿ.ಎಫ್.ಅಬ್ದುಲ್ ನೈಯ್ಯೀನ್ ಹಾಗೂ ತಾಯಲಂಗಾಡಿಯ ಟಿ.ಎಂ.ಎಂ.ಹಾಜಿ ಹೌಸ್ ನ ಪಿ.ಎಚ್.ಹಂಸ ಎಂಬವರ ಮಗ ಪಿ.ಎಚ್.ಮೊಹಮ್ಮದ್ ಶೆಬೀರ್ ಎಂಬವರು ಮನಾಲಿಯಲ್ಲಿ ದಟ್ಟ ಮಳೆಗೆ ಸಿಲುಕಿರುವುದಾಗಿ ಸಂಬಂಧಿಕರಿಗೆ ಮಾಹಿತಿ ಲಭ್ಯವಾಗಿದೆ.
ಅತಿ ಮಳೆಯ ಕಾರಣ ಸಂಪರ್ಕ ಸಂವಹಕ್ಕೆ ಅಡ್ಡಿಯಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲಲ್. ಕಾಶ್ಮೀರದಿಂದ ಇತರ ರೈಡ್ ಗಳೊಂದಿಗೆ ದಿನಗಳ ಹಿಂದೆ ತೆರಳಿದ್ದ ಮಾಹಿತಿ ಲಭ್ಯವಾಗಿತ್ತು. ಆದರೆ ಆ ಬಳಿಕ ಕಳೆದೆರಡು ದಿನಗಳಿಂದ ಅಲ್ಲಿ ಸುರಿಯುತ್ತಿರುವ ಭೀಕರ ಮಳೆಯಿಂದ ಸಂಪರ್ಕ ಕಡಿತಗೊಂಡಿದ್ದು, ಪತ್ತೆಗಾಗಿ ಲೇಹ್ ಮನಾಲಿಯ ಸೈನಿಕರಲ್ಲಿ ಅಗತ್ಯದ ಹುಡುಕಾಟಕ್ಕೆ ಮನವಿ ಮಾಡಲಾಗಿದೆ. ಇವರ ಸಂಪರ್ಕ ಮತ್ತು ನೆರವಿಗಾಗಿ ಜಿಲ್ಲಾ ಪೋಲೀಸ್ ವರಿಷ್ಠರು ಮತ್ತು ಸಂಬಂಧಿಸಿದ ಸೈನ್ಯಾಧಿಕಾರಿಗಳಿಗೆ ಮನವಿ ನೀಡಲಾಗಿದೆ.
ಇವರೀರ್ವರೂ ಸೆ.5 ರಂದು ಊರಿಂದ ಬೈಕ್ ರೈಡ್ ಮೂಲಕ ತೆರಳಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಮನಾಲಿಗೆ ತಲಪಿರುವ ಬಗ್ಗೆ ಅವರು ತಿಳಿಸಿದ್ದರು. ಬಳಿಕ ಸಂಪರ್ಕ ಕಡಿತಗೊಂಡಿರುವುದಾಗಿ ಮನೆಯವರು ತಿಳಿಸಿದ್ದಾರೆ.