HEALTH TIPS

ಯಾವುದೇ ಶೀರ್ಷಿಕೆಯಿಲ್ಲ

  ಈ ಬಾರಿ ಕೇರಳೋತ್ಸವ ಇಲ್ಲ
    ಕಾಸರಗೋಡು: ಮಹಾಪ್ರವಾಹ ಸೃಷ್ಟಿಸಿದ ನಾಶನಷ್ಟ ಹಿನ್ನೆಲೆಯಲ್ಲಿ ಈ ವರ್ಷ ಕೇರಳೋತ್ಸವ ನಡೆಸದಿರಲು ಕೇರಳ ಸರಕಾರ ತೀಮರ್ಾನಿಸಿದೆ.
    ಗ್ರಾಮೀಣ ಪ್ರದೇಶಗಳ ಕಲೆ ಮತ್ತು ಕ್ರೀಡಾ ಪ್ರತಿಭಾನ್ವಿತ ಯುವಕ-ಯುವತಿಯರ ಪ್ರತಿಭೆಗಳನ್ನು ಬೆಳಕಿಗೆ ತರುವಂತೆ ಮಾಡುವ ಉದ್ದೇಶದಿಂದ ರಾಜ್ಯ ಯುವಜನ ಮಂಡಳಿ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯದಲ್ಲಿ ಪ್ರತೀ ವರ್ಷ ಸ್ಥಳೀಯ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೇರಳೋತ್ಸವ ನಡೆಸಲಾಗುತ್ತಿದೆ. ಅದರಂತೆ ಈ ವರ್ಷ ಗ್ರಾಮ ಪಂಚಾಯತ್ ಮತ್ತು ನಗರಸಭಾ ಮಟ್ಟಗಳಲ್ಲಿ ಸೆಪ್ಟಂಬರ್, ಜಿಲ್ಲಾ ಮಟ್ಟದಲ್ಲಿ ನವೆಂಬರ್ ಮತ್ತು ರಾಜ್ಯ ಮಟ್ಟದ ಕೇರಳೋತ್ಸವವನ್ನು ಡಿಸಂಬರ್ ತಿಂಗಳಲ್ಲಿ ನಡೆಸಲು ಈ ಹಿಂದೆ ತೀಮರ್ಾನಿಸಲಾಗಿತ್ತು. ಆದರೆ ಕಳೆದ ಆಗೋಸ್ತು ತಿಂಗಳಲ್ಲಿ ರಾಜ್ಯ ಮಹಾಪ್ರವಾಹದಿಂದ ಮುಳುಗಿ ಬಾರೀ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಈ ವರ್ಷದ ಕೇರಳೋತ್ಸವವನ್ನು ಕೈಬಿಡಲು ಸರಕಾರ ತೀಮರ್ಾನಿಸಿದೆ. ಪ್ರವಾಹದ ಹಿನ್ನೆಲೆಯಲ್ಲಿ ಕೇರಳದಲ್ಲಿ ಈ ವರ್ಷ ಇತರ ಯಾವುದೇ ರಾಜ್ಯ ಮಟ್ಟದ  ಮತ್ತು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ನಡೆಸದಿರುಲು ತೀಮರ್ಾನಿಸಿದೆ.
   ಮಹಾ ಪ್ರವಾಹದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವವನ್ನು ಒಂದು ದಿನ ಮತ್ತು ರಾಜ್ಯ ಮಟ್ಟದ ಶಾಲಾ ಕಲೋತ್ಸವವನ್ನು ಈ ವರ್ಷ ಎರಡು ದಿನ ಮಾತ್ರ ನಡೆಸಲು ಶಿಕ್ಷಣ ಇಲಾಖೆ ತೀಮರ್ಾನಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries