ಸೇವಾ ಸಹಕಾರಿ ಬ್ಯಾಂಕ್ ವಂಚನೆ ಬಯಲಿಗೆ-ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಕುಂಬಳೆ: ಪುತ್ತಿಗೆ ಗ್ರಾ.ಪಂ. ವ್ಯಾಪ್ತಿಯ ಮುಗು ಸೇವಾ ಸಹಕಾರಿ ಬ್ಯಾಂಕ್ ವ್ಯವಹಾರದಲ್ಲಿ ಕಂಡುಬಂದಿರುವ ವಂಚನೆಗೆ ಸಂಬಂಧಿಸಿ ಕ್ರಿಯಾ ಸಮಿತಿ ವಿಜಿಲೆನ್ಸ್ ಗೆ ಸಮಪರ್ಿಸಿರುವ ದೂರಿಗೆ ಸಂಬಂಧಿಸಿ ನಡೆಸಿದ ತನಿಖೆಯ ವರದಿಯ ಮೇರೆಗೆ ಆರೋಪಿಸಲ್ಪಟ್ಟ ಸದ್ರಿ ಬ್ಯಾಂಕಿಗೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲು ಸೋಮವಾರ ತಲಶ್ಚೇರಿಯ ವಿಜಿಲೆನ್ಸ್ ನ್ಯಾಯಾಲಯ ಆದೇಶ ನೀಡಿದೆ.
ಮುಗು ಸೇವಾ ಸಹಕಾರಿ ಬ್ಯಾಂಕಿನಿಂದ ವಿವಿಧ ಕಾಲಾವಧಿಯಲ್ಲಿ ಬ್ಯಾಂಕ್ ಆಡಳಿತ ಸಮಿತಿ ಮತ್ತು ಸದಸ್ಯರು ಅನಧಿಕೃತವಾಗಿ ಖಾಸಗಿಯಾಗಿ ಮತ್ತಯ ಬಾಂಡ್ ಗಳನ್ನು ಬಳಸಿ ಸಾಲ ತೆಗೆದಿರುವುದು ಮತ್ತು ಬ್ಯಾಂಕ್ನ ಸಾಮಾನ್ಯ ಗ್ರಾಹಕರ ಹೆಸರಿನಲ್ಲಿ ಗ್ರಾಹಕರ ಅರಿವಿಗೆ ಬಾರದಂತೆ ಸಾಲ ಮಂಜೂರಾತಿಗೊಳಿಸಿ ದುರ್ಬಳಕೆ ಮಾಡಿರುವುದು ವ್ಯಾಪಕ ಚಚರ್ೆಗೆ ಕಾರಣವಾಗಿತ್ತು. ಗ್ರಾಹಕರ ಅರಿವಿಗೆ ಬಾರದಂತೆ ಸಾಲ ಮಂಜೂರಾತಿಗೊಳಿಸಿ ಆ ಬಗ್ಗೆ ಬ್ಯಾಂಕ್ ನೋಟೀಸ್ ಲಭ್ಯವಾದಾಗ ಗ್ರಾಹಕರ ಹೆಸರಲ್ಲಿ ಇನ್ನೊಂದು ಸಾಲ ಮಂಜೂರುಗೊಳಿಸಿ ಮೊದಲ ಸಾಲವನ್ನು ಪಾವತಿಸಿ ಮತ್ತುಳಿದ ಸಾಲ ಪಾವತಿಗೆ ಪೀಡಿಸುವ ಮತ್ತು ಪೋಲೀಸ್ ದೂರು ದಾಖಲಿಸಿ ಗ್ರಾಹಕರ ಮೇಲೆ ಪಿತೂರಿ ಹೂಡುವ ಬಗ್ಗೆ ಗ್ರಾಹಕರು ರೋಷಗೊಂಡಿದ್ದು ಕ್ರಿಯಾ ಸಮಿತಿ ರೂಪಿಸಿ ನೈಜ ಘಟನೆಯ ಬಗ್ಗೆ ತನಿಖೆ ನಡೆಸಲು ವಿಜಿಲೆನ್ಸ್ ಮೊರೆ ಹೋಗಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ ವಿಜಿಲೆನ್ಸ್ ಅಧಿಕೃತರು ಬಳಿಕ ನಡೆಸಿದ ತನಿಖೆಯಲ್ಲಿ ಗ್ರಾಹಕ ಕ್ರಿಯಾ ಸಮಿತಿ ತಿಳಿಸಿದ ದೂರುಗಳು ಸತ್ಯವಾಗಿದ್ದು, ಜೊತೆಗೆ ಬ್ಯಾಂಕ್ ನಡೆಸಿರುವ ಇತರ ವಂಚನೆಯನ್ನೂ ಬಯಲಿಗೆಳೆದಿದ್ದು ಸೋಮವಾರ ತೀಪರ್ುನೀಡಿ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು, ಆಡಳಿತ ಸಮಿತಿಯ ಸದಸ್ಯರಿಗೆ ಶಿಕ್ಷೆ ವಿಧಿಸಲು ನಿದರ್ೇಶಿಸಿದೆ.
ತೀಪರ್ಿನ ಹಿನ್ನೆಲೆಯಲ್ಲಿ ಗ್ರಾಹಕ ಕ್ರಿಯಾ ಸಮಿತಿಯು ಶೀಘ್ರ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಆರೋಪಿಗಳನ್ನು ಕೂಡಲೇ ಸಹಕಾರಿ ಬ್ಯಾಂಕಿನಿಂದ ವಜಾಗೊಳಿಸಬೇಕು, ವಂಚನೆಗೈದ ಹಣವನ್ನು ಬ್ಯಾಂಕಿಗೆ ಮರಳಿ ಜಮೆಗೊಳಿಸಬೇಕು, ತಾವು ವಂಚನೆ ನಡೆಸಿರುವುದನ್ನು ಈಗಾಗಲೇ ಒಪ್ಪಿಕೊಂಡಿರುವ ಬ್ಯಾಂಕ್ ಉದ್ಯೋಗರ್ಸತರು ಸಾರ್ವಜನಿಕವಾಗಿ ಕ್ಷಮೆ ಕೇಳಿ ಉದ್ಯೋಗಕ್ಕೆ ರಾಜೀನಾಮೆ ನೀಡಬೇಕು ಮತ್ತು ಅರಿಯಪ್ಪಾಡಿಯಲ್ಲಿರುವ ಬ್ಯಾಂಕಿನ ಶಾಖೆಯ ನೂತನ ಕಟ್ಟಡ ನಿಮರ್ಾಣದಲ್ಲಿ ಉಂಟಾಗಿರುವ ಭ್ರಷ್ಟಾಚಾರವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿ ಸೆ. 25 ರಂದು ಮುಗು ಸೇವಾ ಸಹಕಾರಿ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ತೀಮರ್ಾನಿಸಲಾಗಿದೆ ಎಂದು ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಇ.ಕೆ.ಮುಹಮ್ಮದ್ ಕುಂಞಿ, ಕೆ.ವಿ.ಎಂ.ರಫೀಕ್, ರಹೀಂ ಮೂಲೆ, ಸಿ.ಮುಹಮ್ಮದ್, ಅಶ್ರಫ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು.
.