HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕಾಸರಗೋಡಿನಲ್ಲಿ  ಶಾಲಾ ಕಲೋತ್ಸವ ನಡೆಸಲು ಹೆಚ್ಚುತ್ತಿರುವ ಬೇಡಿಕೆ
    ಕಾಸರಗೋಡು: ಈ ಶೈಕ್ಷಣಿಕ ವರ್ಷದ ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವವನ್ನು  ಕಾಸರಗೋಡು ಜಿಲ್ಲೆಯಲ್ಲಿ  ನಡೆಸಬೇಕೆಂಬ ಬೇಡಿಕೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಈ ಬಾರಿಯ ಶಾಲಾ ಕಲೋತ್ಸವಕ್ಕೆ ಪ್ರವಾಹ ರಹಿತ ಜಿಲ್ಲೆಗಳನ್ನು  ಪರಿಗಣಿಸಲಾಗುವುದು ಎಂದು ಕೇರಳ ಶಿಕ್ಷಣ ಇಲಾಖೆಯು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ  ಕಾಸರಗೋಡಿನಲ್ಲಿ  ಶಾಲಾ ಕಲೋತ್ಸವ ಕಾರ್ಯಕ್ರಮವನ್ನು  ಆಯೋಜಿಸಬೇಕೆಂಬ ಆಗ್ರಹ ಬಲಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ  ಜಿಲ್ಲೆಯನ್ನು  ಕೇಂದ್ರೀಕರಿಸಿ ಸಂಘಟನಾತ್ಮಕವಾಗಿಯೂ ಒತ್ತಾಯ ಕೇಳಿಬರುತ್ತಿದೆ.
   ಕಾಸರಗೋಡು ಜಿಲ್ಲೆಯಲ್ಲಿ  ಪ್ರಥಮವಾಗಿ ಹಾಗೂ ಒಂದೇ ಬಾರಿಯಾಗಿ 1991ರಲ್ಲಿ  ಕಾಸರಗೋಡು ನಗರದಲ್ಲೇ ರಾಜ್ಯ ಮಟ್ಟದ ಶಾಲಾ ಕಲೋತ್ಸವ ನಡೆದಿತ್ತು. ಆ ಬಳಿಕ ಕಲೋತ್ಸವಕ್ಕೆ ಕನಿಷ್ಠ  ಒಂದು ಬಾರಿಯಾದರೂ ಕಾಸರಗೋಡು ಜಿಲ್ಲೆಯನ್ನು ಆಡಳಿತಕ್ಕೆ ಬಂದ ಯಾವುದೇ ಸರಕಾರಗಳು ಪರಿಗಣನೆಗೆ ತೆಗೆದುಕೊಳ್ಳದಿರುವುದು ವಿಪಯರ್ಾಸವಾಗಿದೆ.
   1991ರಲ್ಲಿ  ಕಾಸರಗೋಡಿನಲ್ಲಿ  ನಡೆದ ರಾಜ್ಯಮಟ್ಟದ ಶಾಲಾ ಕಲೋತ್ಸವಕ್ಕೆ ಅಡ್ಕತ್ತಬೈಲು ಶಾಲೆ ಸಮೀಪದ ತಾಳಿಪಡ್ಪು  ಮೈದಾನ ಪ್ರಧಾನ ವೇದಿಕೆಯಾಗಿ ಸಜ್ಜುಗೊಂಡಿತ್ತು. ಅದರ ಹೊರತಾಗಿ ನಗರದ ಬಿಇಎಂ ಹೈಸ್ಕೂಲ್, ಟೌನ್ ಹಾಲ್, ಟೌನ್ ಯುಪಿ ಶಾಲೆ, ಕಾಸರಗೋಡು ಜಿಎಚ್ಎಸ್ಎಸ್ನ ಹಲವಾರು ವೇದಿಕೆಗಳಲ್ಲಿ  ಕಲೋತ್ಸವವು ಅದ್ದೂರಿಯಾಗಿ ನಡೆದಿತ್ತು. ಅಂದು ಕಾಸರಗೋಡು ನಗರದಲ್ಲಿ  ವಸತಿ ಗೃಹಗಳ ಸಂಖ್ಯೆ ಕಡಿಮೆಯಾಗಿದ್ದರೂ ಕಾರ್ಯಕ್ರಮ ಮಾತ್ರ ಅತ್ಯಂತ ಅಚ್ಚುಕಟ್ಟಾಗಿ ಮತ್ತು  ವ್ಯವಸ್ಥಿತವಾಗಿ ಮುಕ್ತಾಯ ಕಂಡಿತ್ತು.
   ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ  ಕಲೋತ್ಸವದಲ್ಲಿ  ಭಾಗವಹಿಸಲು ಬರುವ ವಿದ್ಯಾಥರ್ಿ - ವಿದ್ಯಾಥರ್ಿನಿಯರು, ಅಧ್ಯಾಪಕರು, ಹೆತ್ತವರು ಹಾಗೂ ಸಂಘಟಕರಿಗೆ ವಸತಿ ಸೌಕರ್ಯ ಏರ್ಪಡಿಸುವುದು ಕಲೋತ್ಸವದಲ್ಲಿ  ಪ್ರಧಾನ ಸಮಸ್ಯೆಯಾಗಿ ಪರಿಣಮಿಸುತ್ತದೆ. ಅಲ್ಲದೆ ವಿದ್ಯಾಥರ್ಿನಿಯರಿಗೆ ಅತೀ ಹೆಚ್ಚಿನ ಸುರಕ್ಷತೆ ಒದಗಿಸಬೇಕಾಗಿ ಬರುವುದರಿಂದ ಸಂಘಟಕರಿಗೆ ದೊಡ್ಡ  ತಲೆನೋವು ಸೃಷ್ಟಿಯಾದಂತಾಗುತ್ತದೆ.
   ಈ ಮಧ್ಯೆ 1991ರಲ್ಲಿ  ಬೇರೆ ಯಾವುದೇ ಸೌಕರ್ಯಗಳಿಲ್ಲದ ಕಾರಣ ಕಾಸರಗೋಡು ಟೌನ್ ಯುಪಿ ಶಾಲೆಯಲ್ಲಿ  ವಿದ್ಯಾಥರ್ಿನಿಯರಿಗೆ ವಾಸ್ತವ್ಯ ಸೌಕರ್ಯ ಕಲ್ಪಿಸಲಾಗಿತ್ತು. ಆದರೆ ಅಂದು ಆ ಶಾಲೆಯಲ್ಲಿ  ಸುತ್ತುಗೋಡೆ ಹೆಚ್ಚು  ಸುರಕ್ಷಿತವಾಗಿರಲಿಲ್ಲ. ಕಲೋತ್ಸವದಲ್ಲಿ ಭಾಗವಹಿಸುವ ವಿದ್ಯಾಥರ್ಿನಿಯರಿಗೆ ಶಾಲೆಯಲ್ಲಿ  ವಾಸ್ತವ್ಯ ಸೌಕರ್ಯ ಏರ್ಪಡಿಸಿದ ಹಿನ್ನೆಲೆಯಲ್ಲಿ  ಶಾಲೆಯ ಸುತ್ತುಗೋಡೆಯನ್ನು  ನವೀಕರಿಸಿ ಮತ್ತಷ್ಟು  ಎತ್ತರಕ್ಕೆ ಏರಿಸಲಾಗಿತ್ತು. ಆ ಮೂಲಕ ಬಾಹ್ಯವ್ಯಕ್ತಿಗಳು ಶಾಲೆಯೊಳಗೆ ಪ್ರವೇಶಿಸುವುದನ್ನು  ತಡೆಯುವ ಕ್ರಮ ಕೈಗೊಳ್ಳಲಾಗಿತ್ತು.
   ಈ ಮಧ್ಯೆ ಅಂದು ಅಡ್ಕತ್ತಬೈಲು ಶಾಲೆಯನ್ನು  ಪ್ರಧಾನ ಭೋಜನ ಶಾಲೆಯನ್ನಾಗಿ ಮಾಡಲಾಗಿತ್ತು. ಕಲೋತ್ಸವದ ಪೂರ್ಣ ಮೇಲ್ನೋಟವನ್ನು  ಸಾರ್ವಜನಿಕ ಶಿಕ್ಷಣ ನಿದರ್ೇಶಕರೇ ವಹಿಸಿಕೊಂಡು ಪ್ರಶಂಸೆಗೂ ಪಾತ್ರರಾಗಿದ್ದರು. ಇದರ ಅಂಗವಾಗಿ ರಾಜ್ಯಮಟ್ಟದ ಶಾಲಾ ಕಲೋತ್ಸವಕ್ಕೆ ಕಾಸರಗೋಡು ಕೂಡ ಪರಿಗಣನೆಯಲ್ಲಿದೆ ಎಂದು ಕೇರಳ ಸರಕಾರವು ಹೇಳುತ್ತಿರುವ ಹೆಚ್ಚು  ಸೂಕ್ತವಾಗಿಯೇ ಕಂಡುಬರುತ್ತಿದೆ.
   ಒಂದು ವೇಳೆ ಕಲೋತ್ಸವವು ಕಾಸರಗೋಡಿನಲ್ಲಿ  ನಡೆದರೂ ಅದರಲ್ಲಿ  ಪಾಲ್ಗೊಳ್ಳಲು ರಾಜ್ಯದ ವಿವಿಧ  ಜಿಲ್ಲೆಗಳಿಂದ ಬರುವ ಸಹಸ್ರಾರು ಮಂದಿ ವಿದ್ಯಾಥರ್ಿಗಳು, ಅಧ್ಯಾಪಕರು, ಸಂಘಟಕರು, ತೀಪರ್ುಗಾರರು, ಹೆತ್ತವರು, ಪೊಲೀಸರು ಮೊದಲಾದವರಿಗೆ ಕಲೋತ್ಸವ ಮುಗಿಯುವ ವರೆಗೆ ವಸತಿ ಸೌಲಭ್ಯ ಏರ್ಪಡಿಸಬೇಕಾಗಿ ಬರುವುದು ದೊಡ್ಡ  ಸಮಸ್ಯೆಯಾಗಿ ತಲೆದೋರುತ್ತಿದೆ.
1991ರಲ್ಲಿ  ಇದ್ದುದಕ್ಕಿಂತಲೂ ಹೆಚ್ಚು  ಕಲೆಗಳನ್ನು  ಶಾಲಾ ಕಲೋತ್ಸವದ ಸ್ಪಧರ್ಾ ವಿಭಾಗಗಳಲ್ಲಿ  ಇತ್ತೀಚೆಗಿನ ಹಲವಾರು ವರ್ಷಗಳಿಂದ ಒಳಪಡಿಸುತ್ತಾ  ಬರಲಾಗಿದೆ. ಇದರಿಂದಾಗಿ ಕಲೋತ್ಸವದಲ್ಲಿ  ಭಾಗವಹಿಸುವ ವಿದ್ಯಾಥರ್ಿಗಳ ಸಂಖ್ಯೆಯಲ್ಲಿ  ಹೆಚ್ಚಳವೂ ಉಂಟಾಗಿದೆ. ಈ ನಿಟ್ಟಿನಲ್ಲಿ  ಹೆಚ್ಚುವರಿ ಮತ್ತು  ಸುರಕ್ಷಿತ ವಾಸ್ತವ್ಯ ಸೌಕರ್ಯ ಏರ್ಪಡಿಸಬೇಕಾಗಿ ಬರಲಿದೆ. ಇದು ಸಂಘಟಕ ಸಮಿತಿಗೆ ದೊಡ್ಡ  ಸವಾಲಾಗಿ ಪರಿಣಮಿಸುವ ಸಾಧ್ಯತೆ ನಿಚ್ಚಳವಾಗಿದೆ.
   ಜಿಲ್ಲೆಯಲ್ಲಿ  ಯಶಸ್ವಿ ಶಾಲಾ ಕಲೋತ್ಸವ : ರಾಜ್ಯ ಮಟ್ಟದ ಶಾಲಾ ಕಲೋತ್ಸವವನ್ನು  ಯಶಸ್ವಿಯಾಗಿ ನಡೆಸಲು ಪ್ರಧಾನ ಸಮಿತಿ ಅಲ್ಲದೆ ಹಲವು ಉಪಸಮಿತಿಗಳನ್ನೂ  1991ರಲ್ಲಿ  ರೂಪಿಸಲಾಗಿತ್ತು. ಸಮಿತಿಗಳು ಮತ್ತು  ಊರವರ ತುಂಬು ಸಹಕಾರ ಹಾಗೂ ಪ್ರೋತ್ಸಾಹದಿಂದಾಗಿ ಇತಿಮಿತಿಗಳ ಸೌಲಭ್ಯಗಳ ನಡುವೆಯೂ ಅಂದಿನ ರಾಜ್ಯ ಮಟ್ಟದ ಶಾಲಾ ಕಲೋತ್ಸವವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ಆ ಮೂಲಕ ಯಾವುದೇ ರಾಜ್ಯ ಮಟ್ಟದ ಕಲೋತ್ಸವವನ್ನು  ಯಶಸ್ವಿಯಾಗಿ ನಡೆಸಲು ಸಾಧ್ಯವೆಂಬುದನ್ನು  ಅಭಿವೃದ್ಧಿಯಲ್ಲಿ  ಸದಾ ಹಿಂದುಳಿದಿರುವ ಜಿಲ್ಲೆಯಾದ ಕಾಸರಗೋಡು ಇಡೀ ಕೇರಳ ರಾಜ್ಯಕ್ಕೆ ತೋರಿಸಿಕೊಟ್ಟಿತ್ತು. ಇದೆಲ್ಲದರ ಹಿನ್ನೆಲೆಯಲ್ಲಿ  ಈ ಬಾರಿ ಕಾಸರಗೋಡು ಜಿಲ್ಲೆಯಲ್ಲಿ  ರಾಜ್ಯ ಶಾಲಾ ಕಲೋತ್ಸವವನ್ನು  ನಡೆಸಬೇಕೆಂಬ ಆಗ್ರಹ ಹೆಚ್ಚಾಗತೊಡಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries