HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ನಾಟಿ ವೈದ್ಯ ಕೆ.ವಿಶ್ವನಾಥ ಅವರಿಗೆ ಪಂ.ಈಶ್ವರ ಭಟ್ಟ ಪ್ರಶಸಿ ಪ್ರದಾನ
    ಕುಂಬಳೆ: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ಇದರ ವತಿಯಿಂದ ಪ್ರತೀವರ್ಷ ಕೊಡಮಾಡುವ ಉಗ್ಗಪ್ಪಕೋಡಿ ಪಂ.ಈಶ್ವರ ಭಟ್ಟ ಪ್ರಶಸ್ತಿ (ಆಯುವರ್ೇದ ವೈದ್ಯಕೀಯದಲ್ಲಿ) ಯನ್ನು ಕುಂಬಳೆ ನಾರಾಯಣಮಂಗಲದ ಪ್ರಖ್ಯಾತ ನಾಟಿ ವೈದ್ಯ ಕೆ.ವಿಶ್ವನಾಥ ಅವರಿಗೆ ನೀಡಿ ಗೌರವಿಸಲಾಯಿತು.
    ದ.ಕ.ಜಿಲ್ಲೆಯ ಪೋಳ್ಯ ಶ್ರೀನಿವಾಸ ಸಭಾ ಭವನದಲ್ಲಿ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ರಜತೋತ್ಸವ ಸಮಾರೋಪ, ಪಂಚವಿಂಶೀಯ ವಾಷರ್ಿಕೋತ್ಸವ, ಸಂಸ್ಕೃತ ಪ್ರತಿಭಾ ಪುರಸ್ಕಾರ ಮತ್ತು ಗ್ರಂಥ ಅನಾವರಣ ಸಮಾರಂಭದಲ್ಲಿ, ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ವಿ.ಬಿ.ಅತರ್ಿಕಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಯುವರ್ೇದ ವೈದ್ಯಕೀಯದಲ್ಲಿ ಪಾರಂಪರಿಕವಾಗಿ `ಕಾಮಾಲೆ ರೋಗ (ಅರಸಿನ ಪಿತ್ತ)ಕ್ಕೆ ನಾಟಿವೈದ್ಯ ಪದ್ಧತಿಯಲ್ಲಿ ಔಷಯನ್ನು ನಾಲ್ಕು ತಲೆಮಾರಿನಿಂದ ನೀಡುತ್ತಾ ಬಂದಿರುವರು. ಫಲಾಪೇಕ್ಷೆಯಿಲ್ಲದೆ ಇವರು ಮಾಡುತ್ತಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.
  ಇದೇ ಸಂದರ್ಭದಲ್ಲಿ ಸಂಪ್ರತಿಷ್ಠಾನದ ವೈದಿಕ ಪ್ರಶಸ್ತಿಯನ್ನು ವೇದಮೂತರ್ಿ ದಭರ್ೆ ಮಹಾಬಲ ಭಟ್ ಅವರಿಗೆ, ಪ್ರೊ|ಎಂ.ಮರಿಯಪ್ಪ ಭಟ್ಟ ಪ್ರಶಸ್ತಿಯನ್ನು ಮೈಸೂರಿನ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರಿಗೆ, ವಿದ್ವತ್ ಪ್ರಶಸ್ತಿಯನ್ನು ಶಾಸ್ತ್ರಜ್ಞರಾದ ಡಾ|ಪಾದೆಕಲ್ಲು ವಿಷ್ಣು ಭಟ್ ಅವರಿಗೆ ನೀಡಿ ಗೌರವಿಸಲಾಯಿತು.
   ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ್ ಭಟ್ ಬಿ., ತಿರುಮಲೇಶ್ವರ ಭಟ್ ಮಿತ್ತೂರು, ಸದಾಶಿವ ಭಟ್ಟ ಮಿತ್ತೂರು ಉಪಸ್ಥಿತರಿದ್ದರು. ಶ್ರೀನಿವಾಸ ಭಟ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಡಾ.ವೇಣುಗೋಪಾಲ ಕಳೆಯತ್ತೋಡಿ ಸನ್ಮಾನಿತರಾದ ನಾಟಿ ವೈದ್ಯ ಕೆ.ವಿಶ್ವನಾಥರ ಪರಿಚಯವನ್ನು ಮಾಡಿದರು. ಸಭಾ ಕಾರ್ಯಕ್ರಮದ ನಂತರ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ಭೋಜನ ನಡೆಯಿತು.
   ನಾಟಿವೈದ್ಯ ಕೆ.ವಿಶ್ವನಾಥ : ಕುಂಬಳೆ ಸಮೀಪದ ನಾರಾಯಣ ಮಂಗಲ (ನಾಯ್ಕಾಪು)ದ ನಿವಾಸಿ 82 ವರ್ಷ ಹರೆಯದ ಕೆ.ವಿಶ್ವನಾಥ ಅವರು ಬಹಳ ವರ್ಷಗಳಿಂದ ಕಾಮಾಲೆ ರೋಗಕ್ಕೆ ಔಷಯನ್ನು ಕೊಡುತ್ತಿದ್ದಾರೆ. ಜೋಗಿ ಶೆಟ್ಟಿ ಮತ್ತು ಕಲ್ಯಾಣಿ ದಂಪತಿಗಳ ಪುತ್ರರಾದ ಇವರು ಅಜ್ಜನ ಕಾಲದಿಂದ ಬಂದಂತಹ ಪರಂಪರಾಗತ ಚಿಕಿತ್ಸಾವಿಧಾನವನ್ನನುಸರಿಸಿ, ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೆ ಜನಸೇವೆಯೇ ಜನಾರ್ಧನ ಸೇವೆಯೆಂಬ ನಿಟ್ಟಿನಲ್ಲಿ ಔಷಧಿಯನ್ನು ನೀಡುತ್ತಾ ಬರುತ್ತಿದ್ದಾರೆ. ದೂರದೂರದಿಂದ ಅನೇಕ ರೋಗಿಗಳು ಇವರನ್ನರಸಿ ಬರುತ್ತಿದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries