HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಪುರಾಣದ ಕಥೆಗಳಲ್ಲಿ ಭಾರತೀಯ ಸಂಸ್ಕಾರ ಅಡಕ : ಪಿ.ಆರ್.ಸುನಿಲ್
     ಬದಿಯಡ್ಕ: ವಿಶ್ವಕ್ಕೇ ಗುರುವಾಗಿ ಭಾರತೀಯ ಸಂಸ್ಕಾರವಿದೆ. ನಮ್ಮ ಸಂಸ್ಕಾರ ಹಾಗೂ ಜೀವನ ಕ್ರಮಗಳು ಇತರ ಧರ್ಮಗಳಿಗಿಂತ ಭಿನ್ನವಾಗಿದ್ದು, ವೈಶಿಷ್ಟ್ಯಪೂರ್ಣವಾಗಿದೆ. ಪರಂಪರಾಗತವಾಗಿ ಸಂಸ್ಕಾರಗಳು ಮುಂದುವರಿಯುತ್ತಾ ಬಂದಿದೆ. ಅಜ್ಜ ಅಜ್ಜಿಯರು ಮಡಿಲಿನಲ್ಲಿ ಮಗುವನ್ನು ಕುಳ್ಳಿರಿಸಿ ಪುರಾಣಕಥೆಗಳನ್ನು ತಿಳಿಸುವುದರೊಂದಿಗೆ ಬಾಲ್ಯದಲ್ಲಿಯೇ ಮಕ್ಕಳು ಸನಾತನ ಧರ್ಮದ ಬಗ್ಗೆ ತಿಳುವಳಿಕೆಯನ್ನು ಹೊಂದುತ್ತಾರೆ. ಪುರಾಣದ ಕಥೆಗಳಲ್ಲಿ ಭಾರತೀಯ ಸಂಸ್ಕಾರವು ಅಡಕವಾಗಿದೆ. ಮಕ್ಕಳ ಎಳೆ ಮನಸ್ಸಿಗೆ ಧೈರ್ಯ, ಪ್ರೋತ್ಸಾಹವನ್ನು ನೀಡುವಂತಹ ಮೌಲ್ಯಯುತ, ಸಂಸ್ಕಾರಭರಿತ ಶಿಕ್ಷಣ ಸಿಗುವಂತೆ ಮಾತಾಪಿತೃಗಳು ಕಾಳಜಿವಹಿಸಬೇಕು. ಪ್ರಪಂಚದ ಅರಿವು ಅವರಿಗಾಗಬೇಕು. ಈ ನಿಟ್ಟಿನಲ್ಲಿ ಭಗವದ್ಗೀತೆ ರಾಮಾಯಣಗಳಂತಹ ಪುರಾಣದ ತಿಳುವಳಿಕೆಯನ್ನು ನೀಡುವಂತಹ ಕೆಲಸವನ್ನು ಬಾಲಗೋಕುಲಗಳು ನಿರ್ವಹಿಸುತ್ತವೆ ಎಂದು ಯುವಮೋಚರ್ಾ ರಾಜ್ಯ ಸಮಿತಿ ಸದಸ್ಯ ಪಿ.ಆರ್.ಸುನಿಲ್ ಹೇಳಿದರು.
   ನೀಚರ್ಾಲು ಸಮೀಪದ ಕುಂಟಿಕಾನ ಹರಿಶ್ರೀ ಬಾಲಗೋಕುಲ, ಜಮುನಾ ಸ್ವಸಹಾಯ ಸಂಘ, ಭಾರತಾಂಬಾ ಸ್ವಸಹಾಯ ಸಂಘಗಳ ಜಂಟಿ ಆಶ್ರಯದಲ್ಲಿ ಕುಂಟಿಕಾನ ಶಾಲಾ ವಠಾರದಲ್ಲಿ ನಡೆದ 9ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಓಣಂ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
    ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಾಲಗೋಕುಲದ ಕಾಸರಗೋಡು ಮಂಡಲ ಪ್ರಮುಖ್ ರಂಜಿತ್ ಮನ್ನಿಪ್ಪಾಡಿ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದರು.
   ಇದೇ ಸಂದರ್ಭದಲ್ಲಿ ಊರಿನ ಹಿರಿಯರಾದ ಧಾಮರ್ಿಕ ಮುಂದಾಳು, ಮಾಡತ್ತಡ್ಕ ಹರಿಹರ ಭಜನಾ ಮಂದಿರದ ಅಧ್ಯಕ್ಷ ಗೋವಿಂದ ಭಟ್ ಮಿಂಚಿನಡ್ಕ ಹಾಗೂ ಅನೇಕ ವರ್ಷಗಳ ಕಾಲ ಅಂಚೆ ವಿತರಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶಿವರಾಮ ಮಣಿಯಾಣಿ ಅವರನ್ನು ಸಮ್ಮಾನಿಸಲಾಯಿತು.
   ಬ್ಲಾಕ್ ಪಂಚಾಯತಿ ಸದಸ್ಯ ಅವಿನಾಶ್ ರೈ, ಭಾರತಾಂಬಾ ಸ್ವಸಹಾಯ ಸಂಘದ ಅಧ್ಯಕ್ಷ ಗೋಪಾಲ ಮಣಿಯಾಣಿ, ಕುಂಟಿಕಾನ ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ಭಾರತಾಂಬಾ ಸ್ವಸಹಾಯ ಸಂಘದ ಅಧ್ಯಕ್ಷ ರಾಮ ನಾಯ್ಕ ಸ್ವಾಗತಿಸಿ, ಸದಸ್ಯ ಮಹೇಶ್ ಸರಳಿ ವಂದಿಸಿದರು. ಕೋಶಾಧಿಕಾರಿ ಗಣಪತಿ ಪ್ರಸಾದ ಕುಳಮರ್ವ ಕಾರ್ಯಕ್ರಮ ನಿರೂಪಿಸಿದರು.
    ಚಿತ್ರರಚನೆ, ಪ್ರಬಂಧ, ಭಗವದ್ಗೀತೆ ಕಂಠಪಾಠ, ಛದ್ಮವೇಷ, ಸಂಗೀತಕುಚರ್ಿ, ಲಿಂಬೆಚಮಚ, ಮಡಕೆ ಒಡೆಯುವುದು, ಓಟ, ಪೂಕಳಂ(ಹೂವಿನ ರಂಗೋಲಿ), ರಸಪ್ರಶ್ನೆ, ಗೋಣಿಚೀಲ ಓಟ, ಸೂಜಿ ನೂಲು, ದೇಶಭಕ್ತಿಗೀತೆ ಸ್ಪಧರ್ೆಗಳಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಅತ್ಯುತ್ಸಾಹದಿಂದ ಪಾಲ್ಗೊಂಡರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries