HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಮಾನವೀಯತೆಗಳಿಗಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ-ಸಂಸದ ಕರುಣಾಕರನ್
   ಬದಿಯಡ್ಕ: ರಾಜ್ಯದ ಪ್ರಾಕೃತಿಕ ವಿಕೋಪಗಳು ಮತ್ತು ಆ ಬಳಿಕದ ಸಂಕಷ್ಟಗಳಿಗೆ ರಾಷ್ಟ್ರದ ಉದ್ದಗಲದಿಂದ ಹರಿದು ಬರುತ್ತಿರುವ ನೆರವುಗಳು ಮಾನವೀಯತೆಯ ಸಂಕೇತವಾಗಿ ಆಧುನಿಕ ತಲೆಮಾರಿಗೆ ಮಾದರಿಯಾಗಿದೆ. ಜಾತಿ, ಮತ, ಧರ್ಮ, ರಾಜಕೀಯ, ಮೇಲು-ಕೀಳುಗಳ ಭಾವಗಳಾಚೆಗೆ ಜನರನ್ನು ಕಣ್ತೆರೆಸಿದ  ಮಾನವೀಯತೆಗಿಂತ ಮಿಗಿಲಾದ ಧರ್ಮ ಬೇರೊಂದಿರಲಾರದು ಎಂದು ಕಾಸರಗೋಡು ಸಂಸದ ಪಿ.ಕರುಣಾಕರನ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಸುಬ್ಬಯ್ಯಕಟ್ಟೆ ಕನ್ನಡ ಸಂಘ ಮತ್ತು ಗಡಿನಾಡ ಸಾಹಿತ್ಯ-ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಸಂಯುಕ್ತ ಆಶ್ರಯದಲ್ಲಿ ಕನರ್ಾಟಕ ಪ್ರವಾಸೋದ್ಯಮ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಕೊಡವ ಸಾಹಿತ್ಯ ಅಕಾಡೆಮಿ, ಬ್ಯಾರಿ ಹಾಗೂ ಅರೆಭಾಷೆ ಅಕಾಡೆಮಿ, ಕಲ್ಕೂರ ಪ್ರತಿಷ್ಠಾನ ಮಂಗಳೂರು, ಮೀಡಿಯಾ ಕ್ಲಾಸಿಕಲ್ಸ್, ಜಿ.ಕೆ ಚಾರಿಟೇಬಲ್ ಟ್ರಸ್ಟ್ ಬದಿಯಡ್ಕ, ಕ್ರೀಯೆಟಿವ್ ಕಾಲೇಜು ಬದಿಯಡ್ಕ ಇವುಗಳ ಸಹಯೋಗದೊಂದಿಗೆ ಬದಿಯಡ್ಕದ ಗುರುಸದನ ಸಭಾ ಭವನದಲ್ಲಿ ಶನಿವಾರ ಆಯೋಜಿಸಲಾದ ಗಡಿನಾಡ ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಕನರ್ಾಟಕ ವಿಧಾನ ಪರಿಷತ್ತು ಸಭಾಪತಿ ಬಸವರಾಜ್ ಹೊರಟ್ಟಿ ತಾವು ಕೇರಳ ಸರಕಾರದ ಪರಿಹಾರ ನಿಧಿಗೆ ತಮ್ಮ ನೆರವನ್ನು ಸಂಸದರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
   ಈ ಸಂದರ್ಭ ಬಸವರಾಜ್ ಹೊರಟ್ಟಿ ಅವರು ಮಾತನಾಡಿ, ಜನರ ಸಂಕಷ್ಟದ ಬದುಕಿನ ಜಂಜಡದಿಂದ ಒಂದಷ್ಟು ನೆಮ್ಮದಿ ನೀಡುವ ಶಕ್ತಿ ಜಾನಪದ ಕಲೆಗಳಿಗೆ ಮಾತ್ರ ಸಾಧ್ಯವಾಗುವುದು. ಜೊತೆಗೆ ಆಶ್ರಿತರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ತಾವು ಈಗಾಗಲೇ ಕೇರಳಕ್ಕೆ ವೈಯುಕ್ತಿಕವಾಗಿ ನೆರವನ್ನು ಹಸ್ತಾಂತರಿಸಿರುವೆ ಎಂದು ತಿಳಿಸಿದರು. ಅಲ್ಲದೆ ಇದೀಗ ಮತ್ತೆ ಒಂದಷ್ಟು ನೆರವನ್ನು ನೀಡುತ್ತಿದ್ದು, ಇದರಿಂದ ಪ್ರೇರಿತರಾಗಿ ಇನ್ನಷ್ಟು ಸಹಾಯದ ಕೈಗಳು ಮುಂದೆಬರಲಿ ಎಂದು ಹಾರೈಸಿದರು.
   ಕನರ್ಾಟಕದ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಆರ್.ಶಂಕರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ವಹಿಸಿದ್ದರು. ಶಾಸಕ ಎನ್.ಎ.ನೆಲ್ಲಿಕುನ್ನು, ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎಕೆಎಂ ಅಶ್ರಫ್, ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಪೋಲೀಸ್ ವರಿಷ್ಠ ಡಾ.ಎ.ಶ್ರೀನಿವಾಸ್, ಮಂಗಳೂರು ಆಕಾಶವಾಣಿಯ ಕಾರ್ಯನಿರ್ವಹಣಾಧಿಕಾರಿ ಡಾ.ಸದಾನಂದ ಪೆರ್ಲ, ಕೇರಳ ಸರಕಾರದ ಸಾಂಸ್ಕೃತಿಕ ಸಂಸ್ಥೆ ಭಾರತ್ ಭವನ್ ನ ಸದಸ್ಯ ಶಂಕರ ರೈ ಮಾಸ್ತರ್, ಕನರ್ಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮೊಹಮ್ಮದ್,ಕನರ್ಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕನರ್ಾಟಕ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟಾರ್ ಉಮರಬ್ಬ, ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬದಿಯಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್, ಹಾಲಿ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ, ಬ್ಲಾ.ಪಂ. ಸದಸ್ಯ ಅವಿನಾಶ್ ರೈ, ಚಂದ್ರಹಾಸ ರೈ ಪೆರಡಾಲಗುತ್ತು, ಬಿ. ಬಾಲಕೃಷ್ಣ ಅಗ್ಗಿತ್ತಾಯ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಝಡ್ ಎ ಕಯ್ಯಾರ್, ಶ್ರೀಕಾಂತ್ ನಾರಾಣ್ ನೆಟ್ಟಣಿಗೆ, ಹರೀಶ್ ನಾರಂಪಾಡಿ, ಶಿವದಾಸ್, ನರೇಂದ್ರ ಬದಿಯಡ್ಕ ಉಪಸ್ಥಿತರಿದ್ದರು. ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು.
    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries