HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಚಿತ್ತಾರಿ ಬಾರಿಕ್ಕಾಡು : ಸಾಂಪ್ರದಾಯಿಕ ಶ್ರೀ ಗೌರಿ ಗಣೇಶೋತ್ಸವ ಸಂಪನ್ನ
    ಕಾಸರಗೋಡು: ಪುರಾತನ ಚಿತ್ತಾರಿ ಬಾರಿಕ್ಕಾಡು ಶ್ರೀ ಮಲ್ಲಿಕಾಜರ್ುನ ದೇವಳದ ಶ್ರೀ ಗೌರೀ ಗಣೇಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಹಿರಿಯ ಕಲಾವಿದ ಪ್ರಭಾಕರ ಪಾರೇಕಡವು ಪ್ರಥಮಾರತಿ ಬೆಳಗಿ ಹಸ್ತಾಂತರಿಸಿದರು. ಶ್ರೀ ಗಣೇಶ ವಿಗ್ರಹವನ್ನು ಪ್ರಧಾನ ಅರ್ಚಕರಾದ  ಗಣೇಶ್ ಮಲ್ಲಿಗೆಮಾಡು ಹಾಗೂ ಮುರಳಿ ಸಸಿಹಿತ್ಲು ಸ್ವೀಕರಿಸುತ್ತಿದ್ದಂತೆ ಕಲಾತ್ಮಕತೆ ಮತ್ತು ಧಾಮರ್ಿಕತೆ ಮುಖಾಮುಖಿಯಾಗಿ ಭಕ್ತಿ ಕಾವ್ಯವೊಂದು ಮೂಡಿಬಂದು ಭಕ್ತಾದಿಗಳನ್ನು ಭಾವುಕರನ್ನಾಗಿಸಿತು.
   ಶ್ರೀ ಗೌರಿ ಗಣೇಶ ವಿಗ್ರಹವನ್ನು ಎರಡು ದಿನಗಳ ಕಾಲ ಶ್ರೀ ದೇವಳದ ಪ್ರತ್ಯೇಕ ಗುಡಿಯಲ್ಲಿ ಇರಿಸಿ ಹೂವಿನ ಅಲಂಕಾರದ ಜೊತೆಗೆ ಅಪ್ಪ ನೈವೇದ್ಯ ಸಮಪರ್ಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ಅರಿಶಿನ ಕುಂಕುಮ, ಬಾಗಿನ, ರವಿಕೆ ಕಣ, ಸೀರೆ, ಕರಿಬಳೆಯನ್ನು ಗೌರಿ ಮಾತೆಗೆ ಸಲ್ಲಿಸಿ ಪ್ರಾಥರ್ಿಸುವ ದೃಶ್ಯ ಸವರ್ೇ ಸಾಮಾನ್ಯವಾಗಿತ್ತು.
   ಶ್ರೀ ಮಲ್ಲಿಕಾಜರ್ುನ ದೇವಳ ಮಹಿಳಾ ವೃಂದದ ಭಜನೆ, ಅಲಂಕಾರ, ಅಚ್ಚುಕಟ್ಟುತನ, ವಾದ್ಯ ಮೇಳ, ಮಹಾಪೂಜೆ, ಅನ್ನಸಂತರ್ಪಣೆಯ ಜೊತೆಗೆ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಶ್ರೀ ಗೌರೀ ಗಣೇಶೋತ್ಸವ ವಿಗ್ರಹವನ್ನು ಕುಸುರಿ ಕೆತ್ತನೆಯ ಮರದ ಪಲ್ಲಕ್ಕಿಯಲ್ಲಿರಿಸಿ ಭವ್ಯ ಶೋಭಾಯಾತ್ರೆಯ ಮೂಲಕ ಸಾಗಿಸಲಾಯಿತು. ಸ್ವಾಗತ ಕೋರುವಂತೆ ಸುಮಂಗಲಿಯರು ಹಾದಿ ಬೀದಿಯಲ್ಲಿ ಮೂಡಿಸಿದ ಬಣ್ಣದ ರಂಗೋಲಿ ಚಿತ್ತಾರ, ತಳಿರು-ತೋರಣ ಭಕ್ತರ ಜೈಕಾರ, ಸುಡುಮದ್ದು ಪ್ರದರ್ಶನದ ನಡುವೆ ಶ್ರೀ ಗೌರೀ ಗಣೇಶ ವಿಗ್ರಹಕ್ಕೆ ಅಂತಿಮ ಆರತಿ ಬೆಳಗುವ ದೃಶ್ಯ ಹೃದಯ ಸ್ಪಶರ್ಿಯಾಗಿ ಮೂಡಿಬಂದಿತು.
   ಚಾಮುಂಡಿಗುಡ್ಡೆ ಪೇಟೆಯಲ್ಲಿ ದೇವದಾಸ್ ಆಟ್ಸರ್್ ಮತ್ತು ಸ್ಪೋಟ್ಸರ್್ ಕ್ಲಬ್ನ ಸ್ವಾಗತ ಕಮಾನು ಹಾಗೂ ಚಿತ್ತಾರಿ ಕೋಟೆಯ ಬಳಿ ಮಲ್ಲಿಕಾ ಆ್ಯಕ್ಟಿವ್ ಕ್ಲಬ್ಬಿನ ವಿಶೇಷ ಅಲಂಕಾರ, ಸುಡುಮದ್ದು ಪ್ರದರ್ಶನ ಕಣ್ಮನ ಸೆಳೆಯುವಂತಿತ್ತು. ಮುಂದೆ ಸಾಗಿದ ಸವರ್ಾಕಲಂಕೃತ ಶ್ರೀ ಗೌರಿ ಗಣೇಶ ವಿಗ್ರಹವು ದೋಣಿ ಬಾಗಿಲು ಬಳಿಯ ಚಿತ್ತಾರಿ ಹೊಳೆಯನ್ನು ಸಮೀಪಿಸುತ್ತಿದ್ದಂತೆ, ಬಾನಂಗಳದಿ ವರ್ಣಮಯ ಚಿತ್ತಾರ ಮೂಡಿತು. ಶ್ರೀ ಗಣೇಶ ವಿಗ್ರಹ ಚಿತ್ತಾರಿ ಹೊಳೆಯಲ್ಲಿ ಜಲಸ್ತಂಭನಗೊಳ್ಳುತ್ತಿದ್ದಂತೆ ತೀರದಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತಾದಿಗಳ ಜೈಕಾರ ಮುಗಿಲು ಮುಟ್ಟಿತು. ಶ್ರೀ ದೇವಳದ ಆಡಳಿತ ಸಮಿತಿಯ ಆದರ ಅಚ್ಚುಕಟ್ಟುತನ, ಮಹಿಳಾ ವೃಂದದ ಪರಿಶ್ರಮದ ನಡುವೆ, ರಾಜ್ಯ ಕಂಡ ಅತಿವೃಷ್ಠಿಯನ್ನು ಪರಿಗಣಿಸಿ ಈ ಹಿಂದಿನ ಆಡಂಬರವಿಲ್ಲದೆ ಸರಳವಾಗಿ ಆಚರಿಸಲ್ಪಟ್ಟ ಶ್ರೀ ಗೌರಿ ಗಣೇಶೋತ್ಸವವು ಸಾರ್ವಜನಿಕರೆಲ್ಲರ ಪ್ರಶಂಸೆಗೆ ಪಾತ್ರವಾಯಿತು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries